Posts

Showing posts from June, 2012

I love u ಅಮ್ಮ

ಅಕ್ಷರದ ಮೊದಲ ಅಕ್ಷರವೂ "ಅ"ಕಾರವೇ ಜೀವನದ ಮೊದಲ ಅಕ್ಷರವೂ "ಅ"ಕಾರವೇ ಕೂಗಿನ ಕೊರಳ ಕೊನೆಗೆ ಮಮಕಾರದ "ಮ"ಕಾರ ಜೀವನದ ಕನೆ ಅಕ್ಷರ, ಮರಣದಲ್ಲೂ "ಮ"ಕಾರವೇ
ಅಮ್ಮ ಎಂಬ ಎರಡು ಅಕ್ಷರವೇ ಜೀವನ ಆರಂಭದಿಂದ ಅಂತ್ಯವರೆಗೆ ಎಂಬುದದರರ್ಥ ಕರೆಸುಕೊಂಡು ಆಕೆ ಎಷ್ಟು ಹಿಗ್ಗುವಳೋ ನಾ ಕಾಣೆ ಕೂಗಿಕೊಂಡ ಕೊರಳ ಪ್ರಯತ್ನಕಿಲ್ಲ ವ್ಯರ್ಥ 
ಶೀತ ಗಾಳಿ ಸೋಕದಂತೆ ಹಬ್ಬಿ ನಿಂತ ಪರ್ವತ  ಆಕೆಯ ಮಡಿಲಲ್ಲಿ ನಾ ಕಂಡದ್ದು ಸರ್ವತಾ ಮೇಲ್ನೋಟಕೆ ಆಕೆಯ ತುಟಿ ಅರಳಿ ನಮ್ಮ ನಗಿಸಿತು  ಎದೆಯಾಳದಲ್ಲಿ ಸಹಿಸಿರುವಳು ಚಂಡಮಾರುತ
ಪ್ರೀತಿಯ ಕೈತುತ್ತೆ ಎಲ್ಲ ಖಾಯಿಲೆಗೆ ಔಷದಿ ಸೋಲುತ್ತಲೇ ಗೆಲ್ಲುವಳು ಬಾಳಿನೆಲ್ಲ ಆಟದಿ  ಕಂಡ ಕನಸ ಮುಗಿಲುಗಳಿಗೆ ಆಕೆ ಹಿಡಿದ ಅಂಬರ ಬೆಳಕಿಲ್ಲದ ಮನೆಯಲ್ಲೂ ಅವಳಿದ್ದರೆ ಸುಂದರ
ಒಮ್ಮೆಮ್ಮೆ ದೂರಾಗಲು ಕಣ್ಣೀರಲಿ ಕಾಣ್ವಳು ಎಚ್ಚೆತ್ತುಕೊಂಡೆ ಕೂಗಿ ಕನಸಿನಲ್ಲಿ ಬೀಳಲು ಒಂದು ಮಾತನಾಡಿದರೆ ಸತ್ತ ಬಲಕು ಬೆಂಬಲ ಅವಳ ಹಾದು ಗೆಲುವು ಕಾಣುವುದೇ ಮನದ ಹಂಬಲ
ಬೆನ್ನ ಹಿಂದೆ ನೆರಳು ಆಕೆ ಬೆನ್ನ ತಿಕ್ಕಿ ತೊಳೆಯುವಾಕೆ ಎಲ್ಲ ಹಂಚಿಕೊಳ್ಳಬಹುದಾದ ಬಾಳ ಸಂಗಾತಿ ಎಷ್ಟು ಜನ್ಮ ಪಡೆದು ಅವಳ ಋಣವ ತೀರಿಸೋಕೆ ಸಾಧ್ಯ ಮನದ ಮನೆಯ ಗರ್ಭಗುಡಿಗೆ ಅವಳೆ ಧೈವ ಮೂರುತಿ........
                                                          -- ರತ್ನಸುತ

ಭಾವವೇಣಿ

ಆ ಕಣ್ಣಿಗೆ ಸೋತ ಬಗೆಯ ಹೇಗೆಂದು ಬಣ್ಣಿಸಲಿ ವಿಸ್ಮಯತೆಯ ಉತ್ತುಂಗವ ಮುಟ್ಟಿ ಬಂದೆ ಅಂದು ಎಲ್ಲವ ಮರೆತಂತಾಗಿದೆ ಹಾಗೆ ಕಣ್ಣು ಮುಚ್ಚಲಿ ನೂರು ಭಾವಗಳನು ಮೀರಿ ಮಿನುಗಿತೊಂದು ಬಿಂದು
ನುಡಿಗಳ ಗಮನಿಸುತ್ತ ಗಮಕಗಳ ಕಲಿತುಕೊಂಡೆ ರೆಪ್ಪೆ ಬಡಿತಕ್ಕೆ ಮೂಡಿತೆನಗೆ ತಾಳದರಿವು ಹುಡುಕಾಡಿದ ನೋಟ ಹಿಡಿದು ಸ್ವರಗಳ ಪರಿಚಯವಾಗಿ  ಹೊಮ್ಮಿ ಬಂದ ಹೊಸ ಹಾಡಿಗೆ ಸಿಕ್ಕಾಯಿತು ತಿರುವು 
ಆ ಸ್ಪೋಟಕ ನೋಟ ಬಾಣ ಒಂದರ-ಹಿಂದೊಂದರಂತೆ ಮನಸೊಳಗೆ ನಾಟಿ ಶರಪಂಜರ ಗಿಳಿ ನಾನಾದೆ ಸಿಕ್ಕಿ ಬಿದ್ದ ನನ್ನ ಕಡೆಗೆ ಮತ್ತೆ ಆಕೆ ತಿರುಗದಿರಲು ನೀರಿನಿಂದ ಹೊರ ತೆಗೆದ ಒದ್ದಾಡಿದ ಮೀನಾದೆ 
ಆಕಾಶದ ನೀಲಿ ಅವಳ ಕಣ್ಣುಗಳ ಹೋಲುತಿತ್ತು  ನಡುವೆ ಅಡ್ಡಿ ಪಡಿಸಿದ ಮುಂಗುರುಳೆ ಕರಿ ಮೋಡ ಚಾಚಿದಷ್ಟೂ ಬಾಚಬಹುದಾದ ಆ ಮುದ್ದು ಮುಖ ಜಾಗವಿರದೆ ಉಕ್ಕಿ ಬರುತಿತ್ತು ನಗೆ ಕೂಡ
ಹಂಸ ನಡೆಯ ಕಾಣದವಗೆ ಹಿಂಸೆಯಾಯಿತವಳ ನಡೆ ಭಾವುಕ ಕವಿಗಳಿಗೆ ಆಕೆ ಪದಗಳ ಮಳೆಗಾಲ  ಜೀವಂತಿಕೆ ಪಡೆದುಕೊಂಡ ಶಿಲೆಗಳೂ ನಾಚುತಾವೆ ಶಿಲೆಗಲಾಗೆ ಉಳಿಯೆ ಇಚ್ಚಿಸುತ್ತ ಛಿರಕಾಲ
ಪಶ್ಚಿಮ ಪರ್ವತದ ಹಿಂದೆ ಅವೆತು ಮಾಯವಾದ ರವಿ ಬೆಳದಿಂಗಳ ಹೆಣ್ಣ ರೂಪ ಧರಿಸೆ ಆಜ್ಞೆ ಮಾಡಿದ ವ್ಯಾಕರ್ಣಕೆ ಇದ್ದ ಸೋತ್ತೆಲ್ಲ ಖಾಲಿಯಾದರು ಬಣ್ಣಿಸುವ ಕಾವ್ಯ ಸಿರಿಯ ನನಗೆ ಮಾತ್ರ ನೀಡಿದ......
                                                  --ರತ್ನಸುತ

ಪದಾನುಭವ

ಒಬ್ಬರ ಬಲಹೀನತೆ, ಮತ್ತೊಬ್ಬರಿಗೆ ಅಸ್ತ್ರ ಒಬ್ಬನಿಗೆ ಶತ್ರು ಒಬ್ಬ, ಮತ್ತೊಬ್ಬನ ಮಿತ್ರ ಒಬ್ಬನ ಮುರುಕಲು ಗುಡಿಸಲು,ಮತ್ತೊಬ್ಬನ ಛತ್ರ ಅವನಿಗಿರದ ಪ್ರಶ್ನೆಗಳಿಗೆ, ಇವನಲ್ಲಿದೆ ಉತ್ರ ಆಕಾರಕೆ ಬೆಲೆ ಕೊಟ್ಟವ ವಿಕಾರಿಯಾಗುವನು ಅತಿಯಾಗಿ ಬಯಸುವವನೆ ಬಿಕಾರಿಯಾಗುವನು ಇಟ್ಟ ಗುರಿಯ ಬೆನ್ನು ಹಟ್ಟುವವನೆ ಶಿಖಾರಿಯಾಗುವನು ಭಾವನೆಗಳ ಲೆಕ್ಕಿಸುವವ ಸಂಸಾರಿಯಾಗುವನು ಎಣಿಕೆಗೆ ಸಿಗುವ ಮೆಟ್ಟಿಲು ಎಳಿಗೆಗಾಗಲ್ಲ ಮಾತಿನಲ್ಲೇ ಮುಗಿವ ಸ್ನೇಹ ಜೀವನಕಾಗಲ್ಲ ಹೊಟ್ಟೆಗಾಗೆ ಉಣಿಸೋ ಹಾಲು ಎದೆಗೆ ಮೀಸಲಲ್ಲ ಕಣ್ಣೀರನು ಒರೆಸಲಿಕ್ಕೆ ಕೈಗಳು ಬೇಕಿಲ್ಲ ಮಿತವಾದ ಸಿಹಿಯ ಹೊತ್ತ ಮಿಟಾಯಿಗಿಲ್ಲ ಹೆಸರು ನೀರು ಕೂಡ ಹಾದಿ ತಪ್ಪಿ ಆಗಬಹುದು ಕೆಸರು ನಂಬಿದವನ ನಂಬಿಕೆಗಳೇ ನಾಳೆ ತೋರೋ ಉಸಿರು ಬೇರು ಗಟ್ಟಿ ಊರಿದಾಗ ನಿಟ್ಟುಸಿರಿನ ತಳಿರು ಬೆದರು ಬೊಂಬೆ ಕೂಡ ಬೆದರಿಸೋಕೆ ಜೀವ ತಾಳಿದೆ ಸ್ತಬ್ಧ ಚಿತ್ರವಾದರೂನು ಹೊಸ ಕಣ್ಣ ಸೆಳೆದಿದೆ ಹಳೆ ದಾರಿ ಅದೇ ತೀರ ತಲುಪಿಸುವುದಲ್ಲದೆ ತಿರುವು ನೀಡಿದಾಗ ಹೊಸತು ಆಶ್ಚರ್ಯವ ನೀಡದೆ?? ಬಳಕೆಯಿಂದ ಕರಗಿ ಹೋದ ಬಳಪ ಧನ್ಯವಾಯಿತು ತಿದ್ದಿ ತಿದ್ದಿ ಬರೆದ ಅಕ್ಷರವೇ ಅನ್ನವಾಯಿತು ಆಕಳಿಕೆಯ ಗಾಳಿ ಅಮ್ಮನನ್ನು ನೆನಪು ಮಾಡಿತು ಜೊತೆಗಿರುವ ಉಸಿರೇ ಅಮ್ಮನೆನಲು ಸುಮ್ಮನಾಯಿತು ಹಾಲಿರದ ಗೆಜ್ಜಲನ್ನ ಗುದ್ದಿ, ಗುದ್ದಿ ತೆಗೆದರೆ ಹಸಿದ ಕಾರುವ ಹಸಿವು ಕೊಂಚವಾದರೂ ನೀಗದೆ? ಎಲ್ಲ ಮುಗಿಯಿತೆಂದುಕೊಂಡ ಮೇಲೂ ಹರಿವ ಮನಸಿಗೆ ಹೀಗೆರಡು ಪದವ ಗೀಚಿಕೊಳಲು ಧಿಕ…