Wednesday, 1 April 2020

ಯಾರೊಂದಿಗೆ ನಾ ಹೇಳಲಿ

ಯಾರೊಂದಿಗೆ ನಾ ಹೇಳಲಿ
ನೂರಾರಿವೆ ಭಾವನೆ, ನೀನೊಮ್ಮೆ
ಮಾತಾಡಿಸು ಈ ಗಾಯಕೆ
ನೀನಾಗಬೇಡ ಹೊಣೆ, ಮತ್ತೊಮ್ಮೆ
ಈಗಾಗಲೇ ತಪ್ಪಾಗಿದೆ
ಸಾಲೆಲ್ಲವೂ ಚಿತ್ತಾಗಿದೆ
ಗೊತ್ತಾಗದೆ ಎದೆಯಲ್ಲಿ ನೋವನ್ನು 
ಹೊತ್ತಂತೆ ಹೀಗೇಕೆ ಒದ್ದಾಡಿಹೆ..

ಅನಿರೀಕ್ಷಿತ ಹುಟ್ಟೋದು ಈ ಪ್ರೀತಿ
ತರಬೇತಿ ಕೊಡಬಾರದೇ
ಪರದಾಟಕೂ ಸರಿಯಾದ ಸಮಯಕ್ಕೆ
ಪರಿಹಾರ ಸಿಗಬಾರದೇ
ಬಲಹೀನರೇ ಬಲೆಯಲ್ಲಿ ಸಿಲುಕೋದು
ಅನ್ನೋದು ರೂಢಿಗತ
ಅನುಮಾನವೇ ಇಷ್ಟೆಲ್ಲ ನಡೆವಾಗ
ನಿನ್ನನ್ನು ತಡೆ ಹಾಕಿತಾ?
ಒದ್ದಾಟಕೂ ಮಿತಿಯಿಲ್ಲವೇ
ಕದ್ದಾಲಿಸೋ ಮನಸಿಲ್ಲವೇ
ಕೊಡಬಾರದೇ ಹೃದಯಕ್ಕೆ ಮತ್ತೊಂದು
ಅವಕಾಶವ ಎಂದು ಒದ್ದಾಡಿಹೆ..

ಕಣ್ಣಂಚಲಿ ಬರಬೇಡ ಹನಿಯಾಗಿ
ಬಾಯಾರಿದೆ ಕೆನ್ನೆಯು
ತಂಗಾಳಿಯ ತರಬೇಡ ಉರಿವಾಗ
ಎದೆ ಗೂಡಲಿ ಜ್ವಾಲೆಯು
ಈ ದೂರವ ಅಳೆಯೋಕೆ ಬರುವಾಗ
ಬಹು ಬೇಗ ಕೊನೆಗಾಣಿಸು
ಶರಣಾಗುವೆ ಋಣಿಯಾಗಿ ಒಲವಲ್ಲಿ
ಖುಷಿಯೊಂದ ದಯಪಾಲಿಸು
ಆಲಾಪವೇ ಮುಂದಾಗಿಸು
ಆನಂತರ ನಾ ಹಾಡುವೆ
ಸಂಗೀತವೂ ಸಂಗಾತಿಯ ಬೇಡೆ
ನಿನ್ನನ್ನು ನೆನೆಯುತ್ತ ಒದ್ದಾಡಿಹೆ..

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...