Sunday 15 January 2012

ವಂದನಾಚಿಂತನೆ

ಅವಳು ಏನೋ ಅರಸುತ್ತ ಕಂಗೆಟ್ಟಿದ್ದಳು, ಯಾರದೋ ಪರಿಚಯಕ್ಕೆಂದೇ ಹಾತುರಿಯುತ್ತಿದವು ಅವಳ ಕಣ್ಗಳು. ಗಮನಿಸುತ್ತಲೇ ಇದ್ದವು ನನಗೇ ತಿಳಿಯದಂತೆ ನನ್ನ ಕಣ್ಗಳು ಕೂಡ, ಕಾರಣ ಇಷ್ಟೇ; ನನ್ನಲ್ಲಿದ ಗೊಂದಲದ ಪ್ರತಿಭಿಂಬ ಗೋಚರವಾಯಿತೆನಗೆ ಅವಳಲ್ಲಿಯೂ. ಹೌದು, ಅವಳೂ ಹೊಸಬಳೆ ಪಾಪ, ಇನ್ನೇನು ಮಾಡಿಯಾಳು ಧಿಕ್ಕು ನೋಡುವುದನ್ನು ಬಿಟ್ಟು.

ಅಷ್ಟು ಹೊತ್ತಿಗಾಗಲೇ ಪರಿಚಯ ಮಾಡಿಕೊಳ್ಳುವ ಐವತ್ತು ಪ್ರತಿಷಿತ ನಿರ್ಧಾರ ಆಗಿತ್ತು, ಇನ್ನು ಐವತ್ತು ಪ್ರತಿಷಿತ ಹಿಂಜರಿಕೆಯೇ. ಅಷ್ಟೇ ಸಾಕಿತ್ತು ಕೊಂಚ ಮುಂದುವರೆಯಲು, ಆದರು ತಡೆದಂತೆ ನಟಿಸಿದೆ. ಅಪರಿಚಿತ ಚಹರೆಗಳ ಸಮೀಕ್ಷೆ ಮತ್ತೆ ಮುಂದುವರೆಯಿತು, ಹೆಜ್ಜೆಜ್ಜೆಗೂ ಮತ್ತೆ ಅದೇ ಸೋಲಿನ ಅನುಭವ.

ಅಚಾನಕ್ಕಾಗಿ ಒಂದು ಮೆಲ್ಲ ಧನಿಯಲ್ಲಿ ಕೇಳಿಬಂತು ಒಂದು ಕರೆ, ಅದು ನನ್ನನೋ ಇಲ್ಲವೋ ಎಂಬ ಪ್ರಶ್ನೆ ಹಾಕಿಕೊಳ್ಳುವಷ್ಟರಲ್ಲೇ ನಾನೇ ಎಂಬ ಕಾತರಿ ಆಯಿತು ಜೊತೆಗೆ ಗಾಬರಿಯೂ ಆಯಿತು. "ನಿಮ್ಮ ಮೊಬೈಲ್ ಸ್ವಲ್ಪ ಕೊಡ್ತೀರ, ಒಂದು ಕರೆ ಮಾಡೋದಿದೆ " ಎಂದಳಾಕೆ. ಬೇಕೇ, ಬೇಡವೇ ಎಂಬ ನಿರ್ದಾರವ ಮಾಡುವ ಮೊದಲೇ ನನ್ನ ಕೈಯ್ಯಿಂದ ಜಾರಿ ಅವಳ ಕೈ ಸೇರಿತು ನನ್ನ ಮೊಬೈಲು. ಅಮ್ಮನ ಜೊತೆ ಮಾತನಾಡಿದ ನಂತರ ಅವಳ ಕಣ್ಣಲ್ಲಿ ಕೃತಜ್ಞತಾ ಮನೋಬಾವವಿತ್ತು, ಅದು ನನ್ನ ಮೇಲೆಯೇ ಎಂಬುದು ವಿಶೇಷ.

ಪರಸ್ಪರ ಪರಿಚಯದ ನಂತರ ಇನ್ನೇನು ವಿದಾಯದ ಸಮಯ, ಸುರ್ಯಾಸ್ತಮದ ವೇಳೆಯಲ್ಲಿ ಬಿರಿದ ಹೂಗಳು ನೊಂದಂತೆ ಅನಿಸಿತ್ತಾದರೂ ಮನದ ಪುಟ್ಟ ಗೂಡಿನೋಳಗಿಂದ ಆಕ್ರಂದನ ಮುಗಿಲು ಮುಟ್ಟಿತ್ತು, ಅದು ಬುದ್ದಿ ಕದವ ತಟ್ಟಿತು. ಇನ್ನೇನು ಅಷ್ಟರಲ್ಲಿ ಕಣ್ಣೋಟದ ದೂರದಲಿ ಒಂಟಿ ಪಯಣ ಬೆಳೆಸಿ ಹೊರಟೇ ಹೋದಳಾ ಅನಾಮಿಕೆ.......

(ವಿಶೇಷ ಸೂಚನೆ: ಇದು ಕೇವಲ ಕಾಲ್ಪನಿಕ ಶೃಷ್ಟಿ ಅಲ್ಲ, ಪ್ರತ್ಯಕ್ಷ ಅನುಭವಕ್ಕೆ ಒಗ್ಗರಣೆ ಬೆರೆಸಿ ಹೊರತಂದ ಕಥಾವಸ್ತು.)

                                                                                                              - ರತ್ನಸುತ

2 comments:

  1. hudigiyanu kandodane manasu chanchala
    mathanadalu hodhare naalige vilavila
    eedhyellavu vayasina mayajala

    ReplyDelete

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...