Tuesday, 7 April 2020

ಅಂಬರದ ತುಂಬ

ಅಂಬರದ ತುಂಬ ನಿನ್ನ ಹೆಜ್ಜೆ ಗುರುತು ಸಂಜೆ ಮೂಡಿದಂತೆ
ಕಿಟಕಿಯ ಗಾಜಿನಲ್ಲಿ ಹನಿಯು ನಿನ್ನ ಹೆಸರ ಗೀಚಿದಂತೆ (೨)
ನಿಧಾನಿಸದೆ ಆsss, ಕಾಣಿಸು ಬೇಗ 
ಮಿಡಿಯುತಿದೆ ನನ್ನ ಹೃದಯ 
ನೀನೊಮ್ಮೆ ಕೇಳಿ ಮೊರೆಯ 
ನೀ ನಿಜವೆಂದು ಹೇಳಿ ಮರೆಯಾಗು ಓ..
ಅಂಬರದ ತುಂಬ ನಿನ್ನ ಹೆಜ್ಜೆ ಗುರುತು ಸಂಜೆ ಮೂಡಿದಂತೆ
ಕಿಟಕಿಯ ಗಾಜಿನಲ್ಲಿ ಹನಿಯು ನಿನ್ನ ಹೆಸರ ಗೀಚಿದಂತೆ

ಮರಳಿನ ಮೇಲೆ ಪ್ರಣಯದ ಬರಹ, ಅಲೆಗಳು ಕೇಳಿಸಿವೆ 
ಹುದುಗಿದ ಭಾವಗಳ ಚಿಪ್ಪನು ತೆರೆದು ಉಸಿರ ತುಂಬಿರುವೆ 
ಓ..  ಮರಳಿನ ಮೇಲೆ ಪ್ರಣಯದ ಬರಹ, ಅಲೆಗಳು ಕೇಳಿಸಿವೆ 
ಹುದುಗಿದ ಭಾವಗಳ ಚಿಪ್ಪನು ತೆರೆದು ಉಸಿರ ತುಂಬಿರುವೆ 
ಎದುರಾದರೆ ನೀ, ಹಗುರಾಗುವೆನು
ಸ್ವರ ಸಂಚಯಕೆ ಜೊತೆಯಾಗುವೆನು 
ಹೇಗಾದರೂ ಕನಸನು ನನಸು ಮಾಡೆಯಾ? (೨)
ಮಿಡಿಯುತಿದೆ ನನ್ನ ಹೃದಯ 
ನೀನೊಮ್ಮೆ ಕೇಳಿ ಮೊರೆಯ
ನೀ ನಿಜವೆಂದು ಹೇಳಿ ಮರೆಯಾಗು ಓ..
ಅಂಬರದ ತುಂಬ ನಿನ್ನ ಹೆಜ್ಜೆ ಗುರುತು ಸಂಜೆ ಮೂಡಿದಂತೆ
ಕಿಟಕಿಯ ಗಾಜಿನಲ್ಲಿ ಹನಿಯು ನಿನ್ನ ಹೆಸರ ಗೀಚಿದಂತೆ... 

ಮುಗಿಯದ ಮಾತೊಂದು ಕಣ್ಣಲಿ ಜಿನುಗಿ ಖುಷಿಯಲಿ ಜಾರುತಲಿದೆ 
ಮರಳಿ, ಮರಳಿ ಮರುಳಾಗಿಸುತ ಸುಮ್ಮನೆ ಕಾಡುತಿದೆ 
ಓ... ಮುಗಿಯದ ಮಾತೊಂದು ಕಣ್ಣಲಿ ಜಿನುಗಿ ಖುಷಿಯಲಿ ಜಾರುತಲಿದೆ 
ಮರಳಿ, ಮರಳಿ ಮರುಳಾಗಿಸುತ ಸುಮ್ಮನೆ ಕಾಡುತಿದೆ 
ಎದುರಾದರೆ ನೀ, ಹಗುರಾಗುವೆನು
ಸ್ವರ ಸಂಚಯಕೆ ಜೊತೆಯಾಗುವೆನು 
ಹೇಗಾದರೂ ಕನಸನು ನನಸು ಮಾಡೆಯಾ? (೨)
ಮಿಡಿಯುತಿದೆ ನನ್ನ ಹೃದಯ 
ನೀನೊಮ್ಮೆ ಕೇಳಿ ಮೊರೆಯ
ನೀ ನಿಜವೆಂದು ಹೇಳಿ ಮರೆಯಾಗು ಓ..
ಅಂಬರದ ತುಂಬ ನಿನ್ನ ಹೆಜ್ಜೆ ಗುರುತು ಸಂಜೆ ಮೂಡಿದಂತೆ
ಕಿಟಕಿಯ ಗಾಜಿನಲ್ಲಿ ಹನಿಯು ನಿನ್ನ ಹೆಸರ ಗೀಚಿದಂತೆ... 

No comments:

Post a Comment

ಈ ಬಿರು ಬಿಸಿಲಲ್ಲೂ ಕಂಗೊಳಿಸುವೆಯಲ್ಲ

ಈ ಬಿರು ಬಿಸಿಲಲ್ಲೂ ಕಂಗೊಳಿಸುವೆಯಲ್ಲ ನೀ ಖಂಡಿತ ಈ ಗ್ರಹದವಳಲ್ಲ ನಕ್ಷತ್ರಗಳ ಊರು? ಬಂಗಾರದ ಸೂರು? ಅಷ್ಟಲ್ಲದೆ ನಿನ್ನ ಹಾಗೆ ಕಾಣುವವರಿಲ್ಲ ಆಗೋ ಆ ಹಣೆಯಲ್ಲಿ ಬೆವರು ಜಿನು...