Posts

Showing posts from February, 2012

ನಿಮ್ಮವನಾಗುವ ನನ್ನ ಹಂಬಲ

ಹೇಯ್ ನಿಮ್ಮೊಂದಿಗೆ ನಾನೂ ಬರಲೇ ಒಂದಷ್ಟು ದೂರಇಳಿಸಬೇಕೆನಿಸಿದೆ ನನ್ನೆದೆಯ ಭಾರ ಕೊಟ್ಟರೆ ಸಾಕು ಒಂದಷ್ಟು ದೂರಕೆ ಜೊತೆ ಹೇಳಿ ಮುಗಿಸುವೆ ನನ್ನ ನೋವ ಕಥೆ
ನಾ ಕಥೆ ಹೇಳುತ ಭಾವುಕನಾಗಬಹುದು ಹಾಗೆಂದು ನಿಮ್ಮಲ್ಲಿಯೂ ಅದ ಬಿಂಬಿಸಲೋಲ್ಲೇ ನನ್ನ ಕಥೆ ಬಿಸಿ ದೋಸೆ ಆಗದಿರಬುದು ನಿಮಗೆ  ತಂಗಲಿಗೂ ಮೇಲು ಎಂಬುದ ಮಾತ್ರ ಬಲ್ಲೆ 
ನೀವು ಕೇಳಿದಂತೆ ನಟಿಸಿ ಜಾರಿದರು ಚಿಂತೆ ಇಲ್ಲ ನೂರರಲ್ಲಿ ಒಬ್ಬರಂತೆ ಆಗುವಿರಿ ನನಗೆ ನಿಮಗೂ ಮೀಸಲಿಡುವೆ ನನ್ನ ಬಾಳಿನಲ್ಲಿ ಒಂದು ಪುಟ ನಿಮ್ಮ ನೆನಪೇ ಪ್ರತೀ ಸಾಲಿನ ಅಕ್ಷರದ ಕೊನೆಗೆ
ನಿಮ್ಮಿಂದ ಎನೊಂದ ಅಪೇಕ್ಷಿಸಿಲ್ಲ ನಾನು ಹೆದರದಿರಿ ಇಷ್ಟೆಲ್ಲಾ ಹತ್ತಿರವಾಗಲು ನಿಮಗೆ ಎಂದಾದರು ಎದುರಾದರೆ ಒಮ್ಮೆ ನಕ್ಕು ನೋಡಿ ಸಾಕು ನಿಮಗೂ ಸ್ಪಂದಿಸಬಹುದು ನನ್ನೆದೆಯ ಬಡಿಗೆ
ಅರ್ಥವಾಗದ ನಾನು ಇನ್ನೂ ಗೊಂದಲವಾದೆ  ನಿಮಗೆ ಇಲ್ಲ ಸಲ್ಲದ ಭಾರವಾದೆ ಹೊರಲಾದರೆ ನನ್ನ ಸಹಿಸಿಕೊಳ್ಳಿ ಬಂಧುಗಳೇ ಇಲ್ಲವಾದರೆ ಬಿಡಿ ತಲೆ ಕೆಡಿಸಿಕೊಳ್ಳದೆ........
                                                  - ರತ್ನಸುತ

ನಾನು

ನಾ ಅರ್ಥವಾಗಿಲ್ಲವೆಂದು ಚಿಂತಿಸಬೇಡಿ ಗೆಳೆಯರೇ 
ನೀವು ನನಗೆ ಅರ್ಥವಾದಿರಲ್ಲ ಅಷ್ಟೇ ಸದ್ಯಕೆ ಸಾಕು 
ಮುಂದೆ ನನ್ನ ನಡುವಳಿಕೆ ನಿಮಗೆ ಘಾಸಿಯಾದರೆ
ಇದ್ದಲ್ಲೇ ನೀವು ನನ್ನ ತಿದ್ಧ ಬೇಕು
ನಾನಿಷ್ಟೇ ಅನಿಸಲು ನಿಮಗೆ, ನನ್ನಿಷ್ಟಕೆ ಬಿಟ್ಟುಬಿಡಿ 
ಬದಲಾಗಿ ನಿಮ್ಮಿಷ್ಟಗಳ ಕೊಲ್ಲಬೇಡಿ
ಕಷ್ಟ ಕಾಲದಲ್ಲಿ ಕೈ ಚಾಚುವುದು ನನ್ನ ಹೊಣೆ
ಹಿಡಿದೂ ಬಿದ್ದರೆ ನನ್ನ ಕೇಳಬೇಡಿ....

ನಾನೊಬ್ಬ ತೀರ ಸಾದಾರಣ ಮನುಷ್ಯ
ನನ್ನಲ್ಲೇನಿಲ್ಲ ಅಂತ ಹೇಳಿಕೊಳುವ ವಿಶೇಷತೆ
ನನ್ನ ಕುರಿತು ಪರಿಚಯಕೆ ನಾಲ್ಕು ಮಾತು ಹೆಚ್ಚು
ನೀಗಿಸಬಲ್ಲೆ ಅಷ್ಟೆ ಒಂಟಿತನದ ಕೊರತೆ
ಅಬ್ಬರಿಸುವ ಆರ್ಭಟ ಇಲ್ಲ ನನ್ನಲಿ
ಜೋತೆಗಿದ್ದವರೇ ನನ್ನ ಹಾರಿಸಬೇಕು ಬಾನಿಗೆ
ಆಳದ ಕಡಲಿಗೆ ನಾನಾಗಲಾರೆ ನೀರು
ಸ್ಫೂರ್ತಿ ಆಗಬಲ್ಲೆ ಆಗಾಗ ಒಂದು ಅಲೆಗೆ

ಹೀಗಿದ್ದೂ ಜೋತೆಯಾದವರಿಗೆ ನನ್ನ ನಮನ
ಹೀಗೇ ಸಾಗುತಿರಲಿ ನಿಮ್ಮೊಂದಿಗೆ ನನ್ನ ಪಯಣ
ಆಗಾಗ ನಿಮಗೂ ಮೂಡಬಹುದು ಜೊತೆಗೆ ಬೇಸರ
ಆದಕಾರಣ ನಿಮ್ಮ ರಂಜಿಸಲೇ ಈ ಕವನ
ದೂರ ಸರಿದವರೇ ಕ್ಷಮಿಸಿ, ನಾನೂ ಜೊತೆ ಬಾರದಾದೆ
ತಡವಾಗಿ ಹಿಂದಿರುಗಿ ನಿಮ್ಮ ಕಾಣದಾದೆ
ಹೇ ಎಲ್ಲ ಒಡನಾಡಿಗಳೆ ನಿಮ್ಮ ಒಡನಾಟವೇ
ನನ್ನ ಗುರುತಿಗೊಂದು ಬಣ್ಣ ರೇಖೆಯನ್ನು ನೀಡದೆ?....

                                           -ರತ್ನಸುತ