ಬಡವ v/s ಸಿರಿವಂತ


ಬಡವ ಕಟ್ಟಿದ ಚಿಲ್ಲರೆಯಲ್ಲೇ ಕನಸ ನೂರು
ಸಿರಿವಂತನಿಗದು ಕಿಸೆಯ ಸಣ್ಣ ಕನಸ ಚೂರು
ಬಡವನಿಗೆ ಕನಸ ಕೂಡಿಡುವುದೇ ಕೆಲಸ
ಸಿರಿವಂತನು ಸದ್ದಿಲ್ಲದೇ ಹಿಂಬಾಲಿಪ ದಿವಸ

ಚಿಲ್ಲರೆ ಸದ್ದಿಗೆ ನಿದ್ದೆಗೆಡುವ ಬಡವ ಸುಮ್ಮನೆ
ಸಿರಿವಂತನು ಲೋಕ ಮರೆತು ನಿದ್ರಿಸುವನು ಬೇಗನೆ
ಸಿರಿವಂತನಾಗುವಾಸೆ ಹಗಲಿರುಳು ಬಡವಗೆ
ಬಡತನವ ಮೆಟ್ಟಿ ನಿಂತ ಘರ್ವ ಸಿರಿವಂತಗೆ

ಕೂಡಿಟ್ಟುದ ಕಳೆಯದೆ ಕಾಪಾಡುವನು ಬಡವನು
ಕಳೆದುಕೊಂಡುದ್ದಕ್ಕೂ ಹೆಚ್ಚು ಪಡೆವ ಸಿರಿವಂತನು
"ನಾನು ಬಡವ", "ನಾನು ಬಡವ" ಅನ್ನುವವ ಬಡವನು
ಬಡವಾಗದ ಮನಸುಳ್ಳವನೆ ಸಿರಿವಂತನು


ಸಿರಿಯೆಂಬುದು ಕೂಡುವಾಗಷ್ಟೆ ಕೊಡದು ಸಂತಸ
ಕೊಟ್ಟು ಕುಡಿದಾಗ ಹೆಚ್ಚು ರುಚಿ ಕೊಡುವುದು ಪಾಯಸ
ಬಡತನವನು ಅಳಿಯಲು ಬೇಕಿಲ್ಲ ಕಾಂಚಾಣ
ದುಡ್ಡಿಗಿಂತ ದೊಡ್ಡದು ನಲುಮೆಯ ಜೀವನ.....

                                                            -ರತ್ನಸುತ   

Comments

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩