Wednesday 1 April 2020

ಕೋರಸ್ಸಿನಲ್ಲಿ ಹಾಡಿಕೊಳ್ಳಿರಿ

ಕೋರಸ್ಸಿನಲ್ಲಿ ಹಾಡಿಕೊಳ್ಳಿರಿ
ಆದಷ್ಟು ವೈರಸ್ ಇಂದ  ದೂರ ನಿಲ್ಲಿರಿ 

ರಾಗ ಯಾವುದಾದರೇನು ಹಾಡು ಮುಖ್ಯ ತಾನೆ
ತಾಳ ತಪ್ಪಿದಾಗ ಯಮನೇ ಆದ್ರೂ ಓಡುತಾನೆ
ಅಪಶೃತಿ ತುಂಬ ಮುಖ್ಯ ನಮ್ಮ ಹಾಡಲಿ
ಕೇಳಿದ ಕೂಡಲೆ ಕರೋರ ಬಿಕ್ಕಿ ಸಾಯಲಿ

ಕೋರಸ್ಸಿನಲ್ಲಿ ಹಾಡಿಕೊಳ್ಳಿರಿ
ಆದಷ್ಟು ವೈರಸ್ ಇಂದ  ದೂರ ನಿಲ್ಲಿರಿ 

ಸೋಪು ಹಾಕಿ ತಿಕ್ಕಿ ಮೊದಲು ಕೈಯ್ಯನು
ತುರಿಕೆ ಆದ್ರೂ ಕೆರೆದುಕೊಳ್ಳ ಬೇಡಿ ಮೂಗನು 
ಶೀತ-ನೆಗಡಿ-ಕೆಮ್ಮು ಎಲ್ಲ ಮುಂಚೆ ಕಾಮನ್ನು
ಈಗ ತಾವೇ ಜೀವಕಾದವಲ್ಲ ದೊಡ್ಡ ದುಶ್ಮನ್ನು
ಇಪ್ಪತ್ತ ಒಂದು ದಿನ ಇದ್ದುಬಿಡಿ ಮನೆಯಲಿ
ಅಷ್ಟರಲ್ಲಿ ಚೂರು ಕಮ್ಮಿ ಆಗಬಹುದನಾಹುತ
ಲಾಟಿ ಏಟಿಗಿಂತ ಸ್ಟ್ರಾಂಗು ವೈರಸ್ಸಿನೇಟು
ಸ್ವಲ್ಪ ಯಾಮಾರಿದ್ರೂ ಉಳಿಯೋದೇ ದೌಟು... 

ಕೋರಸ್ಸಿನಲ್ಲಿ ಹಾಡಿಕೊಳ್ಳಿರಿ
ಆದಷ್ಟು ವೈರಸ್ ಇಂದ  ದೂರ ನಿಲ್ಲಿರಿ 

ದೇಶ ದೇಶ ಗಡಿಯ ದಾಟಿ ಬಂದಿದೆ
ಮನೆಗೆ ನುಗ್ಗಿ ಹೆಗಲ ಏರಲದಕೆ ಕಷ್ಟವೇ
ಅಂಥ ಸಿಲ್ಕ್ ಬೋರ್ಡೇ ಈಗ ಸೈಲೆಂಟಾಗಿದೆ 
ರಾಜಧಾನಿ ಬೆಂಗಳೂರು ಖಾಲಿ ಖಾಲಿಯಾಗಿದೆ 
ಒಂದು ದೇಶದ ಪ್ರಧಾನಿಯನ್ನೂ ಲೆಕ್ಕಿಸದೆ ಹೋಯಿತು
ರಾಜನಾದ್ರೇ ನನಗೇನು ಅಂತ ಅಂಟಿಕೊಂಡಿತು
ಇಂಥ ಟೈಮಿನಲ್ಲೂ ಸೇವೆ ಮಾಡೋ ಡಾಕ್ಟ್ರೇ ಗ್ರೇಟು
ರಾತ್ರಿ ಹಗಲು ನಮ್ಮ ಕಾಯೋ ವೀರರೇ ಸಲ್ಯೂಟು...

ಕೋರಸ್ಸಿನಲ್ಲಿ ಹಾಡಿಕೊಳ್ಳಿರಿ
ಆದಷ್ಟು ವೈರಸ್ ಇಂದ  ದೂರ ನಿಲ್ಲಿರಿ 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...