Posts

Showing posts from May, 2016

ಕಡಲೂರ ಕಿನಾರೆಯಲ್ಲಿ

ಕಡಲೂರಕಿನಾರೆಯ
ಒಡಲೆಲ್ಲಬಸಿದರೂ
ಸಿಕ್ಕದ್ದುಮೂರೇಮುತ್ತು

ಅದತೂತುಜೇಬಿಗೇರಿಸಿ
ಹೆಕ್ಕಿದಲ್ಲೇಉದುರಿಸಿ
ಬರುವೆದಿನದಮೂರೂಹೊತ್ತು

ಮುತ್ತೆಲ್ಲಿ? ಎಂದುನೀ
ಇತ್ತಲ್ಲ!! ಎಂದುನಾ
ತಡಕಾಡುವೆಜೇಬಕಿತ್ತು

ಅತ್ತನಿನ್ನಕಣ್ಣಒಳಗೆ
ಪೋಣಿಸುತ್ತಹಾರವನ್ನೇ
ಉರುಳಿಸಿದೆನನ್ನಉಸಿರಅತ್ತು

ಕಣ್ಣಿಗೊಂದು, ಗಲ್ಲಕೊಂದು
ಹಣೆಗೆಒಂದು, ತುಟಿಗೆಒಂದು
.
.
.
ಕತ್ತಿಗೊಂದತರುವೆನೆಂದೆಮುತ್ತ

ಕಡಲೂರಕಿನಾರೆಯಲ್ಲಿ
ಮುತ್ತತೆಗೆಯಲೆಂದುಹೊರಟೆ
ಮತ್ತದೇಅಂಗಿಯನ್ನುತೊಟ್ಟು!!

                           - ರತ್ನಸುತ

ಹೀಗೂ ಬದುಕಿದ್ದೆವು

ದಢಾರನೆಮುಚ್ಚಿಹೋದಳು
ಬಾಗಿಲಂಚಿಗೆಹೃದಯಸಿಲುಕಿದವನಂತೆ
ನಗುತ್ತಲೇಯಥಾಸ್ಥಿತಿಗೆತಲುಪಿ
ಎದೆನೀವಿಕೊಳ್ಳುತ್ತಿದ್ದೇನೆ
ಹೆಪ್ಪುಗಟ್ಟಿದಕಣ್ಣುಗಳಿಗೆಕೆನ್ನೆಗಳಗಡಿಪಾರು
ಒಂದುಹನಿಉರುಳಿದರೂಅನಾಹುತ!!

ಬಾಗಿಲುಬಡಿದರಬಸಕ್ಕೆ
ಉಪ್ಪರಿಗೆಬಿರುಕುಬಿಟ್ಟಿರಬಹುದೇ?!!
ಅವಳುಅಷ್ಟುಗಟ್ಟಿಯಾಗಿದ್ದಾಳೆಯೆಂದರೆ
ಯಾವುದೋನೋವುಪಕ್ವವಾಗಿ
ಅವಳಹದ್ದಿನಂತೆಕುಕ್ಕಿ-ಕುಕ್ಕಿಕೊಲ್ಲುತ್ತಿರಬೇಕು,
ನಾನೇಗಾಂಭೀರ್ಯಮರೆತುನಡೆದುಕೊಂಡೆ
ಚೂರುನಾಟಕವಾಡಿದ್ದರೂನಡೆಯುತ್ತಿತ್ತು!!

ಸಂಬಂಧಗಳುಹತ್ತಿರವಿದ್ದಷ್ಟೂಸಮಸ್ಯೆ
ದೂರುಳಿದರಂತೂಅದಕ್ಕೂಮೇಲೆ
ಹಾಗಾಗಿಆಗಾಗಸಾಮಿಪ್ಯದಲ್ಲೇಅಂತರವಿಟ್ಟು
ಅಂತರದಲ್ಲೇಸನಿಹದಲ್ಲಿರುವುದೊಳಿತು
ಎಷ್ಟೇಆಗಲಿಮನುಷ್ಯನೂಮಂಗನಂತಲ್ಲವೇ?
ಬುದ್ಧಿಕೊಂಬೆಯಿಂದಕೊಂಬೆಗೆಜಿಗಿಯುತ್ತಲೇಇರುತ್ತೆ!!

ಮನೆಬಿರುಕುಮೂಡುವುದಕ್ಕೆ
ಮನಸುಗಳಸಣ್ಣಕಂಪನಗಳೇಸಾಕಲ್ಲ?
ಈಕಣ್ಣೀರುಜಲಪ್ರಳಯವನ್ನೇಉಂಟುಮಾಡಬಹುದು
ಬಿಕ್ಕಳಿಕೆಎಂಥಖುಷಿಗಳನ್ನೂಬಾಧಿಸಬಹುದು.
ಎಲ್ಲಕ್ಕೂನಿರುತ್ತರಮೌನವೇಉತ್ತರವಾಗಬಹುದು!!

ವಿಮುಖವಾಗಿದಿನವಿಡಿನಡೆದು
ವಿಮುಖರಾಗಿಒಂದೇಹಾಸಿಗೆಯಲ್ಲಿಮಲಗಿದಾಗ
ಪ್ರಮುಖವಾದಕನಸುಗಳೆಲ್ಲಕೈಕಟ್ಟಿ
ನಮ್ಮಿಂದದೂರುಳಿದುಬಿಟ್ಟಾಗ
ಕೂಡಿಕಟ್ಟಿದಕನಸಿನಅರಮನೆಯಲ್ಲೊಂದು
ಅನಾಮಿಕಗೋರಿತಲೆಯೆತ್ತುವುದುಸಹಜ,
ಅದುನಾಳೆದಿನನಮ್ಮನೋಡಿಉಸಿರುಗಟ್ಟಿನಕ್ಕಾಗ
ಮುಜುಗರಕ್ಕ

ಮನಭಾರ

ನಿರ್ಭಾವುಕನಾಗಿಉಳಿದುಬಿಡುತ್ತೇನೆ
ನನ್ನವರನೋವಕಂಡು
ಕಾರಣಕೇಳುವವರೆದುರುಚೀರಬಯಸುವದನಿ
ಗಂಟಲಿಗಂಟಿಕೊಂಡಂತೆ... ಮೌನ!!

ಕೆಲವುಸಂಗತಿಗಳಮೌನವೇನಿಭಾಯಿಸಬೇಕು
ದೇವರುಮೌನವನ್ನಾದರೂಸೃಷ್ಟಿಸಿರುವುದೇತಕ್ಕೆ,
ಸಮಯಕ್ಕೆಅನುಕೂಲವಾಗಲೆಂದೋ? ಅಥವ...

ಎಲ್ಲಿದಾರಿಬಿಡಿ
ಎಲ್ಲವನ್ನೂಒಮ್ಮೆಲೆಕಕ್ಕಿಬಿಡುತ್ತೇನೆ
ಕಸಿ-ವಿಸಿಗೊಂಡನಿಮ್ಮಲ್ಲಿಕ್ಷಮೆಕೋರಿ
ವ್ಯಾಕ್.. ವ್ಯಾಕ್...

ಎಂಥಸ್ವಾರ್ಥವಲ್ಲವೇನನ್ನದು
ನನಗನಿಸಿದ್ದನ್ನಕವಿತೆಯಾಗಿಸಿಕೊಂಡು
ಅನಿಸಿಕೆಗಳಜೀವಂತವಾಗಿಸಿಕೊಳ್ಳುತ್ತೇನೆ.
ಕವಿತೆಕಟ್ಟಿದಕೈಗಳುನಡುಗಿಸತ್ತು
ಈಗವಿರಮಿಸುತ್ತಿವೆಯಾದರೂ
ಕೋಟಿಕಂಪನಗಳಎಬ್ಬಿಸಿದಹೃದಯ
ಇನ್ನೂನಡುಗುವುದಬಿಟ್ಟಿಲ್ಲ...

ಎಲ್ಲಹಂಚಿಕೊಂಡುಹಗುರಾಗಲು
ಖಾಲಿಉಳಿದವರಾದರೂಯಾರು?
ಎಲ್ಲರೂಭಾರಕ್ಕೆಬೆನ್ನುಕೊಟ್ಟವರೇ, ಅಲ್ಲವೇ?!!

                                              - ರತ್ನಸುತ

ಕವಿತೆ ಕಟ್ಟುತ...

ಅವಳುಕಿಟಕಿತೆರೆದಳು
ಒಂದೊಂದೇಹನಿ
ಗಾಜಿಗಂಟಿದಧೂಳನ್ನುತೊಳೆದು
ಸದ್ದುಬದಲಿಸುತ್ತಲೇಇತ್ತು

ಅವಳುನನ್ನಕೈಹಿಡಿದಳು
ಗುಡುಗಬಹುದಾದಸಾಧ್ಯತೆಗೆ,
ಮಿಂಚಷ್ಟೇಕಂಡದ್ದು
ಗುಡುಗೂಸದ್ದಿಲ್ಲದಂತೆದೂರುಳಿದು
ಹತ್ತಿರವಾಗಿಸಿತುಎದೆಗಳ

"ಹೃದಯಗಳುಮಾತನಾಡಿಕೊಳಲಿಬಿಡಿ
ತುಟಿಗಳಿಗೆತ್ರಾಸುಕೊಡದೆ
ಮೌನವಾಗಿಸಲಿದುಸಮಯ" ಅಂದಳು
ನನಗೆಲ್ಲಅರ್ಥವಾದಂತೆನಕ್ಕೆ
ಒಗಟು-ಒಗಟಾಗಿ

ಮಳೆಜೋರಾಗಿ, ನಿಂತು
ನಿಂತಷ್ಟೇಜೋರಾಯಿತು
ಹೃದಯಗಳುಚೂರಾಯಿತು
ಅಲ್ಲಲ್ಲಪ್ರಾಸಕ್ಕಾಗಿಚೂರಾದದ್ದಲ್ಲ
ಚೂರಾದದ್ದುಖರೆ
ಒಂದುನೂರುಬಾರಿಯಾದರೂ
ಆದರೂಸ್ಥಿಮಿತದಲ್ಲಿದದ್ದುಅಚ್ಚರಿ!!

"ಹೇರಿದಕವಿತೆರಾಡಿಯಂತೆ
ಆವರಿಸಬೇಕುಮೋಡದಂತೆ"
ಹೀಗಂದೊಡನೆನಿಮಿರಿತುಆಕೆಯಕಿವಿ
ಅಲ್ಲವೇನಾನೂಒಬ್ಬಕವಿ?
ಆಚೆಮಳೆಜೋರಾಯಿತು
ಒಂದುಅಮೋಘವರ್ಷಧಾರೆ
ಆಕೆಯಗಮನವೆಲ್ಲಆಕಡೆಗೆ
ನನ್ನದೂ...

                                     - ರತ್ನಸುತ