Monday, 6 April 2020

ಇಳಿ ಹೃದಯದಲಿ ಸರಾಗ

ನನ್ನ ಜೊತೆ ನೀನಿರಲು
ಸುರಿದಂತೆ ಬೆಳದಿಂಗಳು
ಉಸಿರು ನಿಂತಾಗ ನೀ
ನೆರವಾಗು ಬದುಕಿಸಲು 
ಸದಾ ಕನಸಿನಲೂ ಬಿಡದೆ..

ನಿನ್ನೆಲ್ಲ ಆಸೆಗಳನ್ನು ಕೊಡು ನನಗೆ
ಹೇಗಾದರೂನು ಪೂರೈಸುವೆ
ನಿನ್ನಿಷ್ಟಕೆ ನಾ ಹಾಡುವೆ
ಈ ಕಣ್ಣಿನಲ್ಲೇ ಕಾಪಾಡುತ
ನೋವೆಲ್ಲವ ನಾ ನುಂಗುವೆ

ದಾರಿ ತೋಚದ ನನ್ನ ಯಾನಕೆ
ದೀಪವಾದೆ ನೀ ನಲ್ಲ
ಮೋಡಿಗಾರನೇ ನಿನ್ನ ಮಾತಿಗೆ
ಸೋತು ಹೋದೆ ಸುಳ್ಳಲ್ಲ
ನಡೆಯುವೆ ಕೊನೆವರೆಗೆ
ಕೊಡುತಲಿ ಸಿಹಿಯ ನಗೆ
ಇದೇ ಥರ ಇರು
ನೂರಾರು ಬೆರಗುಗಳ ತರೋ
ಮಳೆಯಂತೆ ಧರೆಗೆ.. ಆಆಆ

ದೂರ ದೂರ ಸಾಗಿ ನಿಂತೆವು
ಇನ್ನೂ ಹತ್ತಿರಕ್ಕೆ ಬಂದೆವು
ಇದು ಕನಸೆಲ್ಲವೂ 
ನನಸಾಗುವ ಸಮಯ 
ಇಳಿ ಹೃದಯದಲಿ ಸರಾಗ..

ರಂಗೋಲಿ ಗೀಚಿರುವೆ ಎದೆ ಬಾಗಿಲಲಿ
ನೀ ಬಂದ ಮೇಲೆ ರಂಗೇರಿದೆ
ಸಿಂಗಾರಕೆ ಸಜ್ಜಾಗಿದೆ
ನೀ ನೆಟ್ಟು ಹೋದ ಹೂದೋಟದಿ
ಹೂ ಬೀರಲು ಮುಂದಾಗಿದೆ...

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...