Posts

Showing posts from January, 2012

ಲಂಡನ್ ಕತ್ತಲಲ್ಲಿನ ಮತ್ತೊಂದು ಪ್ರಪಂಚ

ರಾತ್ರಿ ಜೀವನ ಕೇವಲ ಹಾಸಿಗೆಗೆ ಸೀಮಿತವಾಗಿದ್ದ ಸಂದರ್ಭದಲ್ಲಿ, ಕಣ್ಣು ಮುಚ್ಚಿ ತೆರೆಯುವುದರೊಳಗೆ ಕಳೆದುಹೊಗುತಿತ್ತು, ಆದರೆ ಈ ವಿಚಿತ್ರ ಪ್ರದೇಶದಲ್ಲಿ ರಾತ್ರಿಯ ಜೀವನವೇ ಒಂದು ವಿಶೇಷ, ಇದ್ದ ಪ್ರಪಂಚ ಇಲ್ಲವೇನೋ, ಎಲ್ಲೋ ನೂತನ ಪ್ರಪಂಚದ ಸಾಕ್ಷಾತ್ಕಾರವಾದಂತೆ ಅನಿಸುವುದು ಸುಳ್ಳಲ್ಲ. ಬೆಳಕಲ್ಲಿ ಇಲ್ಲಿಯ ಜನರದ್ದು ಒಂದು ಮುಖವಾದರೆ, ಇರುಳಲ್ಲಿ ಮತ್ತೊಂದು ಮುಖ. ಅವರೊಡನೆ ನಾವೂ ಮುಖವಾಡ ಧರಿಸಿ ಅವರ ತಾಳಕ್ಕೆ ತಕ್ಕಂತೆ ಕುಣಿವುದಿದೆಯಲ್ಲ ಅದು ಮನಸೋಪ್ಪದ ಸತ್ಯದ ಗೌಪ್ಯ ಸುಳ್ಳು.
ಸಮತೆ ಸಾರುವಲ್ಲಿ ಈ ಕತ್ತಲಿನದ್ದು ವಿಚಿತ್ರ ಪಾತ್ರ, ಬೆಳಕು ಬೀರಿವ ಅಂತರದ ಪರದೆಯನ್ನ ಹರಿದು ಹಾಕುವ ಮೊನಚು ಕತ್ತಿ ಈ ಕತ್ತಲು. ಎಲ್ಲರಿಗೂ ಎಟಕುವ ಆಕಾಶದ ತಾರೆಗಳ ಬಾಚಿಕೊಳ್ಳುವ ಅವಕಾಶ ಕೊಟ್ಟರೂ, ಅದು ದೊಚಿದವರಿಗಷ್ಟೇ ದೊಚಿದಷ್ಟೂ ಲಾಭದಾಯಕ, ಮಿಕ್ಕವರಿಗೆ ಧಕ್ಕುವುದೇ ದೊಚಿದಷ್ಟು. 
ವಾಡಿಕೆ ಆದವರಿಗೆ ಇದು ಸಮುಧ್ರದ ಅಲೆಯೊಂದಿಗೆ ಸಾಗಿದಷ್ಟೇ ಸರಾಗವಾದ ಪಯಣ, ಹೊಸಬರಿಗೆ ಕೊಂಚ ಕಸಿವಿಸಿ ಉಂಟು ಮಾಡುವ ಅರ್ಥವಾಗದ ಗಾಯನ. ಇಷ್ಟಕ್ಕೆ ಇಲ್ಲಿನ ಸಂಸ್ಕೃತಿಯ ಹಿಡಿತ ಬಹಳ ಧೃಡವಾಗಿದೆ ಎಂದರೆ ಕೇವಲ ಅದು ಅರೆ ಬರೆ ಮೂರ್ಖರ ಚಿಂತನೆ ಅಷ್ಟೇ. ಸಡಿಲವಾದ ಸಮಾಜ ತನಗೇನು ಬೇಕೋ ಅದನ್ನು ತಾವೇ ನಿರ್ದರಿಸುವ ಒಂದು ಅವಕಾಶವನ್ನೂ ನೀಡುತ್ತೆ, ಸರಿಯಾಗಿ ಉಪಯೋಗಿಸಿದರೆ ಒಲಿತು; ಇಲ್ಲವೇ ಮತ್ತೊಮ್ಮೆ ಚಿಂತಿಸಬೇಕು ಕುಳಿತು.
ಕಾನೂನು ಪಾಲಿಸುವಂತೆ ಕೇಳಿಕೊಳ್ಳದು, ಆಜ್ಞೆಯಾಗಿ ಸಾರುತ್ತೆ,…

ಅಭಿಮಾನ

ಸಾಗರವಾಗಲು ಬೇಕು ಕೋಟಿ ಮೋಡಗಳ ಹನಿ ನನ್ನ ಕೂಗು ಕೇಳಲಿಕ್ಕೆ ಬೇಕು ನಿಮ್ಮೆಲ್ಲರ ಧನಿ ಕನ್ನಡತೆ  ನನಗೆ ಇಲ್ಲಿವರೆಗೆ ಕೊಟ್ಟ ಗುರುತಿಗೆ ಎಂದೆಂದಿಗೂ ಚಿರಋಣಿ....... ನಾ ಎಂದೆಂದಿಗೂ ಚಿರಋಣಿ.....
                                                -ರತ್ನಸುತ

ನೀನಿರದ ಬದುಕು

ನಿನ್ನ ಕಂಡೊಡನೆ ಲೋಕವೇ ಮರೆವುದಿದೆಯಲ್ಲ ನಾನಂತೂ ನಿನ್ನ ಹಿಂಬಾಲಿಸಿ ಅಲೆವುದಿದೆಯಲ್ಲ ದಡ್ದನಾದರೂ ನಿನ್ನ ಪಡೆದೇ ತೀರುವ ಹಟವಿದೆಯಲ್ಲ ನೀ ಕಾಣದಿರಲು ಸಿಗುವ ವೆದನೆಯಿದೆಯಲ್ಲ ಇವೆಲ್ಲ ಎಲ್ಲಕೂ ಮಿಗಿಲಾಗಿ ಎದ್ದು ಕಾಣುವ ನರಳಾಟಗಳೇ...
ನಿನ್ನ ಜೊತೆ ಇರದೆ ಯಾರೂ ನೀಡರಲ್ಲ ಮನ್ನಣೆ  ಜೀವನದ ಹೆಜ್ಜೆಜ್ಜೆಗೂ ಸಹಿಸಲಾಗದ ಶೋಷಣೆ ಇದ್ದು ಬಿಡಬಾರದೇ ನನ್ನಲ್ಲೇ ಸುಮ್ಮನೆ ಹುಡುಕಾಟಕೆ ವೃತಾ ಸಮಯ ವ್ಯರ್ತ ತಾನೇ? ಇಷ್ಟೆಲ್ಲಾ ಮನಬಿಚ್ಚಿ ನುಡಿದರೂ ನಿನಗೆ ಕೆಳದೇಕೆ?...
ಒಮ್ಮೊಮ್ಮೆ ನಿನ್ನ ಸದ್ದಿಗೆ ಅರಿಯೋ ಮುನ್ನವೇ ತಿರುಗುವೆ ಒಟ್ಟಾರೆ ಒಂದೆಡೆ ಕಂಡರಂತೂ ನೀರಿನಂತೆ ಕರಗುವೆ  ಇದ್ದಷ್ಟು ಕಾಲ ಭೀಗಿ, ಇಲ್ಲವಾದಾಗ ಮರುಗಿ ಮತ್ತೆ ನಿನ್ನದೇ ಮರುಬೇಟಿಗೆ ಕಾಯುವೆ ಆಪ್ತನೆಂದು ಹಾಗೆ ಜೊತೆಗೆ ಇದ್ದುಬಿಡಬಾರದೆ ಹಾಗೆ?...
ನೀನೆಷ್ಟು ಮುಕ್ಯವೋ, ನೀನಿಲ್ಲದಾಗ ತಿಳಿವುದು ನಾಚಿಕೆಯ ಕೀಲಿ ಕಳೆದು ಬುದ್ದಿ ಮಂಗವಾಗುವುದು ನೀನಿದ್ದರುಂಟು, ಇಲ್ಲವಾದರಿದೆಯಲ್ಲ ಸಾಲದ ಗಂಟು ಬಿಗಿಯುವುದು ಅದಕೆ ಮತ್ತೊಂದು ಭ್ರಮ್ಹಗಂಟು ಸಾಲದ ಶೂಲಕೆ ಇನ್ನು ಬೆಸೆವುದು ನಂಟು...
ಚಿಲ್ಲರೆಯಾಗಿ ಬಾ... ಕಟ್ಟಿನ ಸಮೇತ ಬಾ... ಹಿಂದಿರುಗುವ ಮನವ ಕೊಂದು ನನ್ನ ಬಳಿಗೆ ಓಡಿ ಬಾ... ಬಂದಮೀಲೆ ಹಟವಮಾಡದಿರು ಹಿಂದಿರುಗಲು ನನಗೆ ನೀ ಮೀಸಲೆಂದು ಇದ್ದವರಿಗೆ ಹೇಳಿ ಬಾ.... ಓಡಿ ಬಾ ಕಾಂಚಾಣ.... ಜಣ-ಜಣನೆ ಓಡಿ ಬಾ.....  

                                                    -ರತ್ನಸುತ

ಮುಂದುವರೆಯುವ ಮನಸಿದ್ದರೂ ಹಿಡಿದಿಟ್ಟ ಸಾಲುಗಳು

ತೊಟ್ಟ ಕನಸುಗಳ ಬಣ್ಣದ ಅಂಗಿಎಲ್ಲೋ ಹರಿದಿರಬಹುದೇ ಚೂರು ಧರಿಸಲು ಹಿಂಜರಿದಿದೆಯೇ ಬದುಕು  ಇಲ್ಲದೆ ಹೋಯಿತೇ ಹಿಡಿದ ಬೇರು ಮಾತಿಗೆ ಸ್ಪಂದಿಸದ ಖಟು ಮೌನ  ಶಾಂತಿಯ ಕಸಿಯುವ ನಿಲ್ಲದ ಧ್ಯಾನ ಇದುವೇ ಜೀವನವೆಂದರಿತಿರುವೇನು ಉಸಿರಿಗೆಲ್ಲಿದೆ ಆತ್ಮ ಸಮ್ಮಾನ........
                                  -ರತ್ನಸುತ 

ಮೊದಲ ವಾರದ ಫಾರಿನ್ ವಾಸ

ಅದೇಕೋ ಗೊತ್ತಿಲ್ಲ. ಎಲ್ಲರೂ ಇದ್ದೂ ಯಾರೂ ಇರದಂತೆ, ಯಾರೂ ಇರದೆ ಎಲ್ಲರೂ ಇದ್ದಂತೆ, ಎಲ್ಲವೂ ಇದ್ದು ಏನೂ ಇರದಂತೆ, ಏನೂ ಇರದೆ ಎಲ್ಲವವೂ ಇದ್ದಂತೆ, ಹೀಗೆಲ್ಲ ಅನಿಸಬಹುದೆಂದು ಅಂದುಕೊಂಡಿದ್ದೆ ವಿದೇಶದಲ್ಲಿ. ಯಾವೊಂದೂ ಅನಿಸದಿದದ್ದೇ  ಅಚ್ಚರಿಯ ಸಂಗತಿ. ಎಲ್ಲರೂ ನಮ್ಮವರೇ, ಇದು ನಮ್ಮೂರೇ ಎನ್ನುವ ಭಾವನೆ ಸುಳ್ಳೆಂದುಕೊಳುವಷ್ಟರ ಮಟ್ಟಿಗೆ ತಯಾರಾಗಿದ್ದ ನನ್ನ ಬುದ್ಧಿ ಒಂದೇಬಾರಿ ತಲೆಕೆಳಗಾಗಿದ್ದು ಸುಳ್ಳಲ್ಲ, ಹಾಗಾದಾಗ ನಾನು ದಂಗಾದಿದ್ದು ಸುಳ್ಳಲ್ಲ.
ಆ ವಿಷ್ಯ ಬಿಡಿ. ಇದೊಂದು ಕನಸುಗಾರರ ಸಂತೆ ಎಂದರೆ ತಪ್ಪಾಗಲಾರದು. ಇಲ್ಲಿ ಯಾರೇ ಕಂಡರೂ ಅವರ ಕಣ್ಗಳಲ್ಲಿ ನಾಳೆಯ ಕನಸುಗಳ ದರ್ಶನವಾಗುವುದೇ ವಿಶೇಷ. ಎಲ್ಲರಲ್ಲೂ ಗಾಂಭೀರ್ಯದ ಚೌಕಟ್ಟಿನ ಒಳಗೆ ಒಂದು ಸಣ್ಣ ತುಂಟತನವಿದೆ, ಅದು ಯಾರಿಗೂ ಕಾಣದಂತೆ ಇರಿಸಿಯೂ ಗೋಚರವಾಗುವ ಅಮಾಯಕತ್ವವಿದೆ, ನನ್ನಲ್ಲೂ ಇತ್ತು ಆ ದಡ್ಡತನದ ಬುದ್ಧಿವಂತಿಕೆ, ಅದು ನನ್ನದಲ್ಲದ ಸ್ವಂತಿಕೆ.
ಇದು ಮೊದಲ ವಾರದ ಅನುಭವ ಅಷ್ಟೇ, ಹಾಗೆಂದು ಎಲ್ಲವನ್ನು ಅರಿದು ನೀರಿನಂತೆ ಗಟ-ಗಟ ಕುಡಿದೆನೆಂದಲ್ಲ ಅರ್ಥ, ನೂರು ಮೈಲಿ ವಿಸ್ತಾರದ, ಆಳದ  ಕಡಲ ಜೀವನದಲ್ಲಿ, ನಾನು ಕುಡಿದಿರುವುದು ಕೇವಲ ಒಂದು ಚಮಚ ತೀರ್ಥ.
ಎಲ್ಲೆಲ್ಲಿ ನೋಡಿದರು ಎಲೆರಹಿತ ಮರಗಳೇ, ಮಾಗಿಯ ಚಳಿಯಲ್ಲಿ ಮರಗಳಿಗೆ ಹಿಮದ ಹೊದಿಗೆ, ಚಿಗುರಿಗೆಂದೇ ಕಾದಿವೆ ಕಣ್ಗಳು, ಹಕ್ಕಿಗಳು ಹಾಗು ಕ್ಯಾಮೆರಾ zoomಗಳು. ಸದ್ಯಕ್ಕೆ ಇದೇ ನನ್ನ ಅನಿಸಿಕೆ, ತಿದ್ದುಪಡಿಗಳೇನೇ ಇದ್ಧರು  ಮುಂದೆ ಆಗ…

ತಲೆಹರಟೆ

ಸಂಬಂಧಗಳೇ ಇಷ್ಟು, ಒಗಟುಬರಿತ ಚಿತ್ರಾನ್ನ
ಉಪ್ಪು, ಕಾರ, ಉಳಿ,  ಹದವಾಗಿ ಬೆರೆತರೆ
ಒಗ್ಗರಣೆಗೆ ಒಗ್ಗಿ ಬರುವುದು ಬಿಳಿ ಅನ್ನ
ಇಲ್ಲವಾದರೆ ಉಂಟಲ್ಲ, ಹಸಿವಿಗೂ ಅದೇ ಕಾರಣ...

ಬಣ್ಣ ಕೇವಲ ಕಣ್ಣಿಗೆ ನೀಡಲು ಮುಧ
ಹಾಗೆಂದು ಕಡೆಗಣಿಸುವಂತಿಲ್ಲ ಅದನು 
ಕಣ್ಣಿನ ಹೊಟ್ಟೆ ತುಂಬಿದರಷ್ಟೇ ಅಲ್ಲವೇ
ಹಸಿವಿನ ಹೊಟ್ಟೆಯೂ ತುಂಬಲು ಸಾಧ್ಯ

ನಿಂಬೆ ಉಳಿ ಇಲ್ಲವೆಂದು ಸುಮ್ಮನಿರುವಂತಿಲ್ಲ
ಹುಣಸೆಯಲ್ಲೇ ತಳ್ಳಬೇಕು ಹೇಗಾದರೂ ಕಾಲ
ಹಸಿದಾಗಿನ ಆ ಸಮಯಕೆ  ಎಲ್ಲ ಉಡಾಫೆ ಮಾಯ
ಎಲ್ಲಿ ಅಡಗಿಬಿಡುವುದೋ ಜಂಬದ ಬಾಲ

ಕೊಟ್ಟಂಗಿರೋದೇ ನಮ್ಮ ಬದುಕು
ಇಟ್ಟಂಗಿದ್ದರೆ, ಇಟ್ಟವನ್ನ ಹುಡುಕು
ಬೇಕಿರೋದನ್ನ ಬೇಡದೆ ಪಡೆದರೆ
ಬೇಡದಿರೋ ಕಾಲಿ ಕೊಣೆಗೆ ತುರುಕು

ಮೊದಲೆಲ್ಲಾಯ್ತೋ, ಕೊನೆ ಹೀಗಾಯ್ತು
ಮಾಡೋ ಕೆಲಸ ದಾರಿ ತಪ್ತು
ಕಷ್ಟ ಹಂಚೋಕ್ಹೋದ ನಾಲ್ಗೆ
ತಲೆಹರಟೆಗೆ ತಾಳ ಹಾಕ್ತು...........

                                                                        -- ಭರತ್

ವಂದನಾಚಿಂತನೆ

ಅವಳು ಏನೋ ಅರಸುತ್ತ ಕಂಗೆಟ್ಟಿದ್ದಳು, ಯಾರದೋ ಪರಿಚಯಕ್ಕೆಂದೇ ಹಾತುರಿಯುತ್ತಿದವು ಅವಳ ಕಣ್ಗಳು. ಗಮನಿಸುತ್ತಲೇ ಇದ್ದವು ನನಗೇ ತಿಳಿಯದಂತೆ ನನ್ನ ಕಣ್ಗಳು ಕೂಡ, ಕಾರಣ ಇಷ್ಟೇ; ನನ್ನಲ್ಲಿದ ಗೊಂದಲದ ಪ್ರತಿಭಿಂಬ ಗೋಚರವಾಯಿತೆನಗೆ ಅವಳಲ್ಲಿಯೂ. ಹೌದು, ಅವಳೂ ಹೊಸಬಳೆ ಪಾಪ, ಇನ್ನೇನು ಮಾಡಿಯಾಳು ಧಿಕ್ಕು ನೋಡುವುದನ್ನು ಬಿಟ್ಟು.

ಅಷ್ಟು ಹೊತ್ತಿಗಾಗಲೇ ಪರಿಚಯ ಮಾಡಿಕೊಳ್ಳುವ ಐವತ್ತು ಪ್ರತಿಷಿತ ನಿರ್ಧಾರ ಆಗಿತ್ತು, ಇನ್ನು ಐವತ್ತು ಪ್ರತಿಷಿತ ಹಿಂಜರಿಕೆಯೇ. ಅಷ್ಟೇ ಸಾಕಿತ್ತು ಕೊಂಚ ಮುಂದುವರೆಯಲು, ಆದರು ತಡೆದಂತೆ ನಟಿಸಿದೆ. ಅಪರಿಚಿತ ಚಹರೆಗಳ ಸಮೀಕ್ಷೆ ಮತ್ತೆ ಮುಂದುವರೆಯಿತು, ಹೆಜ್ಜೆಜ್ಜೆಗೂ ಮತ್ತೆ ಅದೇ ಸೋಲಿನ ಅನುಭವ.

ಅಚಾನಕ್ಕಾಗಿ ಒಂದು ಮೆಲ್ಲ ಧನಿಯಲ್ಲಿ ಕೇಳಿಬಂತು ಒಂದು ಕರೆ, ಅದು ನನ್ನನೋ ಇಲ್ಲವೋ ಎಂಬ ಪ್ರಶ್ನೆ ಹಾಕಿಕೊಳ್ಳುವಷ್ಟರಲ್ಲೇ ನಾನೇ ಎಂಬ ಕಾತರಿ ಆಯಿತು ಜೊತೆಗೆ ಗಾಬರಿಯೂ ಆಯಿತು. "ನಿಮ್ಮ ಮೊಬೈಲ್ ಸ್ವಲ್ಪ ಕೊಡ್ತೀರ, ಒಂದು ಕರೆ ಮಾಡೋದಿದೆ " ಎಂದಳಾಕೆ. ಬೇಕೇ, ಬೇಡವೇ ಎಂಬ ನಿರ್ದಾರವ ಮಾಡುವ ಮೊದಲೇ ನನ್ನ ಕೈಯ್ಯಿಂದ ಜಾರಿ ಅವಳ ಕೈ ಸೇರಿತು ನನ್ನ ಮೊಬೈಲು. ಅಮ್ಮನ ಜೊತೆ ಮಾತನಾಡಿದ ನಂತರ ಅವಳ ಕಣ್ಣಲ್ಲಿ ಕೃತಜ್ಞತಾ ಮನೋಬಾವವಿತ್ತು, ಅದು ನನ್ನ ಮೇಲೆಯೇ ಎಂಬುದು ವಿಶೇಷ.

ಪರಸ್ಪರ ಪರಿಚಯದ ನಂತರ ಇನ್ನೇನು ವಿದಾಯದ ಸಮಯ, ಸುರ್ಯಾಸ್ತಮದ ವೇಳೆಯಲ್ಲಿ ಬಿರಿದ ಹೂಗಳು ನೊಂದಂತೆ ಅನಿಸಿತ್ತಾದರೂ ಮನದ ಪುಟ್ಟ ಗೂಡಿನೋಳಗಿಂದ…

ಬ್ಯುಸಿ ಬೆಂಗಳೂರಿನಿಂದ ತಂಡಿ ತಂಗಲೂರಿಗೆ (ಲಂಡನ್ನಿಗೆ)

ವಿಮಾನದಲ್ಲಿ ನನ್ನ ಮೊದಲ ಪಾದಾರ್ಪಣೆ... ಎಲ್ಲರಿಗೂ ಇದ್ದಂತೆಯೇ ನನಗೂ ಇತ್ತು ಕುತೂಹಲ ಮಿಶ್ರಿತ ಭಯದ ಅನುಭವ. ಅದೇನು ಅಪರಿಚಿತರೊಡನೆ ಮೌನದ ಚರ್ಚೆ, ಪ್ರಪಂಚ ಕಿರುದಾಗಿತು ಕಿಟಕಿ ಗಾಜಿನಾಚೆ. ಕೇವಲ ನೋಡುವುದೇ ಆಯಿತು, ಸ್ಪಂದನೆಗೆ ಎಡೆಯಿಲ್ಲ, ಭಾವಗಳ ಮುಡಿಗಲ್ಲಿ ಚಂದದ ಜಡೆಯಿಲ್ಲ. ಗಗನ ಸಖಿಯರೋ, ಹೆಸರಿಗಷ್ಟೇ ಸಖಿಯರು, ಕೇವಲ ಅಲಂಕಾರಕ್ಕೆಂದೇ ನಗುವೊಂದ ತುಟಿಮೇಲೆ ಅಂಟಿಸಿಕೊಂಡು ನೆಡೆದಾದುತ್ತಾ ಉಸ್ಸ್ಸ್ ಎಂದು ಕೂತುಬಿಡುತ್ತಿದರು ಎಲ್ಲೋ  ಅವೆತು, ಒತ್ತಿದರೆ ಬಟನ್ನೊಂದ ಓಡಿ ಬಂದು ಹಾಜರು ನಮ್ಮ ಸೇವೆಗೆ, ಅದೆಷ್ಟು ಶಪಿಸಿರುವರೋ ನನ್ನಂತ ನೂರಾರು ಮಂದಿಯ.. ಹಂದಿಗಳೆಂದು.... ಇನ್ನೇನು ಹೆಚ್ಚು ಬದಲಾವಣೆಗಳೇ ಕಾಣಲಿಲ್ಲ ಅಲ್ಲಿ, ಎಲ್ಲವೂ ಇದಂತೆಯೇ ಇತ್ತು, ಗೋಡೆಗೆ ಜೋತು ಹಾಕಿದ ಭಾವಚಿತ್ರದಂತೆ... ನೋಡಿದ ಮೊದಲ ಕಣ್ಣಿಗೆ ಮಾತ್ರ ಮುಧ, ಆನಂತರ ಎಲ್ಲವೂ ಸೀದಾ-ಸಾದಾ...... 
ಮಾತಿಗೆ ಯಾರೂ ಸಿಗದೆ, ಮಾತೂ ಸತ್ತು ಹೋಗಿತ್ತು, ಆಗಾಗ ಕೊನೆಯಲ್ಲಿದ್ದ ಬಾತ್ರೂಂ ಮಾತ್ರ ಒಂದಿಷ್ಟು ಜೋತೆಯಾಗುತಿತ್ತು; ಏಕೆಂದರೆ ಅಲ್ಲೊಂದು ಕನ್ನಡಿ ಇತ್ತು, ನಮ್ಮೊಂದಿಗೆ ನಮ್ಮನ್ನೇ ಪರಿಚಯ  ಮಾಡಿಕೊಂಡು ಒಂದಷ್ಟು ಮಾತನಾಡಿ ಹಿಂದಿರುಗಿದರೆ ಅಷ್ಟೇ ಸಮಾದಾನ. 
ಮೊದಲೇ ಮುದ್ದೆಗೆ ಪಳಗಿದ ನಾಲಿಗೆ, ಬನ್ನು- ಬಟರ್ರು ಎಂದರೆ ಹಿಂಜರಿಕೆ, ಬೇರೆ ವಿಧಿಯಿಲ್ಲದೆ ತುರುಕಿದ್ದಾಯಿತು. ಊಟ ಮಿತ, ಹಸಿವಿನ ಮೊಣಕಾಲಿನಷ್ಟಕ್ಕೆ ಸೀಮಿತ, ಇನ್ನೆಲ್ಲಿ ತುಂಬ ಬೇಕು ಹೊಟ್ಟೆ? ಸಿಟ್ಟಾಗಿ ಸಿಬ…

ನೀನಿಲ್ಲವಾದಲ್ಲಿ

ನೀ ತಂದ ಏಕಾಂತ, ಕಾಡು ಮಲ್ಲಿಗೆಯಂತೆ
ಅನುಭವಿಸುವಂತಿಲ್ಲ, ಆಚರಿಸುವಂತಿಲ್ಲ
ಕೇವಲ ಹುಡುಕಾಟದೇ ಸವೆಯಬೇಕೆ ಬಾಳು?
ಬಾ ಬೇಗ ಈ ಪ್ರಶ್ನೆಗೆ ಉತ್ತರವ ಹೇಳು

ನೀ ಕೊಟ್ಟ ನೆನಪುಗಳು, ನೀರಿನೊಳಗ ಅಲೆಗಳಂತೆ
ಹಿಡಿದು ಕೂರುವಂತಿಲ್ಲ, ಹರಿದು ಬಿಡುವಂತಿಲ್ಲ
ಕೇವಲ ನೋಡಿಕೊಂಡೆ ಕಳೆಯಬೇಕೇ ಬಾಳು?
ಹುಡುಕೋ ಮೊದಲೆ ಬಂದು ಒಮ್ಮೆ ಕಣ್ಣಿನೊಳಗೆ ಬೀಳು

ನೀ ಬಿಟ್ಟ ಹಿಜ್ಜೆ ಗುರುತು, ಮೀನ ಈಜು ದಾರಿಯಂತೆ
ಹಂಬಲಿಸುವಂತಿಲ್ಲ, ಹಿಂಬಾಲಿಸುವಂತಿಲ್ಲ
ಕೇವಲ ಊಹೆಯಲ್ಲೇ ರಚಿಸಬೇಕೆ ಬಾಳು?
ಬದಲಿಗೆ ಸುಮ್ಮನಿರುವುದೇ ಮೇಲು

ನೀ ಸುಟ್ಟ ಕನಸುಗಳು, ಸಾಲು ಮರದ ಸಾವಿನಂತೆ
ಹಿಂದಿರುಗಿಸಲಾಗಲ್ಲ, ಹಾಗೆ ಬಿಡಲೂ ಆಗಲ್ಲ
ಕೇವಲ ಮರುಜನ್ಮವ ಅರಸಬೇಕೆ ಬಾಳು?
ಕೊರಳು ಮುಂದಾಗದಿರಲು ಮುಂದಾದವು ಬೆರಳುಗಳು.... ಹೀಗೆ ಬರೆದುಕೊಳ್ಳಲು.....

                                                                                -ರತ್ನಸುತ

ಕವಿಯ ನೋವು

ನೋವೂ ಕವಿಗೆ ಬರೆಯಲೊಂದು ಕಾರಣ
ಚಿಂತೆ ಇಲ್ಲ ನೋಯಿಸಿ ಅವನ ಮನಸನು
ಬೇವು ಕೂಡ ಆಗುತಿತ್ತು ಸಿಹಿಯ ಹೂರಣ
ಪಾಪ, ಬಯಸದೆ  ಕೊಟ್ಟ ಕಹಿಯ ಸವಿಯನು
ಬಂದ ಹಾಗೆ ಇರುವುದಕ್ಕೆ ಉಳಿವು ಇಲ್ಲಿದೆ
ಬೇಡವೆಂದು ಜರಿದವೆಲ್ಲ ಮಾಯವಾಗಿದೆ
ಸುಖವ ಬಯಸಿ ನಿಂತ ಕಡೆಗೆ ಉಳಿದುಕೊಂಡರೆ
ಶಿಲೆಗೆ ವಿಮುಕ್ತಿಯ ಸೌಭಾಗ್ಯ ಎಲ್ಲಿದೆ......

                                       - ರತ್ನಸುತ