Tuesday, 17 January 2012

ತಲೆಹರಟೆ

ಸಂಬಂಧಗಳೇ ಇಷ್ಟು, ಒಗಟುಬರಿತ ಚಿತ್ರಾನ್ನ
ಉಪ್ಪು, ಕಾರ, ಉಳಿ,  ಹದವಾಗಿ ಬೆರೆತರೆ
ಒಗ್ಗರಣೆಗೆ ಒಗ್ಗಿ ಬರುವುದು ಬಿಳಿ ಅನ್ನ
ಇಲ್ಲವಾದರೆ ಉಂಟಲ್ಲ, ಹಸಿವಿಗೂ ಅದೇ ಕಾರಣ...

ಬಣ್ಣ ಕೇವಲ ಕಣ್ಣಿಗೆ ನೀಡಲು ಮುಧ
ಹಾಗೆಂದು ಕಡೆಗಣಿಸುವಂತಿಲ್ಲ ಅದನು 
ಕಣ್ಣಿನ ಹೊಟ್ಟೆ ತುಂಬಿದರಷ್ಟೇ ಅಲ್ಲವೇ
ಹಸಿವಿನ ಹೊಟ್ಟೆಯೂ ತುಂಬಲು ಸಾಧ್ಯ

ನಿಂಬೆ ಉಳಿ ಇಲ್ಲವೆಂದು ಸುಮ್ಮನಿರುವಂತಿಲ್ಲ
ಹುಣಸೆಯಲ್ಲೇ ತಳ್ಳಬೇಕು ಹೇಗಾದರೂ ಕಾಲ
ಹಸಿದಾಗಿನ ಆ ಸಮಯಕೆ  ಎಲ್ಲ ಉಡಾಫೆ ಮಾಯ
ಎಲ್ಲಿ ಅಡಗಿಬಿಡುವುದೋ ಜಂಬದ ಬಾಲ

ಕೊಟ್ಟಂಗಿರೋದೇ ನಮ್ಮ ಬದುಕು
ಇಟ್ಟಂಗಿದ್ದರೆ, ಇಟ್ಟವನ್ನ ಹುಡುಕು
ಬೇಕಿರೋದನ್ನ ಬೇಡದೆ ಪಡೆದರೆ
ಬೇಡದಿರೋ ಕಾಲಿ ಕೊಣೆಗೆ ತುರುಕು

ಮೊದಲೆಲ್ಲಾಯ್ತೋ, ಕೊನೆ ಹೀಗಾಯ್ತು
ಮಾಡೋ ಕೆಲಸ ದಾರಿ ತಪ್ತು
ಕಷ್ಟ ಹಂಚೋಕ್ಹೋದ ನಾಲ್ಗೆ
ತಲೆಹರಟೆಗೆ ತಾಳ ಹಾಕ್ತು...........

                                                                        -- ಭರತ್

No comments:

Post a Comment

ಬರುವೆ ನಿನಗಾಗಿ

ಬರುವೆ ನಿನಗಾಗಿ  ಇರುವೆ ಜೊತೆಯಾಗಿ  ಪ್ರತಿ ಗಳಿಗೆ ಬೇಕಿದೆ ನಿನ್ನಾಸರೇ  ನೀನದೇ ಈ ಹಾಡು  ಹಿಡಿದು ಹೊಸ ಜಾಡು  ನಾ ಹಾಡುವೆನು ಕೂಡಿ ಬಾ ನೀ ಆದರೆ  ಬೆರೆತ ಮನದಲ್ಲಿ  ಪುಟಿ...