Posts

Showing posts from April, 2012

ನನ್ನ "ವಿಶ್ವ"ಮಿತ್ರ

ಗೆಳೆಯ ಅಗೋ ಕರೆ ನೀಡಿದ ಬಹಳ ದಿನದ ನಂತರ ಮಾತನಾಡಿದಷ್ಟ್ಹೊತ್ತು ಎಲ್ಲಿ ಮಾಯ ಬೇಸರ ಚೇಷ್ಟೆ ಮಾಡಿಕೊಂಡು ಕಳೆದ ಒಂದೊಂದು ನಿಮಿಷಕೂ ಜಾರಲು ಮನಸಾಗದೆ ದಾರಿ ಮಾಡಿತೆಲ್ಲಕೂ
ಅತಿರೇಖವ ನಿಭಾಯಿಸಿ ದಡ್ಡತನವ ತೋರಿಸಿ ಪೆದ್ದ ಪೆದ್ದ ಆಲೋಚನೆಗಳಿಗೆ ತಲೆಯ ಬಾಗಿಸಿ ಅವನೊಮ್ಮೆ ನಕ್ಕರೆ ಇಲ್ಲೊಮ್ಮೆ ಚಿವುಟು ಜೊತೆಗೆ ನಕ್ಕಾಗ ಉಳಿಯಿತೆಲ್ಲಿ ನಡುವೆ ಒಗಟು
ಜೊತೆಗೆ ಸಾಗಿ ಬಂದೆವಲ್ಲಿ ಬಾನೆತ್ತರ ವಿಹರಿಸಿ ಕಾಣೆಯಾದ ನೆನಪುಗಳ ಕಣ್ಣ ಮುಂದೆ ಪಸರಿಸಿ ಬೀಗಿದೆವು ಒಬ್ಬೊಬ್ಬರು ಮತ್ತೊಬ್ಬರ ಕಂಡು ಸಾಗಿದೆವು ಮುಂದೆ ಹಾಗೆ ಮಾತನಾಡಿಕೊಂಡು
ಇಟ್ಟುಕೊಳ್ಳದೆ ಯೋಜನೆ ಮಾಡಿಕೊಳ್ಳದೆ ತಯಾರಿ ಮಾತಿನ ಬಾಣಗಳ ಸೀದ ಹೇಗೆ ಗುರಿಗೆ ಗುರಿಯಿಟ್ಟು? ತಿಳಿವ ಮೊದಲೇ ಗುಟ್ಟುಗಳನು ಬಹಿರಂಗ ಪಡಿಸಿದೆವು ಅನುಮಾನಗಳಿಗೆ ಪೂರ್ಣ ವಿರಾಮವನು ಕೊಟ್ಟು
ಎಲ್ಲವನ್ನು ಹಂಚಿಕೊಂಡು ಒಂದಿಷ್ಟು ಉಳಿಸಿಕೊಂಡು ಮುಂದೆಂದಾದರೂ ಹೇಳಬೇಕೆನಿಸಬಾರದೆ? ಮುಗಿಯಿತೆಂದು ಅಂದುಕೊಳ್ಳುವಷ್ಟರಲ್ಲಿ  ಮತ್ತೊಂದು ಚರ್ಚೆ ಗೆಳೆಯರ ಮಾತಿಗೂ ಒಂದು ಅಂಕುಶ ಇರಬಾರದೆ?
ಮುಗಿಯುವಷ್ಟರಲ್ಲಿ ಮನಸು ಹಗುರವಾಗಿ ಹಾರುತ್ತಿತ್ತು ಮುಗಿದ ಮೇಲೆ ಮತ್ತದೇ ನಿರೀಕ್ಷೆಯ ಭಾರ ಕಡಲ ಅಲೆಗಳಾಗಿ ನಮ್ಮ ಸಂದೇಶ ರವಾನಿಸಲು ನಾನೊಂದು ತೀರವಾದೆ, ಮತ್ತವನೊಂದು ತೀರ.......

                                                       -ರತ್ನಸುತ

ಆಡದ ಮಾತು

ತುಟಿ ದಾಟದೆ ಹೊಸ್ತಿಲಲ್ಲೇ, ಕುಳಿತಿತ್ತು ಒಂದು ನುಡಿ ಏನು ಅಂಜಿಕೆಯೋ ಪಾಪ, ಅರಿತು ದಾರಿ ಮಾಡಿ ಕೊಡಿ ಒಮ್ಮೊಮ್ಮೆ ಇದ್ದ ದಾರಿ, ಇಲ್ಲದಂತೆ ತೋಚುವುದು ಬಂದದ್ದು ಬರಲಿ ಅದರ ಇಷ್ಟಕ್ಕೆ ಬಿಟ್ಟು ಬಿಡಿ
ಹೊರ ಬರುವ ಕಾಲಕ್ಕೆ ಮಿಂಚಿ ಹೋದ ಸಮಯವಾಗಿ ಒಳ ಆಸೆಗಳೆಲ್ಲ ಅಲ್ಲೇ ಕೊಳೆತಂತಿದೆ ಮಾಗಿ,ಮಾಗಿ ಇದ್ದ ನೋವು ಹೆಚ್ಚುವುದು ಕೊಡದಿದ್ದರೆ ಕಾರಣ ಆದ ನೋವು ಸಹಿಸಲಾಗದು ಇರದಿದ್ದರೆ ಕಾರಣ
ಕಿವಿಗಳಿಲ್ಲದಾಗಲೇ ಹೆಚ್ಚು ನುಡಿವ ಹಂಬಲ ಎಷ್ಟೇ ಪಳಗಿ ಇದ್ದರು ಆ ಕ್ಷಣವೇ ಚೊಚ್ಚಲ ಅದಕೆ ತಕ್ಕಂತೆ ಮನ ದೃಢವಲ್ಲದೆ ಕೊರಗಿತ್ತು ಅದಕೇ ಆ ಗಳಿಗೆಗೆ ನಿರ್ಧಾರಕಿರದು ಬೆಂಬಲ
ಕೂಗಿ ಕರಗಿ ಹೋಗುತಿದೆ, ಸದ್ದಿಲ್ಲದೇ ಕೂಗೊಂದು ಕರೆಗೆ "ಹೂ"ಗೋಡುವವರು ತೋಚದೆ ಯಾರೆಂದು ಮನಸಿನಲ್ಲಿದೆ ಆ ಅಪರಿಚಿತ ಭಾವಚಿತ್ರ ಕೊರಳಿಗೆ ತಿಳಿವುದ್ಹೆಗೆ, ನಿಲ್ಲಿಸಿದರು ಸಾಕೆಂದು
ಪೂಜೆಗೈದು ಶುಭವಾಗದಿರಲು ದೇವರಲ್ಲ ಕೆಟ್ಟವ ಇದ್ದ ಹೂವ ಬಾಡ ಬಿಟ್ಟು ಹುಡುಕ ಬೇಡಿ ಗಂಧವ ಕಿರಣಗಳಿಗೆ ಜಾರಿ ಬಂದು ಬೆಳಕ ಬೀರೋ ಗುಣವಿದೆ ಕಣ್ಣು ಮುಚ್ಚಿ ಕತ್ತಲಿಗೆ ಸೊಲುತಾನೆ ಮಾನವ
ಅಳುವಾಗಿನ ಹನಿಗಳಿಗೆ, ಹೇಳ ಬೇಕು ಕಾರಣ ಇಲ್ಲವಾದರೆ ಹರಿಯಲೂ ಹಿಂಜರಿಯ ಬಹುದವು ಆಡದ ಮಾತುಗಳಿಗೆ ಶಿಕ್ಷೆಯಾಗಬೇಕೆಂದರೆ ಕಣ್ಣೀರಿನ ರೂಪ ತಾಳೆ, ಬಿಟ್ಟು ಹೋಗಬೇಕವು.............

ಮಾಡಿದ ತಪ್ಪುಗಳಿಗೆ ಪ್ರಾಯಷ್ಚಿತವಾಗಿ ಮನಸಾರೆ ಅತ್ತು ಬಿಡಿ, ಮನಸ್ಸು ಹಗುರಾದರೂ ಆಗಬಹುದು.......

                                         …

ನದಿಯ ತಿಳಿನೀರ ಕನ್ನಡಿಯೊಳಗೆ.......

Image

ಶುಭಾಷೆಯ ಗೆಳತಿ

ನಾ ಬರದಷ್ಟು ದೂರುಳಿದೆ ನಿನ್ನ ಮದುವೆಗೆ
ಎಷ್ಟು ಕಷ್ಟವಾಯಿತೋ ಗೊತ್ತೇ ನನ್ನ ನೆರಳಿಗೆ
ನನ್ನ ಬಿಟ್ಟು ಹಾರಿ ಬರಲು ಸಜ್ಜಾಗಿತ್ತು ಅದು
ಹಿಡಿದಿಟ್ಟ ಅಷ್ಟು ಹೊತ್ತೂ ಕೆಲಸ ಬಿತ್ತು ಬೆರಳಿಗೆ


ಅನಿಸಿತು, ಕರೆ ಮಾಡಿ ಸಾದಾರನವಾಗುವುದು ಬೇಡ
ಬೆಂಬಲಕೆ ನಿಂತಿತ್ತು ನನ್ನ ಮನವೂ ಕೂಡ
ಕಾಣಿಕೆಯೂ ಕೊಡದಷ್ಟು ಪಾಪಿಯಾದೆ ನಿನಗೆ ಇಂದು
ಮುಡಿಪಾಗಿರಿಸಲಾಗಲಿಲ್ಲ ನಿನಗೊಂದು ಹಾಡ

ಇಷ್ಟು ದಿನ ಆಗಿದ್ದೆ ಕಡಲೊಳಗಿನ ಒಂದು ಅಲೆ
ಈಗ ಸಿಕ್ಕಿರುವುದು ನಿನಗೂ ಒಂದು ತೀರ
ಯಾರಿಂದಲೂ ದೂರಪದಿಸಲಾಗದಂತೆ ಹೀರಿಕೊಳಲಿ
ನೀ ಬಿಡದೆ ಸೇರಿಕೋ ಅದರ ಅಂತರಾಳ


ನೀನಾಗು ಕಾಲಿ ಆಗಸಕೆ ಮಳೆ ಬಿಲ್ಲು
ನಿನ್ನವನ ಸಾಂಗತ್ಯದಿ ಎಲ್ಲವನ್ನು ಗೆಲ್ಲು
ಆಗಾಗ ಹಿಂದಿರುಗಿ ನೋಡಬೇಕು ನಡೆದ ದಾರಿ
ಅದಕಾಗಿ ತಿರುಗಿನೋಡಲೆಂದು ಒಮ್ಮೆ ನಿಲ್ಲು


ಅರಸುವಷ್ಟು ಹಿರಿಯನಲ್ಲ, ಹೇಳುವಷ್ಟು ಜಾಣನಲ್ಲ
ನಿನ್ನ ಜೀವನದಲಿ ಹೊರಳಿಸಿದ ಒಂದು ಪುಟ ನಾನು
ನಿನ್ನ ಹೊಸ ಬದುಕಿನಲ್ಲಿ ಹೀಗೊಂದು ಗುರುತ ಕೊಟ್ಟು
ನೆನಪಾಗಿ ಉಳಿಯುವ ಈ ಯತ್ನ ನನ್ನದು..........


ಹಸಿರಾಗಿರಲಿ ನಿನ್ನ ಬಾಳು ಎಂದಿನಂತೆ, ಇದೆ ಗೆಳೆಯರೆಲ್ಲರ ಪರವಾಗಿ ನನ್ನ ಕೋರಿಕೆ. ಅಭಿನಂದನೆ ಗೆಳತಿ.

                                                                            ಇಂತಿ ನಿನ್ನ ಮಿತ್ರ,
                                                                                  - ರತ್ನಸುತ


ಬಾಲಾಜಿ ಮೇಲೆ ಸಿಟ್ಟು ಬಂದಾಗ

ಅವನೊಬ್ಬ ವಿಚಿತ್ರ ಪ್ರಾಣಿಯ ಹೋಲುವ ಮನುಷ್ಯ. ಅವನ ಧುಷ್ಟ ಸ್ವಭಾವ (ಧುಷ್ಟತನವಿರದಿದ್ದರೂ ಧುಷ್ಟವೆನಿಸೋ ಸ್ವಭಾವ), ಕುಚೇಷ್ಟೆ ಇವೆಲ್ಲವೂ ಒಂದು ಹಂತದ ವರೆಗೆ ಸಹನೀಯವಾದರೂ ಕೆಲವೊಮ್ಮೆ  ಕ್ಷಣಕಾದರೂ ಸಹಿಸಲಾರದಷ್ಟು ಹಿಂಸೆ ಉಂಟು ಮಾಡುವಂತದ್ದು. ಅವನು ಬಾಲಾಜಿ, ಅವನಿಗೆ ಬಾರೀ ಸ್ವಾಭಿಮಾನ, ಅವ ಹೇಳಿದ್ದೆ ವೇದ ವಾಕ್ಯ, ತಿರುಗಿ ಬಿದ್ದರೆ ಅಷ್ಟೇ ಅವರ ಗತಿ; ನನ್ನ ಶತ್ರುಗೂ ಬೇಡ ಆ ಪಜೀತಿ. ಮಾತುಗಳು ಒಂದೊಂದು ಸಿಡಿ ಗುಂಡು, ಸಿಕ್ಕಿಹಾಕಿಕೊಂಡವ ಪಾಪ ಪಾಪಿಯೇ ಸರಿ. ಅವನಿಗೆ ಇಬ್ಬರು ತಮ್ಮಂದಿರು, ಬಾಲಾಜಿ ಎಂಬ ತಕ್ಕಡಿಯಲ್ಲಿ ಇಬ್ಬರನ್ನು ಹಾಕಿ ತೂಗಿದರೆ ಕಿಂಚಿಷ್ಟು ಆಚೆ-ಈಚೆ ಕದಲದೆ ಮುಳ್ಳು, ಮಧ್ಯಕ್ಕೆ ಅಂಟುವುದು ಗ್ಯಾರೆಂಟೀ ಎಂಬ ವಾದ ಅವನದ್ದು. ಭಾವುಕತೆ ಏನೆಂಬುದು ಅವನ ಜೊತೆ ಬೇರೆತವರಿಗೆ ಬಹು ಬೇಗನೆ ತಿಳಿದು ಬಿಡುತ್ತೆ, ಇಷ್ಟ ಪಟ್ಟವರಿಗೆ ಇರುವೆ ಕಚ್ಚಿದರೂ ರಾತ್ರಿಯೆಲ್ಲ ಅಳುವಂತ ಮುಗ್ಧ ಮನಸ್ಸು, ಅದೇ ಬೇಡದವರು ಗೋಳಾಡಿದರೂ ಆಲಿಸದೆ ಅವನಿಷ್ಟದತ್ತ ತಪಸ್ಸು. ಮುಂಗೊಪತನ ಅವನಿಗೆ ಹೇಳಿಮಾಡಿಸಿದ ಆಬರಣ, ಯಾವಾಗ ನಗುವನೋ ಇನ್ನ್ಯವಾಗ ಸಪ್ಪಗಿರುವನೋ ಎಂಬ ಅಂದಾಜು ಹಾಕುವುದು ಕಷ್ಟಸಾಧ್ಯವೆ ಸರಿ. ಅನುಸರಿಸಿ ನಡೆದವರಿಗೆ ಇಷ್ಟವಾಗದಿದ್ದರೂ, ಬೇಸರಿಕೆಯಂತೂ ತರದು. ಈ ವರೆಗೆ ಯಾರಲ್ಲೂ ನೋಡದ ಒಂದು ವಿಶಿಷ್ಟ ಗುಣ ಅವನಲ್ಲಿ ಕಂಡದ್ದು, ಅವ ಅಪರಿಚಿತರೊಡನೆ ಪಳಗಿ ಅವರ ತಮ್ಮದಿರೆಂದು ಹಚ್ಚಿಕೊಂಡ ಪರಿ. ಆ ವಿಷಯದಲ್ಲಂತೂ ಅವನು ಎತ್ತರದ ಸ್ಥಾನವನ್ನ…

ಪ್ರಭಾವಿ ಸಾಲುಗಳು ಮಿತ್ರನಿಂದ

ಮಿತ್ರನೊಬ್ಬ ಹೇಳಿದ ಹೀಗೆರಡು ಸಾಲುಗಳು "ಲೋಕವೆಲ್ಲ ತಿರುಗಿದರು, ಪದ ಹರಿಯದು.... ಶಬ್ದಕೋಶ ಅರಿತರು, ಪದ ಹರಿಯದು.... ಭಾವನೆಗಳ ತಿಳಿದಾಗ, ಪದ ನಿಲ್ಲದು...."
ಹೇಗೆ ಹೊಳೆದಿರಬಹುದು ಅವನಿಗೆ ಇವೆಲ್ಲ? ಅವನಿಗೂ ಕಾವ್ಯ ಮಾರ್ಗ ಸಿಕ್ಕಿರಬೇಕಲ್ಲ!! ನನಗವನ ಸಾಂಗತ್ಯ ಅತ್ಯವಶ್ಯಕವೆನಿಸಿದೆ ಹೇಗಾದರೂ ಜೊತೆಗೆ ಸೆಳೆದುಕೊಳ್ಳಬೇಕಲ್ಲ!!!!!!
ಬೆನ್ನು ತಟ್ಟುವವನು ಪೆನ್ನು ಹಿಡಿದನೆಂದರಲ್ಲಿಗೆ ನಿಶ್ಚಯವಾದಂತೆಯೇ ಸೇರ್ಪದಲು ಕವಿಗಳ ಸಾಲಿಗೆ ಕನ್ನಡ ಕವಿವಾಣಿಯನ್ನು ಅವಲಂಬಿಸಿರುವನು ಅವನು  ಅವನದೂ ಆಗಲಿ ಬೆಲೆ ಕಟ್ಟಲಾಗದ ನಾಲಿಗೆ
ಕನ್ನಡ ಡಿಂಡಿಮದ ಸದ್ದು, ಎಂತವರನೂ ಕರಗಿಸುವುದು ಪ್ರತಿಯೊಂದು ಕನ್ನಡಿಗನ ಶಿಲೆಯಾಗಿ ರೂಪಿಸಿ  ನಮ್ಮತನವ ಗುರುತಿಸುವ ಅನ್ಯರಲ್ಲೂ ಕಲೆಯಿದೆ ಕಲಾ ರಸಿಕತನ ಅವರ ಕಣ್ಣಲಿ ಪ್ರತಿಬಿಂಬಿಸಿ
ಇಷ್ಟು ಹೇಳಿ ಮುಗಿಸಲಾರೆ ಕೃತಜ್ಞತಾ ಪೂರ್ವಕವನ  ಆಶಿಸುವೆ ನಿನಗೆ ನಾಳೆಗಳ ಹೊಸತು ಬೆಳಕು ಇಟ್ಟ ಹೆಜ್ಜೆಯೆಡೆಗೆ ನಿನ್ನ ಸಾಧನೆಯ ಹಾದಿಯುಂಟು ನಿನ್ನಲ್ಲೇ ಅವೆತ  ಆ  ಕವಿಯನ್ನು ಕೆದಕು.......
                                                -ರತ್ನಸುತ

ನಗ್ನ ನಗು

ಅರಳಲೇಕೆ ತುಟಿಗಳು ಹೂ ಬಿರಿದ ಹಾಗೆ?
ಸೆಳೆತವೇಕೆ ಅದರೊಳು ತಾ ಕರೆದ ಹಾಗೆ?
ಸುರಿಯಿತೆಕೆ ಸುಧೆಗೆ ಮತ್ತಷ್ಟು ಸಿಹಿಯ ಸುಧೆಯ?
ಹೇಳಲ್ಹೊರಟಿತೇಕೆ ನೂರೊಂದು ಖುಷಿಯ ಕಥೆಯ?

ಹೆಗಲಿಗೊಂದು ಹೆಗಲು, ಮುಂದಾದರೆ ನಗೆ ಚೆಲ್ಲಿ
ತಂಪಾದಿತು ಬಿಸಿಲು, ನಗುವಿದ್ದರೆ ಜೊತೆಯಲ್ಲಿ
ಎಲ್ಲಿದೆ ಸಂಭಂದ, ನಗುವಿರದೆಡೆಯಲ್ಲಿ
ನಗೆ ಮಲ್ಲಿಗೆ ತಾನೇ ಹೆಣೆದ ಜಡೆಯಲ್ಲಿ

ಬಾಳೊಂದು ಬಿರುಕು, ನಗೆಯೇ ಪಂಚಪ್ರಾಣ
ಮನಸೊಂದಿದೆ ಅದಕೂ, ಕೆಣಕ ಬೇಡಣ್ಣ
ನಗೆ ಮೂಡದಿರಲು, ಕನಸು ಕೂಡ ಭಘ್ನ
ಮಗುವಾಗಿ ನಕ್ಕರಲ್ಲೇ ನಗೆಯಾಯಿತು ನಗ್ನ......


                                                   -ರತ್ನಸುತ

"ತು" ಪ್ರಾಸದ ಕಾವ್ಯ

Image