Friday, 16 March 2012

ಸಿಮಿಲಾರಿಟಿ b/w ಸಾಫ್ಟ್ವೇರ್ ಇಂಜಿನಿಯರ್ ಅಂಡ್ ಅಂಡರ್ ವರ್ಲ್ಡ್ ಪಂಟರ್ (ಗೊತ್ತಿರೋದು & ತಿಳ್ಕೊಂಡಿರೋದು )

ಸಾಫ್ಟ್ವೇರ್ ಇಂಜಿನಿಯರ್ಗೂ,  ಅಂಡರ್ ವರ್ಲ್ಡ್ ಪಂಟರ್ಗೂ  ಏನೇನೂ ವ್ಯತ್ಯಾಸ ಇಲ್ಲ ಕಣ್ರೀ.... ಖದರ್ ಇರೋ ಅಷ್ಟು ದಿನ ದಿಲ್ದಾರ್ ಆಗಿ ಬಾಳೋದು, ಮಾರ್ಕೆಟ್ ಬಿದ್ದೋದ್ರೆ ಬೀದೀಗ್ ಬೀಳೋದು ಎರಡರಲ್ಲೂ ಕಾಮನ್ನು....
ರೌಡಿಸಂ ಅಲ್ಲಿ ಸಿಸ್ಯಂದ್ರೆ ಎತ್ ಬಿಡ್ತಾರೆ, ಐ.ಟಿ ಅಲ್ಲಿ ಜೂನಿಯರ್ಗಳು ಕಾದಿರ್ತಾರೆ ನಮ್ ಬುಡಕ್ಕೆ ಕೈ ಹಾಕೋಕೆ.
ರೌಡಿ ಮನೆ ಬಿಟ್ರೆ ವಾಪಸ್ ಆಗೋದು ಗ್ಯಾರೆಂಟಿ ಇಲ್ಲ , ಸಾಫ್ಟ್ವೇರ್ ಇಂಜಿನಿಯರ್ ಕತೆ ಕೂಡ ಅಷ್ಟೇ.
ಎರಡೂ ಕಡೆ ಫೀಲ್ಡ್ ಅಲ್ಲಿ ಇರೋ ತನಕ ಸಲ್ಯೂಟ್, ಇಲ್ದಿದ್ರೆ ಗೆಟ್ ಔಟು.
ಊಟ ನಿದ್ದೆ ಬಿಟ್ಟು ಅನ್ನೋಕಾಗ್ದೆ, ಅನ್ಬೋಸೋಕಾಗ್ದೆ ಇಬ್ರೂ ಬದುಕೋರು.
ಶುರು-ಶುರು ಅಲ್ಲಿ ಎಲ್ಲ ಸುಂದರವಾಗಿ ಕಂಡು ಆಮೇಲೆ ಎಲ್ಲ ಮಾಮೂಲು ಅನ್ಸುತ್ತೆ, ಎರಡೂ ಕಡೆ.
ನನ್ನೋರು ತನ್ನೂರು ಅನ್ನೋ ಸೆಂಟಿಮೆಂಟ್ ಇಬ್ರಲ್ಲೂ ಇರಲ್ಲ.
ಇವತ್ತು ಅನ್ನೋದನ್ನ ಮರ್ತು "ನಾಳೆ" "ನಾಳೆ" ಅಂತ ಸಾಯೋರೆ ಇಬ್ರೂ.
ಸಾಯೋ ಕಾಲಕ್ಕೆ ಇಬ್ರು ಪಶ್ಚಾತಾಪ ಪಡ್ತಾರೆ.
ಸತ್ಮೇಲೆ ರೌಡಿ ಮಿಸ್ ಇಲ್ದೆ ಫ್ರಂಟ್ ಪೇಜ್ಅಲ್ಲಿ  ನ್ಯೂಸ್ ಆಗ್ತಾನೆ, ಇಂಜಿನಿಯರ್ ಸತ್ತಾಗ್ಲೂ ಬರುತ್ತೆ (ದುಡ್ ಕೊಟ್ಟು ಹಾಕ್ಸಿದ್ರೆ)  ಆದ್ರೆ ಹುಡುಕೋ ಹೊತ್ಗೆ ನಾಳಿನ್ ಪೇಪರ್ ಪ್ರಿಂಟ್ ಆಗಿರುತ್ತೆ.
ಇಂಜಿನಿಯರಿಂಗ್ ಮುಗಿಸೋಕೆ ನಾಕ್-ಐದು ವರ್ಷ ಹಿಡಿಯುತ್ತೆ, ರೌಡಿ ಆಗೊಕೂ ನಾಕ್-ಐದು ವರ್ಷ ಬೇಕೇ ಬೇಕು (ರೆಕಾರ್ಡ್ ಬ್ರೇಕ್ ಮಾಡಿದೊರನ್ನ ಹೊರತು ಪಡಿಸಿ)
ಲಾಸ್ಟ್ ಬಟ್ ನಾಟ್ ದಿ ಲೀಸ್ಟ್.......... ರೌಡಿಗೆ ಚಾಪೆ ಕಂಡ್ರೆ ಭಯ, ಸಾಫ್ಟ್ವೇರ್ ಇಂಜಿನಿಯರ್ಗೆ ಬೆಂಚ್ ಕಂಡ್ರೆ ಭಯ

ಇಷ್ಟೆಲ್ಲಾ ಸಿಮಿಲಾರಿಟಿ ಇದ್ಕೊಂಡು ಯಾಕ್ ತಾರತಮ್ಯ ಮಾಡ್ತಾರೋ ಜನ..... ಥೂ ಬಂಡ್ಬಾಳು....... :)

                                                                                                                       
                                                                                                                           -ರತ್ನಸುತ
ಕವಿಯ ರಾಜ ಮಾರ್ಗ


ಆಧ್ಯಾತ್ಮದ ಹಾದಿ ಹಿಡಿದ ಪಯಣದಲಿ ಏಕಾಂತ
ಭಾವಾತ್ಮದ ಜೊತೆ ಹಿಡಿಯಲು ಭಾವನೆಗಳು ಜೀವಂತ
ಪರಮಾತ್ಮನ ಸೇರಲೆಂದೆ ವರವಾಯಿತು ಸಾವಂತ
ಎಲ್ಲವೂ ಕೂಡುವಲ್ಲಿ ಆದನೊಬ್ಬ ಕವಿಯಂತ

ಯಾರೂ ಕರೆದಿಲ್ಲ ಅವನ ಈವರೆಗೂ ಕವಿಯೆಂದು
ಕೇಳುವವರೇ ಎಲ್ಲ ಅವನ ಬಾಳಿನ ಗುರಿ ಏನೆಂದು
ಅವನಿಗೆ ಬರೆವುದ ಬಿಟ್ಟು ಬೇರೇನೂ ತಿಳಿದಿಲ್ಲ
ಅವನ ನಿರಾಯಾಸ ಯತ್ನವ ಪ್ರತಿಭೆ ಅನ್ನುವವರಿಲ್ಲ

ಅವನಿಗೆ ತಿಳಿಯದೆ ಬಡವನಾಗುತ್ತ ಹೋದ
ಇನ್ನು ಘಾಡವಾಗಿ ಗೋಚರಿಸಿ ಜಗತ್ತಿಗೆ
ಹೀಗಿದ್ದರು ಹೇಗಾದರೂ ಹೊಂದಿಸಿ ಬಿಡುತಿದ್ದ
ಬೆಲೆ ಕಟ್ಟ ತೊಡಗುತ ನಿಮಿಷದ ಪುರುಸೋತ್ತಿಗೆ

ಕಾರಣಗಳ ಹುಡುಕುವಲ್ಲಿ ಅವ ಕೊಂಚ ಸೋಮಾರಿ
ಕಾರಣವಿರದೆ ಬರೆವುದೆ ರೂಢಿಯಾಗಿರಲು
ಹಾಗೂ ಸಿಕ್ಕರೆ ಅಂದಿಗೆ ಕೆಟ್ಟಂತೆ ಬೇರೆ ಕೆಲಸ
ಹಸಿದ ಹೊಟ್ಟೆ ಕಾಯ ಬೇಕೇ ರೊಟ್ಟಿ-ಬೆಣ್ಣೆ ಸಿಗಲು?

ಕವಿಯಾಗುವ ನಿಷ್ಚಯಕೆ ಇರದಿದ್ದರೂ ಬೆಂಬಲ
ಕಾವ್ಯ ಮಾತ್ರ ಏಕೆ ಹೊಮ್ಮಿ ಬರಲು ಕಾದಿದೆ?
"ಹೇಗಾದರೂ ಈ ಒಗಟಿಗೆ ಉತ್ತರ ಹುಡುಕಲೇ ಬೇಕು"
ಮುಂದುವರೆದ ಸಾಲುಗಳಿಗೆ ಕರೆದು ಹೇಳಿದೆ

ನಿಮಗೆ ಬಿಟ್ಟ ಆಯ್ಕೆ, ನನ್ನ ಹೇಗಾದರೂ ಕರೆಯಬಹುದು
ಕರೆಸಿಕೊಳ್ಳುವುದಷ್ಟೇ ನನಗೆ ಅನಿವಾರ್ಯ ಕಸುಬು
"ಅವ" ಬೇರೆ ಯಾರೂ ಅಲ್ಲ, ನನ್ನದೊಂದು ಛಾಯೆ ಮಾತ್ರ
ನನ್ನದೇ ಪ್ರಶ್ನೆಗವನೆ ನನ್ನದೆ ಜವಾಬು........


                                                  -ರತ್ನಸುತ

Monday, 12 March 2012

ಬಡವ v/s ಸಿರಿವಂತ


ಬಡವ ಕಟ್ಟಿದ ಚಿಲ್ಲರೆಯಲ್ಲೇ ಕನಸ ನೂರು
ಸಿರಿವಂತನಿಗದು ಕಿಸೆಯ ಸಣ್ಣ ಕನಸ ಚೂರು
ಬಡವನಿಗೆ ಕನಸ ಕೂಡಿಡುವುದೇ ಕೆಲಸ
ಸಿರಿವಂತನು ಸದ್ದಿಲ್ಲದೇ ಹಿಂಬಾಲಿಪ ದಿವಸ

ಚಿಲ್ಲರೆ ಸದ್ದಿಗೆ ನಿದ್ದೆಗೆಡುವ ಬಡವ ಸುಮ್ಮನೆ
ಸಿರಿವಂತನು ಲೋಕ ಮರೆತು ನಿದ್ರಿಸುವನು ಬೇಗನೆ
ಸಿರಿವಂತನಾಗುವಾಸೆ ಹಗಲಿರುಳು ಬಡವಗೆ
ಬಡತನವ ಮೆಟ್ಟಿ ನಿಂತ ಘರ್ವ ಸಿರಿವಂತಗೆ

ಕೂಡಿಟ್ಟುದ ಕಳೆಯದೆ ಕಾಪಾಡುವನು ಬಡವನು
ಕಳೆದುಕೊಂಡುದ್ದಕ್ಕೂ ಹೆಚ್ಚು ಪಡೆವ ಸಿರಿವಂತನು
"ನಾನು ಬಡವ", "ನಾನು ಬಡವ" ಅನ್ನುವವ ಬಡವನು
ಬಡವಾಗದ ಮನಸುಳ್ಳವನೆ ಸಿರಿವಂತನು


ಸಿರಿಯೆಂಬುದು ಕೂಡುವಾಗಷ್ಟೆ ಕೊಡದು ಸಂತಸ
ಕೊಟ್ಟು ಕುಡಿದಾಗ ಹೆಚ್ಚು ರುಚಿ ಕೊಡುವುದು ಪಾಯಸ
ಬಡತನವನು ಅಳಿಯಲು ಬೇಕಿಲ್ಲ ಕಾಂಚಾಣ
ದುಡ್ಡಿಗಿಂತ ದೊಡ್ಡದು ನಲುಮೆಯ ಜೀವನ.....

                                                            -ರತ್ನಸುತ   

Sunday, 4 March 2012

ನಾನೊಬ್ಬ ರಾಕ್ಷಸ

ಇರುವ ಎರಡು ಕಣ್ಣುಗಳಲಿ
ಅದೆಷ್ಟು ಬಾರಿ ಕಂಬನಿ
ಒರೆಸಿದಾಗ ಕೇಳಿತಲ್ಲಿ
ಮತ್ತೊಂದು ಕಂಬನಿಯ ದನಿ
ಸವರಿದ ಕೆನ್ನೆಗಳ ಸಾರಿಸಿ
ಸುಮ್ಮನಿರುವುದೇ ಕೆಲಸವೇ
ಜಾರಿದ ಪ್ರತಿಯೊಂದು ಹನಿಗೂ
ಕಾರಣ ಕೊಡಬೇಡವೇ?

ಹಿಡಿದ ಕನ್ನಡಿ ಜಾರಿಹೋಯಿತು
ಕನಸ ಕೈಗಳ ತಪ್ಪಿಸಿ
ಆದ ಚೂರುಗಳಲ್ಲಿ ನನ್ನನೇ
ಅತ್ತ ಹಾಗೆ ಪ್ರತಿಬಿಂಬಿಸಿ
ಜೋಡಿಸೋಣವೆಂದರೆ
ಚುಚ್ಚುವುದು ಅಂಚಿನ ಗುರಿಯಲಿ
ಹೀಗಿದ್ದರು ಹೇಗೆ ನಗಲಿ?
ತುಟಿಗೆ ಅರ್ಥವಾಗಲಿ

ಎದೆಗೆ ಅಪ್ಪುಗೆಯ ನಿರೀಕ್ಷೆ
ನುಡಿಗೆ ನಾಲಿಗೆ ಬೇಡವಾಗಿ
ಹಣೆಯ ಸಾಲುಗಳನ್ನು ಅಳಿಸಿ
ಹೆಜ್ಜೆ ಮುಳ್ಳಿನೆಡೆಗೆ ಸಾಗಿ
ಅಂಧವಲ್ಲದ ಅಂಧಕಾರ
ಕಣ್ಣುಗಳಿಗೆ ಆಹಾರವಾಗಿ
ಎದೆಯ ಬಡಿತ ನಿಂತು ಹೋಗಲಿ
ಒಮ್ಮೆಯಾದರು ಹೀಗೆ ಕೂಗಿ

"ನಾನು ಪಾಪಿ, ನಾನು ದುಷ್ಟ
ನಾನಾಗಲಿಲ್ಲ ಸ್ಪಷ್ಟ
ನನ್ನ ಇರುವಿಕೆ ನಷ್ಟ ತಾರದೆ
ಆಗಲಿಲ್ಲ ಯಾರಿಗೂ ಇಷ್ಟ
ಇಷ್ಟೇ ನನ್ನ ಋಣದ ಪಾಲು
ಹೆಚ್ಚು ಬಯಸಲು ಘೋರ ತಪ್ಪು
ಶಿಕ್ಷೆ ಆಗಲೇ ಬೇಕು ನನಗೆ
ನಾನು ತಪ್ಪಿತಸ್ತ ಒಪ್ಪು"

ಕಾಲ ಕಾಲಕೆ ರೂಪ ಬದಲಿಸೋ
ಓ ಪ್ರಕೃತಿ ದೇವನೇ
ನಾನು ನಿನ್ನಲಿ ಒಬ್ಬ ತಾನೇ?
ಕರೆಸುಕೋ ನನ್ನ ಸುಮ್ಮನೆ
ಇದ್ದು ಏನೂ ಆಗಲಿಲ್ಲ
ನನ್ನಿಂದ ಉಪಯೋಗವು
ನನ್ನ ಧಹನ ನೀನು ನಡೆಸೋ
ಅಸುರ ಸಂಹಾರ ಯಾಗವು.......

                                             - ರತ್ನಸುತ 

ನೀರವ ಸ್ಥಿತಿಯಲ್ಲಿ ಯಾರಿವನೆನ್ನದಿರು

ನೀರವ ಸ್ಥಿತಿಯಲ್ಲಿ ಯಾರಿವನೆನ್ನದಿರು ನೀನಿರದೆ ಈ ಗತಿ ಸಿದ್ಧಿಸಿತು ಜೀವಕೆ ಹಾಡುಹಗಲಲ್ಲಿ ನೀ ಆವರಿಸಿಕೊಂಡಿರುವೆ ಕನಸೊಂದು ಬೀಳುತಿದೆ ಗೊತ್ತಿದ್ದೂ ಬಾವಿಗೆ ಬ...