ನಾನು

ನಾ ಅರ್ಥವಾಗಿಲ್ಲವೆಂದು ಚಿಂತಿಸಬೇಡಿ ಗೆಳೆಯರೇ 
ನೀವು ನನಗೆ ಅರ್ಥವಾದಿರಲ್ಲ ಅಷ್ಟೇ ಸದ್ಯಕೆ ಸಾಕು 
ಮುಂದೆ ನನ್ನ ನಡುವಳಿಕೆ ನಿಮಗೆ ಘಾಸಿಯಾದರೆ
ಇದ್ದಲ್ಲೇ ನೀವು ನನ್ನ ತಿದ್ಧ ಬೇಕು
ನಾನಿಷ್ಟೇ ಅನಿಸಲು ನಿಮಗೆ, ನನ್ನಿಷ್ಟಕೆ ಬಿಟ್ಟುಬಿಡಿ 
ಬದಲಾಗಿ ನಿಮ್ಮಿಷ್ಟಗಳ ಕೊಲ್ಲಬೇಡಿ
ಕಷ್ಟ ಕಾಲದಲ್ಲಿ ಕೈ ಚಾಚುವುದು ನನ್ನ ಹೊಣೆ
ಹಿಡಿದೂ ಬಿದ್ದರೆ ನನ್ನ ಕೇಳಬೇಡಿ....

ನಾನೊಬ್ಬ ತೀರ ಸಾದಾರಣ ಮನುಷ್ಯ
ನನ್ನಲ್ಲೇನಿಲ್ಲ ಅಂತ ಹೇಳಿಕೊಳುವ ವಿಶೇಷತೆ
ನನ್ನ ಕುರಿತು ಪರಿಚಯಕೆ ನಾಲ್ಕು ಮಾತು ಹೆಚ್ಚು
ನೀಗಿಸಬಲ್ಲೆ ಅಷ್ಟೆ ಒಂಟಿತನದ ಕೊರತೆ
ಅಬ್ಬರಿಸುವ ಆರ್ಭಟ ಇಲ್ಲ ನನ್ನಲಿ
ಜೋತೆಗಿದ್ದವರೇ ನನ್ನ ಹಾರಿಸಬೇಕು ಬಾನಿಗೆ
ಆಳದ ಕಡಲಿಗೆ ನಾನಾಗಲಾರೆ ನೀರು
ಸ್ಫೂರ್ತಿ ಆಗಬಲ್ಲೆ ಆಗಾಗ ಒಂದು ಅಲೆಗೆ

ಹೀಗಿದ್ದೂ ಜೋತೆಯಾದವರಿಗೆ ನನ್ನ ನಮನ
ಹೀಗೇ ಸಾಗುತಿರಲಿ ನಿಮ್ಮೊಂದಿಗೆ ನನ್ನ ಪಯಣ
ಆಗಾಗ ನಿಮಗೂ ಮೂಡಬಹುದು ಜೊತೆಗೆ ಬೇಸರ
ಆದಕಾರಣ ನಿಮ್ಮ ರಂಜಿಸಲೇ ಈ ಕವನ
ದೂರ ಸರಿದವರೇ ಕ್ಷಮಿಸಿ, ನಾನೂ ಜೊತೆ ಬಾರದಾದೆ
ತಡವಾಗಿ ಹಿಂದಿರುಗಿ ನಿಮ್ಮ ಕಾಣದಾದೆ
ಹೇ ಎಲ್ಲ ಒಡನಾಡಿಗಳೆ ನಿಮ್ಮ ಒಡನಾಟವೇ
ನನ್ನ ಗುರುತಿಗೊಂದು ಬಣ್ಣ ರೇಖೆಯನ್ನು ನೀಡದೆ?....

                                           -ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩