ಮೋಡದಾಚೆಯೆಲ್ಲೋ ಒಂದು ಗೂಡು ಕಟ್ಟುವೆ
ಪ್ರೀತಿಯಿಂದ ನಿನ್ನ ಹೊತ್ತು ಹಾರಿ ಹೋಗುವೆ
ರೆಕ್ಕೆ ಪಡೆದಾಗಿಯೂ ಹಾರದೆ ಏಕೆ ಉಳಿಯುವೆ?
ಈ ದಾರಿಗಳೆಲ್ಲವೂ ಮುಳ್ಳಿನ ದಾಳಿ ಮಾಡಿವೆ
ಬಾ ದಾಳಿಗೆ ಸಿಕ್ಕದೆ, ಬೇಲಿಯ ದಾಟುತ, ನನ್ನನ್ನು ಕೂಡಲೂ
ಈ ಭೂಲೋಕವೆಂದರೆ, ನೂರಾರು ತೊಂದರೆ, ನಾವಿಲ್ಲಿ ಬಾಳಲು...
ಮೋಡದಾಚೆಯೆಲ್ಲೋ ಒಂದು ಗೂಡು ಕಟ್ಟುವೆ
ಯಾರೂ ಇಲ್ಲದೂರಿನಲ್ಲಿ ನಾವೇ ಅಲ್ಲವೇ
ಕಣ್ಣಲ್ಲಿ ನಿನ್ನನು ತುಂಬುತ ಕಾಲ ಕಳೆಯುವೆ
ಆ ನಿನ್ನ ತೊಳಲಿ ಸೋಲುತ ಲೋಕ ಮರೆಯುವೆ
ಉಣಬಡಿಸುವೆ ಒಲವಿನ ಸವಿ
ನೀಡು ಸಹಮತವನು
ಪ್ರತಿ ಉಸಿರಿನ ಒಳ ಹರಿವಲಿ
ನಿನ್ನ ಸೇವಿಸುವೆನು
ಬಾ ಗಡಿಯನ್ನು ದಾಟುತಾ, ಸುಳಿಯನ್ನು ಸೀಳುವ, ಜೊತೆಯಲ್ಲಿ ಇಬ್ಬರೂ
ನಾ ಬೆಂಗಾವಲಾಗುವೆ, ನಿನ್ನನು ಕಾಯುವೆ, ನೀನೆಲ್ಲೇ ಹೋದರು..
ಯಾಕೆ ಬೆವರುವೆ ನಾಳೆಗಳನು ನೆನೆಯುತ
ನಾನೇ ಇರುವೆನು ಗೋಜಲುಗಳ ಬಿಡಿಸುತ
ಮೋಡದಾಚೆಯೆಲ್ಲೋ ಒಂದು ಗೂಡು ಕಟ್ಟುವೆ
ಪ್ರೀತಿಯಿಂದ ನಿನ್ನ ಹೊತ್ತು ಹಾರಿ ಹೋಗುವೆ
ಬರುವುದು ಬರಲಿ, ಎದುರಿಸಿ ನಿಂತು
ಸಾಗುವ ಮುಂದೆ, ಒಲವಿಗೆ ಸೋತು
ಈಗಲಾದರೂ ನೀ ನನ್ನ ನಂಬಬಾರದೇ
ನಿನ್ನ ಪ್ರೇಮವಿಲ್ಲದೆ ನಾ ಹೇಗೆ ಬಾಳುವೆ
ನೀರಾಗುವೆ
ಕರಗುತ ಕಣ್ಣಲ್ಲಿ ನಿನ್ನ ಉರುಳಿಸಿ
ಹೇಗಾದರೂ ಬಂದು ನೀ ಬದುಕಿಸು ಒಲವ ಜ್ಞಾಪಿಸಿ....