Tuesday 24 January 2012

ನೀನಿರದ ಬದುಕು

ನಿನ್ನ ಕಂಡೊಡನೆ ಲೋಕವೇ ಮರೆವುದಿದೆಯಲ್ಲ
ನಾನಂತೂ ನಿನ್ನ ಹಿಂಬಾಲಿಸಿ ಅಲೆವುದಿದೆಯಲ್ಲ
ದಡ್ದನಾದರೂ ನಿನ್ನ ಪಡೆದೇ ತೀರುವ ಹಟವಿದೆಯಲ್ಲ
ನೀ ಕಾಣದಿರಲು ಸಿಗುವ ವೆದನೆಯಿದೆಯಲ್ಲ
ಇವೆಲ್ಲ ಎಲ್ಲಕೂ ಮಿಗಿಲಾಗಿ ಎದ್ದು ಕಾಣುವ ನರಳಾಟಗಳೇ...

ನಿನ್ನ ಜೊತೆ ಇರದೆ ಯಾರೂ ನೀಡರಲ್ಲ ಮನ್ನಣೆ 
ಜೀವನದ ಹೆಜ್ಜೆಜ್ಜೆಗೂ ಸಹಿಸಲಾಗದ ಶೋಷಣೆ
ಇದ್ದು ಬಿಡಬಾರದೇ ನನ್ನಲ್ಲೇ ಸುಮ್ಮನೆ
ಹುಡುಕಾಟಕೆ ವೃತಾ ಸಮಯ ವ್ಯರ್ತ ತಾನೇ?
ಇಷ್ಟೆಲ್ಲಾ ಮನಬಿಚ್ಚಿ ನುಡಿದರೂ ನಿನಗೆ ಕೆಳದೇಕೆ?...

ಒಮ್ಮೊಮ್ಮೆ ನಿನ್ನ ಸದ್ದಿಗೆ ಅರಿಯೋ ಮುನ್ನವೇ ತಿರುಗುವೆ
ಒಟ್ಟಾರೆ ಒಂದೆಡೆ ಕಂಡರಂತೂ ನೀರಿನಂತೆ ಕರಗುವೆ 
ಇದ್ದಷ್ಟು ಕಾಲ ಭೀಗಿ, ಇಲ್ಲವಾದಾಗ ಮರುಗಿ
ಮತ್ತೆ ನಿನ್ನದೇ ಮರುಬೇಟಿಗೆ ಕಾಯುವೆ
ಆಪ್ತನೆಂದು ಹಾಗೆ ಜೊತೆಗೆ ಇದ್ದುಬಿಡಬಾರದೆ ಹಾಗೆ?...

ನೀನೆಷ್ಟು ಮುಕ್ಯವೋ, ನೀನಿಲ್ಲದಾಗ ತಿಳಿವುದು
ನಾಚಿಕೆಯ ಕೀಲಿ ಕಳೆದು ಬುದ್ದಿ ಮಂಗವಾಗುವುದು
ನೀನಿದ್ದರುಂಟು, ಇಲ್ಲವಾದರಿದೆಯಲ್ಲ ಸಾಲದ ಗಂಟು
ಬಿಗಿಯುವುದು ಅದಕೆ ಮತ್ತೊಂದು ಭ್ರಮ್ಹಗಂಟು
ಸಾಲದ ಶೂಲಕೆ ಇನ್ನು ಬೆಸೆವುದು ನಂಟು...

ಚಿಲ್ಲರೆಯಾಗಿ ಬಾ... ಕಟ್ಟಿನ ಸಮೇತ ಬಾ...
ಹಿಂದಿರುಗುವ ಮನವ ಕೊಂದು ನನ್ನ ಬಳಿಗೆ ಓಡಿ ಬಾ...
ಬಂದಮೀಲೆ ಹಟವಮಾಡದಿರು ಹಿಂದಿರುಗಲು
ನನಗೆ ನೀ ಮೀಸಲೆಂದು ಇದ್ದವರಿಗೆ ಹೇಳಿ ಬಾ....
ಓಡಿ ಬಾ ಕಾಂಚಾಣ.... ಜಣ-ಜಣನೆ ಓಡಿ ಬಾ.....  


                                                    -ರತ್ನಸುತ 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...