Posts

Showing posts from February, 2016

ಇಷ್ಟಕ್ಕೆ ಇಷ್ಟು

ಎಲ್ಲೋನಿಂತಿರುವಂಥನನ್ನಂಥವನನ್ನು
ಎಂತುಕದಲುವಹಾಗೆಮಾಡಿದೆ?
ನಿಲ್ಲುಎಲ್ಲಕೂಬೇಕುನಿನ್ನಾಕ್ಷೇಪಣೆಮತ್ತು
ಅಪ್ಪಣೆಇಲ್ಲನೀನೀಡದೆ

ಏಕೆಮೌನದಸಮರದಲ್ಲೆನ್ನಕೊಲ್ಲುವುದು
ಇಗೋಉಸಿರುನಿನ್ನಪಾದಕ್ಕೆ
ಕಲ್ಲಿರುವುದೇತನ್ನಕೆತ್ತಲೆಂದಾದಾಗ
ನೋವನ್ನುಲೆಕ್ಕಿಸುವುದೇಕೆ?

ಬೇಡಿಬಂಧನವನ್ನು, ಎದುರುಗೊಂಡವನನ್ನ
ಅಪ್ಪಿ-ತಪ್ಪಿಯೂಕ್ಷಮಿಸಬೇಡ
ನಿನ್ನಸೋಕಿದಮೇಲೆಸೊಕ್ಕುಹೆಚ್ಚಾದಂತೆ
ಬಡಿದಾಡಿದೆಹೃದಯಕೂಡ!!

ಒಲ್ಲೆನೆನ್ನುತಬಲ್ಲಕಳ್ಳವಿದ್ಯೆಗಳೆಲ್ಲ
ಊಹೆಗೈದವುನಿನ್ನನೋಡು
ಆಸೆಬಾನುಲಿಯಲ್ಲಿಮೀಸೆಚಿಗುರಿದವೇಳೆ
ಬರೆದಆಸಾಲೇಹಾಡು!!

ಮೆಲ್ಲಹೇಳುವೆಮತ್ತೆಏನೆಂದುಕೇಳದಿರು
ನಾಚಿಕೆಗೆಕೋಪಬರಬಹುದು
ಎಲ್ಲಕಲ್ಪನೆಗಳಿಗೂದೋಣಿಯೊಂದನುಕೊಡುವೆ
ನಿನ್ನಲ್ಲೇತೇಲುತಿರಬಹುದು
ಒಡೆದು
ನಿನ್ನಲ್ಲೇಮುಳುಗಲೂಬಹುದು!!

                                            - ರತ್ನಸುತ

ಪ್ರೇಮ ಪ್ರಯಾಸ

ನಿನ್ನತ್ತಹೂವೊಂದಎಸೆದೆನಾ
ಗಮನವನನ್ನತ್ತಸೆಳೆಯಲು
ಕನಸೊಂದನಾಕದಡಿಬಿಟ್ಟೆನಾ?
ಒಮ್ಮೆಲೆಕಣ್ತುಂಬಿಬರಲು

ಯಾವತ್ತೂಸಿಗದವಳುಸಿಕ್ಕೆನೀ
ತುಂಬುಸಂತೆಯಲಿಚೌಕಾಸಿಮಾಡುತ
ನಾನೊಂದುಮಳಿಗೆಯನುತೆರೆಯಲೇ?
ಇದ್ದಹೃದಯಕ್ಕೆಬೆಲೆಯನ್ನುಕಟ್ಟುತ

ಕುಂಟುಬಿಲ್ಲೆಆಟಕ್ಕೆಕರೆಯುವೆ
ಆಸೆಗೆಕಾಲುಬಂದಂತೆಓಡಿಬಾ
ಎಲ್ಲಆಟದಿನಾನಂತೂಸೋಲುವೆ
ಮತ್ತೆಮತ್ತೆಕಲಿಸುತ್ತಜಯಿಸುಬಾ

ಒಬ್ಬನೇಇದ್ದರೆಶೂನ್ಯನಾ
ನೀನಿರೆನನಗೆಸ್ಥಿರವಾದಹೆಸರು
ಜೀವಕ್ಕೆವಿಸ್ತಾರಬೇಕಿದೆ
ನೀಡುಅನುಮೋದನೆಯನಗೆಯಮೊಹರು

ಕಳೆದವನಕಿಸೆಯಲ್ಲಿಉಳಿದೆನೀ
ಎಂದೂಅಳಿಯದೆಉಳಿದವಿಳಾಸ
ನಗುವನ್ನೇನೀಮುಡಿಯಬೇಕು
ಅದಕೇನೋಡೆನ್ನಎಲ್ಲಪ್ರಯಾಸ!!

                                     - ರತ್ನಸುತ

ಇಲ್ಲಿ ಕೇಳು

ಮೈಯ್ಯೆಲ್ಲಾಮಸಿಯಾಗಿಸಿಕೊಂಡು
ನಿನಗೊಂದುಉಂಗುರಕೊಡಿಸುವುದಾದರೆ
ಯಾಕಾಗಬಾರದು?!!
ಮಾತನ್ನೇಕಸಿಮಾಡಿಕೊಂಡು
ಉಸಿರಲ್ಲಿನಿನ್ನಬರಮಾಡಿಕೊಂಡರೆಲ್ಲ
ಸರಿಹೋಗಬಹುದು!!

ಅತಿರೇಕದನಡತೆಯೊಂದಿಗೆ
ಅತಿಸನಿಹವಾಗತೊಡಗುವುದೇನು
ಅಪರಾಧವೇ?
ಅನುಭವಿಸಿದನೋವುಗಳಲ್ಲಿ
ಅತಿಕಮ್ಮಿಅನಿಸಿದನೊಂದ
ಬಾಹಂಚುವೆ!!

ಉದಯಿಸುವೆನನ್ನೊಳಗೆದಿನವೂ
ಹೊತ್ತಕಂದೀಲನುಹಿಡಿದು
ಓಮಲ್ಲಿಯೇ!!
ತೆರೆಯದಖಜಾನೆಯಿದೆನನ್ನಲಿ
ಅಲ್ಲಿಅಣು-ಅಣುವೂಕಾದಿಹುದು
ನಿನಗಾಗಿಯೇ!!

ಎಲ್ಲಮರೆತಿರುವಾಗಅಲ್ಲೇನೆನಪಾಗಿ
ಇಲ್ಲೇಎಲ್ಲಾದರೂನೆಲೆಸುಬಾ
ಪುನಃ... ಪುನಃ
ಎತ್ತಸಾಗಲಿಮತ್ತೆನಿನ್ನತ್ತಲೇಗಮ್ಯ
ಚ್ಯುತಿಗೊಳ್ಳದಪದ್ಯವಾಗುವುದಲ್ಲ
ನನ್ನಬರಹ

ಎದುರುಗೊಂಡಕನ್ನಡಿಯಲೆನ್ನಕಂಡಂತೆ
ಬೆದರುವೆನಿನ್ನಲ್ಲಿನನ್ನಕಂಡು
ಓದರ್ಪಣ
ಎದೆಯೊಂದುರಂಗಮಂದಿರದಂತೆಸಜ್ಜಾಗಿ
ಹೂಹಾಸಿದಹಾದಿಬಯಸಿದೆನಿನ್ನ
ನಿತ್ಯನರ್ತನ!!

                                          - ರತ್ನಸುತ

ಪರಿಹಾಸ

ಯಾವಎಲೆಮರೆಯಲ್ಲಿಮಾಗಿಸಲಿಮನವ
ಬಹುಕಾಲನಿನ್ನನ್ನುನೋಡದೆಉಳಿದು
ಹೀಗೇಕಳೆಯಲೇಇಡಿಜನುಮವನ್ನು
ನೀಕನವರಿಸಿಬಿಟ್ಟಕನಸನ್ನುಪಡೆದು

ಹೇಗೆಉಸಿರನ್ನುಹಿಡಿದಿಡುವಹವಣಿಕೆಯಲಿ
ಬೀಳ್ಗೊಡುವಪರಿಹಾಸಜೀವಉಳಿಸುವುದೋ,
ನಿನ್ನನ್ನೂಹಿಡಿದಿಡುವಇಂಗಿತಆದರೆ
ನನ್ನೊಳಗೆನಿನ್ನೊಲವನೆಲ್ಲಿಇರಿಸುವುದು?!!

ಕಣ್ಣಮುಂದೆಬರಲುಕಾವ್ಯಗಳುನಿರ್ಲಿಪ
ಮರುಹುಟ್ಟಿಗೆಇಡುತಲಿವೆಕೋರಿಕೆ
ನಿನ್ನಸೇರೋಆಶಯದಹೃದಯಹೊತ್ತಿಹೆ
ಇನ್ನುನನ್ನೊಳಗೆಮಿಡಿವುದುಏತಕೆ?

ಎಚ್ಚರದಇರುಳಿನಲಿಎಚ್ಚರಿಕೆತಪ್ಪಿಸುವ
ಸ್ವಚ್ಛಬೆಳಕಿನತುಣುಕುನೀನಾದರೆ
ತುಂಬುಗೊಂದಲದಲ್ಲಿಒಂದುಗೂಡನುಕಟ್ಟಿ
ಬಂಧಿಯಾಗಿಸುನಾನುಪಾರಾದರೆ

ಯಾವಕಾರಣಕೊಟ್ಟೂಕೊಲ್ಲದಿರುನನ್ನನ್ನು
ಕಾದಿರುವೆಕೆನ್ನೆಯಲಿಸಣ್ಣದಾಗಿ
ಅಳಿಸಿದಆಪಾದನೆನಂತರಕೆಇರಲಿ
ಕಣ್ಣೀರಹರಿಸುನೀನನ್ನಕೂಗಿ!!

                                             - ರತ್ನಸುತ

ಯಾವ ದಿಗಂತಕೆ?

ಯಾವಸಾಗರದಾಚೆಅಡಗಿದೆ
ನನ್ನನಂಬಿದಸಾಧನೆ?
ಈತೀರದಿಮುರಿದಹಡಗಿದೆ
ತೇಲಿಸಾಗಲೇಸುಮ್ಮನೆ?

ಎಲ್ಲಿನೆಟ್ಟರೆಗುರಿಯತಲುಪುವೆ
ಯಾವದಿಕ್ಕದುನನ್ನದು?
ಹಣತೆಯುಂಟು, ಕಿಚ್ಚೂಉಂಟು
ಮಬ್ಬಲೇನೂಕಾಣದು

ನಕ್ಕಎಲ್ಲಚುಕ್ಕಿಯೊಳಗೆ
ಒಂದಾದರೂಉದುರೀತೇ!!
ನೆರಳೇನೀನೇಕೊನೆವರೆಗೆ
ಶಂಕೆಯಿಲ್ಲದೆನಡೆಜೊತೆ

ಮುಗಿಲಮೇಲೆಯಾರೋನನ್ನ
ಹಿಂಬಾಲಿಸುವಂತಿದೆ
ಹೇಗೆಮರೆಸಲಿನನ್ನತಪ್ಪನು
ಸ್ವತಃನನಗೇಕಾಣದೆ?

ತಿರುವುಗಳತೆರುವಲ್ಲಿತವರಿನ
ದಾರಿಮರೆತೆನುಆದರೂ
ಮತ್ತೆಮತ್ತೆಮನ್ನಿಸುತತಾ
ಎದುರುಗೊಂಡನುದೇವರು

ಇದ್ದಮಾತ್ರಕೆಬಿದ್ದಬೀಜಕೆ
ಸಿಕ್ಕಸ್ಥಾನವುದೊರಕದು
ನಿದ್ದೆಗೆಟ್ಟರೆಕನಸುಬೀಳದು
ಹೆಜ್ಜೆಯಿಟ್ಟರೆಸವೆಯದು

                         - ರತ್ನಸುತ