ಮಲಗೇ ಕೂಸೇ ಮಲಗೇ
ತೊಲಗೇ ಪೀಡೆ ಕನಸೇ
ಮಲಗೇ ಕೂಸೇ ಮಲಗೇ
ತೊಲಗೇ ಪೀಡೆ ಕನಸೇ
ಮಲಗೇ ಕೂಸೇ ಮಲಗೇ..
ನಿನ್ನ ಕಾವಲಿಗೆ ಕಣ್ಣ ಇಟ್ಟೇನು
ನಿನ್ನ ನೆರಳಾಗಿ ನನ್ನೇ ಕೊಡುವೇನು
ನಿನ್ನ ಕಾವಲಿಗೆ ಕಣ್ಣ ಇಟ್ಟೇನು
ನಿನ್ನ ನೆರಳಾಗಿ ನನ್ನೇ ಕೊಡುವೇನು
ಸಣ್ಣ ನಿದ್ದೆಯಲೂ, ಗಾಢ ನಿದ್ದೆಯಲೂ (2)
ಸದ್ದು ಮೂಡದ ಹಾಗೆ ಹೊದ್ದು ಕೊಂಡಿರುವೆನು..
ಮಲಗೇ ಕೂಸೇ ಮಲಗೇ (2)
ಬೇಸಿಗೆಯಲ್ಲಿ ಬೀಸಣಿಕೆ ನಾನು
ಚಳಿಗಾಲದಲ್ಲಿ ಕಾವ ಕೊಟ್ಟೇನು
ಬೇಸಿಗೆಯಲ್ಲಿ ಬೀಸಣಿಕೆ ನಾನು
ಚಳಿಗಾಲದಲ್ಲಿ ಕಾವ ಕೊಟ್ಟೇನು
ನೀ ಅತ್ತು ಕರೆವ ಆ ಒಂದು ಕರೆಗೆ (2)
ಧರೆಗಿಳಿದ ಮಳೆಯಂತೆ ಎರಗುವೆನು ನಿನ್ನ ಬಳಿಗೆ..
ಮಲಗೇ ಕೂಸೇ ಮಲಗೇ...(2)
ಬೆಳ್ಳಿ ಬಂಗಾರ ಮಿತವಾಗಿ ತೊಡಿಸಿ
ಹಿತವಾದ ನುಡಿಯ ಸಿರಿಯ ಉಣಬಡಿಸಿ
ಬೆಳ್ಳಿ ಬಂಗಾರ ಮಿತವಾಗಿ ತೊಡಿಸಿ
ಹಿತವಾದ ನುಡಿಯ ಸಿರಿಯ ಉಣಬಡಿಸಿ
ಹಾಲ್ನೊರೆಯ ಹಾಸಿ ಹೆಜ್ಜೆ ಇರಿಸುವೆನು (2)
ಜೋಗುಳವ ಹಾಡುವುದ ನಿನ್ನಿಂದ ಕಲಿತೇನು..
ಮಲಗೇ ಕೂಸೇ ಮಲಗೇ
ತೊಲಗೇ ಪೀಡೆ ಕನಸೇ
ಮಲಗೇ ಕೂಸೇ ಮಲಗೇ
ತೊಲಗೇ ಪೀಡೆ ಕನಸೇ
ಮಲಗೇ ಕೂಸೇ ಮಲಗೇ (3)
No comments:
Post a Comment