Saturday, 25 April 2020

ಮಾಸ್ಕನು ಧರಿಸಲು ಮೇಕಪ್ ಅಳಿಯಿತು

ಮಾಸ್ಕನು ಧರಿಸಲು ಮೇಕಪ್ ಅಳಿಯಿತು
ಈಗೇನ್ಮಾತಾಳೋ ಇವ್ಳು
ಲಿಪ್ಸ್ಟಿಕ್ ಇಲ್ಲದೆ ಮನಸೇ ಇಲ್ಲ 
ಮನೆಯಿಂದ ಹೊರ ಹೋಗಲು
ಈಗ ಬೀಳ್ತಾವೆ ಸುಮ್ನಿರಿ, ಮುಂದೆ ಆಗೋದ್ನ ನೋಡ್ತಿರಿ
ಅದೆಂತ ಫಾರಿನ್ ಬ್ರಾಂಡೇ ಆದ್ರೂ ರೂಮಲ್ಲೇ ಲಾಕಾಗಿದೆ
ಅದೆಷ್ಟು ಶಾಪ ಬಿತ್ತೋ ಪಾಪ ಪಾರ್ಲರ್ರು ಮುಚ್ಕೊಂಡಿದೆ..

ಕ್ರೀಮು ಪೌಡರ್ ಅಂತ, ಆದ್ದದ್ದಿ ಉಜ್ಕೊಂಡು
ಬ್ಯಾಗಲ್ಲೂ ಇಟ್ಕೊಂಡು, ಟಚ್ಚಪ್ಪು ಕೊಡ್ತಿದ್ರಲ್ಲ..
ಬಾಗಿಲ ಆಚೆಗೆ ಬಂದರೆ
ಸೂರ್ಯನ ಕಣ್ಣಿಗೆ ಬಿದ್ದರೆ
ಜಾರಿ ಬಂತು ನೋಡಿ ಅಲ್ಲಿ ಬೆವ್ರು ಸಾಲು
ಮೂಡಿ ಬಿಟ್ಟು ಕಾಲುವೆ
ಕಣ್ಣೀರಲ್ಲಿ ಕಾಡಿಗೆ ಕರಗದಂತೆ 
ರೀಸರ್ಚು ನಡ್ಸೇ ಇಲ್ಲವೇ?
ಲಕ ಲಕ ಲಕ, ಅದೇ ಹಳೆ ಮುಖ
ಅದ್ಯಾರ ಕಣ್ಣು ಬಿದ್ದು ಡಿಸ್ಕೋ ಪಬ್ಬೆಲ್ಲ ಕ್ಲೋಸಾಗಿದೆ
ಅದೇನೇ ಕಷ್ಟ ಬಂದ್ರೂ ಹೆಂಡ್ತೀರತ್ರಾನೇ ಹೇಳ್ಬೇಕಿದೆ.. ತಥೇರಿಕೆ...

ಚ್ಯಾಲೆಂಜ್ ಅಂತ ಕೊಟ್ರೆ, ಶಿಸ್ತಾಗಿ ಡಿಪಿಗೆ 
ಅಂತಾನೇ ಮೇಕಪ್ಪು ಮಾಡ್ಕೊಂಡು ಕೂರ್ತೀರಲ್ಲ
ಬಾಡಿಗಿ ಕಟ್ಟಲು ಇಲ್ಲದೆ
ನೆಟ್ಟಗೆ ಬೇಳೆಯೂ ಬೇಯದೆ
ಶೋಕಿ ಮಾಡಿಕೊಂಡೇ ಹೊಟ್ಟೆ ತುಂಬಿಕೊಂಡ್ರೆ
ಗ್ಯಾಸ್ಟ್ರಿಕ್ಕು ಆಗೋದಿಲ್ಲವೇ?
ರಾತ್ರಿ ಎಲ್ಲ ಟಿಕ್ಕು-ಟಾಕಿನಲ್ಲೇ ಜೀವ್ನ
ಲೈಕ್ಸು ಬೀಳುತಿಲ್ಲವೇ..
ಪುಕ ಪುಕ ಪುಕ... ಎದೆ ತುಂಬ ದುಃಖ
ಒಂದೊಳ್ಳೆ ಕನ್ಸು ಬೀಳೋದಕ್ಕೂ ಎಷ್ಟೋಂದು ಟೈಮಾಗ್ತದೆ
ಇದೊಂದೇ ಬಾಕಿ ಇತ್ತು ಅಂತ ಬೈಗುಳ ಬೀಳ್ತಾಯಿದೆ...


https://soundcloud.com/bharath-m-venkataswamy/8kk5ip21cent

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...