Tuesday, 8 September 2020

ನದಿಯೇ...ನದಿಯೇ...

ನದಿಯೇ...ನದಿಯೇ... 

ಕಡಲ ಸೇರಲು ಹರಿಯೇ 
ಒಲವ ಮಳೆಯೇ 
ಕ್ಷಣವೂ ನಿಲ್ಲದೆ ಸುರಿಯೇ 
ಕವಿದ ಇರುಳೇ 
ಇರಿದು ಕೊಲ್ಲುವ ಗುರಿಯೇ 
ಬೆಳಕ ಕಸಿದು 
ನೀ ಕಾದಾಡುವೆ ಸರಿಯೇ  
ದಾರಿ ಮರೆತ ನಗೆ ನೋವಲ್ಲಿ ಕರಗುತಿದೆ
ಬಿರಿದ ತುಟಿಯ ತೆರೆ ಮರೆಯಲ್ಲಿ ಶಪಿಸುತಿದೆ..  

ನದಿಯೇ ನದಿಯೇ
ಕಡಲ ಸೇರಲು ಹರಿಯೇ 
ಕವಿದ ಇರುಳೇ 
ಇರಿದು ಕೊಲ್ಲುವ ಗುರಿಯೇ 
ಬೆಳಕ ಕಸಿದು 
ನೀ ಕಾದಾಡುವೆ ಸರಿಯೇ  

ಏಕಾಂತದ ಹಸಿ ಗಾಯಕ್ಕೆ ಇನ್ನು 
ಬೇಕಾಗಿದೆ ಲೇಪನ 
ಬಾ ಸೋಕಿಸು ನೆರಳ ಒಮ್ಮೆ ಹಾಗೆ 
ಹುಡುಕಾಡದೆ ಕಾರಣ 
ಇಡಿ ಆಕಾಶವೇ ನನ್ನ ಬೆಂಗಾವಲಾಗಿ 
ನಿಂತಂತೆ ನೀನಿದ್ದರೆ 
ಮಿಡಿವ ಗುಂಡಿಗೆ ಸದ್ದಿಗೆ ಸೋತು ಹೋಗಿ 
ಕಣ್ಣೀರಿನ ಆಸರೆ
ಮನಸೇ ಇರದೆ 
ಹುಸಿ ಉಸಿರಾಟ ನಡೆಸಿರುವೆ

ನದಿಯೇ ನದಿಯೇ
ಕಡಲ ಸೇರಲು ಹರಿಯೇ 
ಕವಿದ ಇರುಳೇ 
ಇರಿದು ಕೊಲ್ಲುವ ಗುರಿಯೇ 
ಬೆಳಕ ಕಸಿದು 
ನೀ ಕಾದಾಡುವೆ ಸರಿಯೇ 

ಹೇಗಾದರೂ ನೀ ಎದುರಾಗು ಬೇಗ
ಹೂ ಬಾಡುವ ಹಾಗಿದೆ 
ಸದ್ದಿಲ್ಲದ ಈ ಸಂತೆಲಿ ಈಗ
ಪಿಸುಮಾತು ಬೇಕಾಗಿದೆ
ಸರಿವ ಕಾಲ ಇನ್ನಾದರೂ ಸಾಗಿ ಬೇಗ
ಕೊನೆಗಾಣಲಿ ಹಾಗೆಯೇ
ನೆನಪಾದಂತೆ ಎದುರಾಗು ಎದೆಗೊರಗುವಾಗ
ಮಗುವಂತೆ ಹಗುರಾಗುವೆ 
ಬಯಲ ಹಣತೆ 
ಉರಿಯೋ ಮುಂಚೆಯೇ ಸೋತಿದೆ... 

ನದಿಯೇ ನದಿಯೇ
ಕಡಲ ಸೇರಲು ಹರಿಯೇ 
ಒಲವ ಮಳೆಯೇ 
ಕ್ಷಣವೂ ನಿಲ್ಲದೆ ಸುರಿಯೇ 
ಕವಿದ ಇರುಳೇ 
ಇರಿದು ಕೊಲ್ಲುವ ಗುರಿಯೇ 
ಬೆಳಕ ಕಸಿದು 
ನೀ ಕಾದಾಡುವೆ ಸರಿಯೇ  
ದಾರಿ ಮರೆತ ನಗೆ ನೋವಲ್ಲಿ ಕರಗುತಿದೆ
ಬಿರಿದ ತುಟಿಯ ತೆರೆ ಮರೆಯಲ್ಲಿ ಶಪಿಸುತಿದೆ..  

Monday, 7 September 2020

ಇಳಿಸಂಜೆಯ ಮಳೆ

ಇಳಿಸಂಜೆಯ ಮಳೆ 

ಹನಿ ಹನಿ ಹನಿ ಹನಿ ಜಾರುತಿವೆ 
ಇಳೆಯ ಎದೆ ಕದ 
ಬಡಿಯುತ ಚಿಟ ಪಟ ಸುರಿಯುತಿದೆ 
ಒಲವೆಂಬುದು ಮಾಯಾ ಮಳೆಯಂತೆ 
ಬಂದಂತೆ ಬಂದು ಮರೆಯಾಗಿ 
ಮತ್ತೆಲ್ಲೋ ಸಿಗುವ ಮೋಡದಲಿ 
ತಣಿಸುವುದು ಮನಸನ್ನು, ಮರೆಸುವುದು ಜಗವನ್ನು ... 

ಕೊಡೆಗಳ ಮೇಲೆ ಹನಿಗಳ ಕುಣಿತ  
ಮುತ್ತಿನ ಸ್ವಗತಗಳು 
ಇಳಿಮುಖವಾದರೂ ಒಳಗೊಳಗಿನ್ನೂ
ತೊಡಗಿದ ಭಾವಗಳು
ಕಾಮನಬಿಲ್ಲು ಮೂಡುವ ಹಾಗೆ 
ನಗೆ ಮೂಡಿತು ಸಹಜ 
ಒಲವಿನ ಗೀತೆ ಬರೆಯಲು ಸುಲಭ 
ಮಳೆಯೆಂಬುದೇ ಕಣಜ 
ಆರಿಸುತ ಪೋಣಿಸುವೆ ಬೇಕೆಂದ ಹನಿಗಳ
ಹಾಡುತಲಿ ಮೈ ಮರೆಯೋ ಮಾರ್ಗವಿದು ಅತಿ ಸರಳ

ಇಳಿಸಂಜೆಯ ಮಳೆ 
ಹನಿ ಹನಿ ಹನಿ ಹನಿ ಜಾರುತಿವೆ 
ಇಳೆಯ ಎದೆ ಕದ 
ಬಡಿಯುತ ಚಿಟ ಪಟ ಸುರಿಯುತಿದೆ 
ಕರೆವಾಗ ಬಾರದು ಮಳೆಗಾಲ 
ಬಂದಾಗ ನಿಲ್ಲದು ಬೇಡಿಕೆಗೆ 
ಅನುರಾಗವೂ ಹೀಗೆಯೇ ಅನುಗಾಲ 
ತಣಿಸುವುದು ಮನಸನ್ನು, ಮರೆಸುವುದು ಜಗವನ್ನು ... 

ಹಸಿ ನೆಲವೊಂದು ಹಾಳೆಯ ಹಾಗೆ
ಹಸಿರಿಗೆ ಕವಿ ಮನಸು
ರಸನಿಮಿಷಗಳ ಹೊಸದಾಗಿಸಲು
ಮುಗಿಲ ಅನುಕರಿಸು
ಇರುವೆಯ ಸಾಲು ಬಿಡಿಸಿದ ಗೆರೆಯ 
ದಾಟಲೂ ಅಪ್ಪಣೆಯೇ?
ಗರಿ ಒದರುತಲಿ ಉದುರುವ ಹನಿಯು
ಮಳೆಗೆ ಟಿಪ್ಪಣಿಯೇ!
ನಿಂತರೂ ತಾ ನಿಲ್ಲದಿದೆ ಎದೆಯ ಒಳಮಳೆ
ನೆನಪುಗಳು ಭೋರ್ಗರೆದು ನೆನೆಸುತಿವೆ ಈ ವೇಳೆ... 

ಮಾತಾಡು ಓ ಅನುರಾಗಿ

ಮಾತಾಡು ಓ ಅನುರಾಗಿ 

ಆಲಿಸುವೆ ಮಗುವಂತೆ 
ನೀ ಬರುವ ಸಲುವಾಗಿ 
ಕಾದಿರುವೆ ಹೂವಂತೆ 
ಬಾ ಕೂಗು ನಿನ್ನ ಸೇರುವಾಸೆ 
ನೀ ಇರದೆ ಉಸಿರು ಎಲ್ಲಿದೆ .. 

ಮಾತಾಡು ಓ ಅನುರಾಗಿ 
ಆಲಿಸುವೆ ಮಗುವಂತೆ 
ನೀ ಬರುವ ಸಲುವಾಗಿ 
ಕಾದಿರುವೆ ಹೂವಂತೆ 

ತುಂಬು ಪ್ರೀತಿಯಲಿ ಕೂಡಿರುವ ಜೀವಗಳು 
ಒಬ್ಬರ ಮನಸು ಮತ್ತೊಬ್ಬರಿಗೆ ಕನ್ನಡಿಯಂತೆ ನೋಡು 
ತುಂಬು ಪ್ರೀತಿಯಲಿ ಕೂಡಿರುವ ಜೀವಗಳು 
ಒಬ್ಬರ ಮನಸು ಮತ್ತೊಬ್ಬರಿಗೆ ಕನ್ನಡಿಯಂತೆ ಬಿಂಬವ ಬೀರೋ ಸುಂದರವಾದ ಚಿತ್ರದ ಹಾಗೆ.. 


ನಿನ್ನ ಹೆಜ್ಜೆಯ ಮೇಲೆ ಈ ನನ್ನ ಗುರುತನು ಇಟ್ಟೆ 
ನಿನ್ನತ್ತಲೇ ವಾಲಿಸಿ ಚಿತ್ತವ ಸಂಪೂರ್ಣ ಗೆಳೆಯ...
ಆಸೆ ಗೋಪುರದಲ್ಲಿ ಕೊರೆದಿಟ್ಟೆ ನಿನ್ನದೇ ಹಸರ 
ಗೀರುತ್ತಲ್ಲೇ ಮೂಡಿತು ಪ್ರೀತಿಯ ವ್ಯಾಕರಣ ಗೆಳತಿ..

ತೀರಾ ಹೊಸಬನು ಅಂತ ಅನಿಸಲೇ ಇಲ್ಲ ಪರಿಚಯಕೆ.. 

ಮಾತಾಡು ಓ ಅನುರಾಗಿ 
ಆಲಿಸುವೆ ಮಗುವಂತೆ 
ಬಾ ಕೂಗು ನಿನ್ನ ಸೇರುವಾಸೆ 
ನೀ ಇರದೆ ಉಸಿರು ನಿಂತಿದೆ.. 

ಕಡಲನು ಸೇರುವೆ ಜಾಗ, ನದಿಯೊಂದಕೆ ಸುಂದರ ತಾಣ 
ಅದು ಹರಿಯುವ ದಿಕ್ಕನ್ನು ತೋರುವ ಸೆಳೆಯಂತೆ... ನದಿಯೇ 
ಮೂಡುವ ರಾತ್ರಿಗಳಲ್ಲಿ ನಾಳೆಗಳ ಕನವರಿಸಿದೆನು 
ಕನವರಿಕೆಯ ತುಂಬ ಬೆರೆತವ ನೀನೇನೇ.. ಒಲವೇ 

ಏಕೋ ನಡುನಡುವಲ್ಲಿ ಮರೆಯುವೆ ನನ್ನೇ ನೀನಿರಲು.. 

ಮಾತಾಡು ಓ ಅನುರಾಗಿ 
ಆಲಿಸುವೆ ಹೂವಂತೆ 
ಸಾಕಿನ್ನು ಈ ಮೌನ 
ನಗುವಲ್ಲೇ ನೀ ಬಿಗಿಯಾಗಿ 
ಹಿಡಿದಿಟ್ಟು ನನ್ನನ್ನ 

ಮುಂಬಾಗಿಲಿಗೆ ಕಣ್ಣಿರಿಸಿ

ಮುಂಬಾಗಿಲಿಗೆ ಕಣ್ಣಿರಿಸಿ 

ನಾ ಕಾದೆ ನಿನ್ನ ಬರುವಿಕೆಗೆ 
ಬಾರದೆ ನೀ ಮನ ಭಾರದಲಿ 
ಉಲಿಯುವುದಾದರೂ ಹೇಗೆ?
ತಂಗಾಳಿಯನು ತಡೆದಿರಿಸಿ 
ತುಸು ತಡವಾಗಿಸುವ ಸಾಹಸಕೆ 
ಒಲ್ಲದ ಮನಸಲಿ ಬೀಸಿ ಸಾಗಿತು 
ಮುನಿಸನು ಧರಿಸಿದ ಹಾಗೆ.. 

ಕಣ್ಣಲ್ಲಿ ಹುಸಿ ಕೋಪ ತುಂಬಿ

ಕಣ್ಣಲ್ಲಿ ಹುಸಿ ಕೋಪ ತುಂಬಿ 

ನೋಡೋ ಆಸೆ ನಿನ್ನನ್ನು
ಒಳಗೊಳಗೆ ಪುಟಿದ ಖುಷಿಯಲ್ಲಿ 
ಮರೆತು ಜಗವನ್ನು
ನನ್ನಲ್ಲಿ ಸುಳಿದಾಡೋ ನಿನ್ನ 
ಬೇರೆ ಮಾಡೋ ಕನಸನ್ನು 
ಸೆಣೆಸಾಡಿ ಸೋಲಿಸುವೆ ನೀಡು 
ನಿನ್ನ ಜೊತೆಯನ್ನು 
ನೆರವಾಗಲು ಬಾ ಕೂಡಲೇ ನೀ 
ಮೊರೆವ ಅಲೆಯಂತೆ ಎದೆ ತೀರದಲಿ 

ಬರುವೆ ಕಾದಿರು ನೀ ಅಲ್ಲೇ 
ನಾ ನಿನ್ನ ಸೇರುವೆ ನಲ್ಲೆ 
ನಿನ್ನೆಲ್ಲ ಕಂಬನಿ ಹೀರಿ 
ಪ್ರೀತಿ ಹಿಂದಿರುಗಿಸಬಲ್ಲೆ 

ಕಣ್ಣಲ್ಲಿ ಹುಸಿ ಕೋಪ ತುಂಬಿ 
ನೋಡೋ ಆಸೆ ನಿನ್ನನ್ನು
ಒಳಗೊಳಗೆ ಪುಟಿದ ಖುಯಲ್ಲಿ 
ಮರೆತು ಜಗನ್ನು... 

ಉರಿದ ಹಣತೇಲಿ, ಬೆಳಕು ಹರಿದಂತೆ 
ಇರುವೆ ಜೊತೆಯಾಗಿ ಎಂದೆಂದೂ ನಿನ್ನೊಂದಿಗೆ 
ತಿರುಗೋ ಮುಳ್ಳನ್ನು, ತಡೆದು ಹಿಡಿವಾಗ 
ಸಮಯ ಸರಿದಂತೆ ನಮ್ಮಿಷ್ಟದನುಸಾರಕೆ 

ನೆರಳನ್ನು ನೀ ಸೋಕಿ ನಡೆವಾಗ 
ಕರೆದಂತೆ ಕಿರುಬೆರಳೀಗ ಒಂದಾಗೋಕೆ

ಬರುವೆ ಕಾದಿರು ನೀ ಅಲ್ಲೇ 
ನಾ ನಿನ್ನ ಸೇರುವೆ ನಲ್ಲೆ 
ನಿನ್ನೆಲ್ಲ ಕಂಬನಿ ಹೀರಿ 
ಪ್ರೀತಿ ಹಿಂದಿರುಗಿಸಬಲ್ಲೆ 

ನೀ ಸನಿಹಕೆ

ನೀ ಸನಿಹಕೆ, ಬರುವ ಸಮಯಕೆ 

ಚೂರು ವಿಚಲಿತ, ಸೋಲು ಸುಲಲಿತ, ಪ್ರೀತಿ ಪ್ರಚಲಿತ 
ನಿನ್ನ ಬಯಸಿ, ನನ್ನ ಹೃದಯಕೆ 
ಹೀಗೇ ಪ್ರತಿ ಸಲ, ಏಕೋ ತಳಮಳ, ಪ್ರೇಮ ಅಸದಳ 

ಜನಿಸಿದೆ ಹೊಸ ದಿನ
ನಿನ್ನ ನೋಡೋ ನೆಪದಲಿ 
ಬರೆದು ಕೊಡುವೆ ಉಸಿರನು 
ಗೀಚಿ ಒಂದೇ ಸಾಲಲಿ 

ಬಾ ಬಿಡಿಸುವೆ, ಒಲವ ಒಗಟನು 
ಕೇಳಿ ಪಡೆಯುವೆ, ನೀಡಿ ತಣಿಯುವೆ, ಪ್ರೀತಿ ಉಡುಗೊರೆ 
ದಾರಿ ಕಾಣದೆ, ಉಳಿದೆ ನಿನ್ನಲೇ 
ನನ್ನ ಗುರುತಿಸು, ಕಣ್ಣ ಗಮನಿಸು, ಪ್ರಾಣ ಉಳಿಸುತ 

ಪ್ರಾಯವೇ ಅಪಾಯವು
ಹೇಳಿ ಕೊಡುವೆ ನಿಧಾನಿಸು 
ಆದರೆ ಆವರಿಸುವೆ 
ಮನದಿ ನನ್ನ ಧ್ಯಾನಿಸು... 

ತುಂಬಿಕೊಳ್ಳೋದಾ ನಿನ್ನ ತೋಳಲ್ಲಿ?

ತುಂಬಿಕೊಳ್ಳೋದಾ ನಿನ್ನ ತೋಳಲ್ಲಿ?

ಹಂಚಿಕೊಳ್ಳೋದಾ ಆಸೆ ಕಣ್ಣಲ್ಲಿ? 
ಅಯ್ಯೋ ಅಯ್ಯೋ ಏನೋ ಮೋಡಿಯೇ ಆದಹಾಗಿದೆ 
ನೋಡಿದಲ್ಲೇ ನಿಂತ ಪ್ರಾಣವು ಮಾತನಾಡಿದೆ 
ಅಂದ ಚಂದ ಎಲ್ಲ ನಿನ್ನ ಸ್ವಂತ ಆದಂತಿದೆ 
ನಿನ್ನ ಮುಂದೆ ಮೌನಿಯಾದೆ, ಬೇರೆ ಏನೂ ತೋಚದೆ... 
ತುಂಬಿಕೊಳ್ಳೋದಾ ನಿನ್ನ ತೋಳಲ್ಲಿ 
ಹಂಚಿಕೊಳ್ಳೋದಾ ಆಸೆ ಕಣ್ಣಲ್ಲಿ 

ಬರೆದು ಕೊಡುವೆ ಎಲ್ಲ ಖುಷಿಯನ್ನು 
ಬದಲಿ ಪಡೆದು ನಿನ್ನ ಮನಸನ್ನು 
ಹಾಗೆ ಸುಮ್ಮನೆ ಮಿಂದ ಗುಂಗಲ್ಲಿ 
ಮತ್ತೆ ಮರುಳಾದ ಹಾಗಿದೆ 
ಇದ್ದಕ್ಕಿದ್ದಂತೆ ಎಲ್ಲ ಬದಲಾಗಿ 
ಏನೋ ಸರಿಯಾಗಿ ಹೋಗಿದೆ 
ಪ್ರೇಮದ ಸಂತೆಯಲ್ಲಿ ನೀ 
ಕೊಂಡು ಹೋಗು ಬಾ ನನ್ನನೇ 
ಬೇರೆ ಏನಿಲ್ಲ ಪ್ರೇಮಿ ಆಗೋದೆ 
ಇನ್ನು ಈ ಹೃದಯ ನಿನ್ನದೇ
ಅಂದ ಚಂದ ಎಲ್ಲ ನಿನ್ನ ಸ್ವಂತ ಆದಂತಿದೆ 
ನಿನ್ನ ಮುಂದೆ ಮೌನಿಯಾದೆ, ಬೇರೆ ಏನೂ ತೋಚದೆ... 

ತುಂಬಿಕೊಳ್ಳೋದಾ ನಿನ್ನ ತೋಳಲ್ಲಿ 
ಹಂಚಿಕೊಳ್ಳೋದಾ ಆಸೆ ಕಣ್ಣಲ್ಲಿ... 

Tuesday, 1 September 2020

ನನ್ನೊಲವೆ ನೀ ನನ್ನೊಲವೇ

ನನ್ನೊಲವೆ ನೀ ನನ್ನೊಲವೇ

ಈ ಜೀವದ ಇಂಚರವೇ
ಆಲಿಸು ಬಾ ಈ ಕೋರಿಕೆಯ
ನಿನಗಾಗಿಯೇ ಕಾದಿರುವೆ
ಮುದವಾಗಿಸುವ ಮಧುರಾಮೃತವ
ಹೃದಯಾಂಕುರವಾಗಿಸುವೆ
ನೀಗಿಸುತ ಮನದಾಸೆಯನು
ಅನುರಾಗವ ಪಾಲಿಸುವೆ 
ಒಲವಾಗುತಲಿ ಒಲಿದ ಸುಖವ
ತಡ ಮಾಡದೆ ಸೇವಿಸುವೆ..

ನನ್ನೊಲವೆ ನೀ ನನ್ನೊಲವೇ
ಈ ಜೀವದ ಇಂಚರವೇ
ಆಲಿಸು ಬಾ ಈ ಕೋರಿಕೆಯ
ನಿನಗಾಗಿಯೇ ಕಾದಿರುವೆ

ಸಾಗರವ ಒಳಗೊಂಡಿರುವ 
ನಿನ್ನ ಕಣ್ಣಿನ ಆಳದಲಿ
ಸಿಲುಕಿರುವ ಚಿಪ್ಪಿನ ಒಳಗೆ
ಬೆಚ್ಚಗೆ ನಾ ಕುಳಿತಿರುವೆ 
ಹೂ ಗರಿಯ ಪುಟಗಳ ಮೇಲೆ 
ಹನಿಗೂಡಿಸಿ ಗೀಚುತಲಿ 
ರಾಗವನು ಜೊತೆಯಾಗಿಸುತ 
ಸವಿ ಗೀತೆಯ ಹಾಡಿರುವೆ 
ಇದು ಛಾಯೆಯೋ, ಮಾಯೆಯೋ
ನಿನ್ನ ಇರುವಿಕೆಯೋ
ಪರಿತಾಪದ ಪರಿಚಯ ಮಾಡಿಸೋ 
ಪ್ರೇಮದ ಕಾಣಿಕೆಯೋ ... 

ನನ್ನೊಲವೆ ನೀ ನನ್ನೊಲವೇ
ಈ ಜೀವದ ಇಂಚರವೇ.. 

ಅಧರಗಳ ಬಿಗಿ ಹಿಡಿಯುವ ಈ 
ಕಿರು ಸಾಹಸ ನಡೆದಿರಲು 
ಕಣ್ಣಿನಲಿ ಗೋಚರಿಸುವುದು 
ನಾಚಿಕೆಯನು ಮರೆಸಿಡಲು 
ಮುಂಗುರುಳ ರಂಗೋಲಿಯಲಿ 
ಕೆಂಪಾಗಿವೆ ಕೆನ್ನೆಗಳು 
ಅಂತೆಯೇ ರಂಗೇರಿವೆ ನಡುಗಿ 
ಈ ಸುಂದರ ಬೆರಳುಗಳು 
ಹಿತ ನೀಡುವ, ಸಂಜೆಯ 
ನಿನಗೇ ಬರೆದಿಡುವೆ 
ಕತೆಯೆಲ್ಲಕೂ ಮುನ್ನುಡಿಯಾಗಿಸಿ 
ಬದುಕ ಮುಡುಪಿಡುವೆ.. 

ನನ್ನೊಲವೆ ನೀ ನನ್ನೊಲವೇ
ಈ ಜೀವದ ಇಂಚರವೇ.. 

ಪ್ರೀತಿ ಗರಿಗೆದರಿದೆ, ಏನೋ ಮಜವಿದೆ

ಪ್ರೀತಿ ಗರಿಗೆದರಿದೆ, ಏನೋ ಮಜವಿದೆ (೪)

ಮುಗಿಲೇ, ಬೆಳ್ಮುಗಿಲೇ
ನನ್ನ ಮೆಲ್ಲ ಹೊತ್ತು ಸಾಗೋ ಮುಗಿಲೇ 
ನೀ ಕರಗೋ ಮೊದಲು ತಿಳಿಸು ನನಗೆ 
ನನ್ನೇ ಏಕೆ ಸೆಳೆದೆ?
ತೆರೆದು ಇಡುವೆ ನನ್ನ ಮನಸನ್ನೇ 
ಬರೆದು ಹೋಗು ನಿನ್ನ ಹೆಸರ 
ಮಳೆಯೇ, ಮಳೆಯೇ, ಮಳೆಯೇ ಓ ಓ ಓ 
ಒಲವಿನ ಸುರಿ ಮಳೆ ಓ ಓ (೨)
ಹಗಲುಗನಸು ನನಸು ಆದ ಹಾಗೆ ನಿನ್ನ ಕಂಡೆ 
ಅರಿಯದಂತೆ ಕರಗಿ ಹೋದೆ ನಿನ್ನ ಕಣ್ಣ ಮುಂದೆ 

ಪ್ರೀತಿ ಗರಿಗೆದರಿದೆ, ಏನೋ ಮಜವಿದೆ (೪)

ನಾ ಹಾರೋ ಆಸೆಗೆ ಆಕಾಶ ನೀನಾಗು
ಮುದ್ದಾದ ಮಾತನ್ನು ಕದ್ದಾಲಿಸು ನೀನೇ
ಒಂದಾಗೋ ವೇಳೆಗೆ ಕಾಯುತ್ತಿದೆ ಜೀವ
ಈ ಬಾಳ ಯಾನಕ್ಕೆ ಸಂಗಾತಿ ನೀನಾಗು
ತಾನಾಗಿ ಮೂಡೋದು, ದೂರಾಗಿ ಕಾಡೋದು 
ಈ ಪ್ರೀತಿ ಸಾಕಾಗಿ ಇನ್ನಷ್ಟು ನೀಡೋದು 
ಈ ಸೋತ ಆಟದಲಿ ಸೋತೂ ಗೆಲ್ಲೋದು  

ಮಳೆಯೇ, ಮಳೆಯೇ, ಮಳೆಯೇ ಓ ಓ ಓ 
ಒಲವಿನ ಸುರಿ ಮಳೆ ಓ ಓ (೨)
ಹಗಲುಗನಸು ನನಸು ಆದ ಹಾಗೆ ನಿನ್ನ ಕಂಡೆ 
ಅರಿಯದಂತೆ ಕರಗಿ ಹೋದೆ ನಿನ್ನ ಕಣ್ಣ ಮುಂದೆ 

ಪ್ರೀತಿ ಗರಿಗೆದರಿದೆ, ಏನೋ ಮಜವಿದೆ (೪)

ಆರಂಭ ಆದಂತೆ ಈ ನೂತನ ದಾರಿ 
ಒಂದೊಂದೇ ಹೆಜ್ಜೆಲಿ ಏನಿಂಥಾ ಆನಂದ 
ಉಲ್ಲಾಸ ತಾಳೋದೇ ಗೀಳಾಗಿದೆ ಇಲ್ಲಿ 
ಪ್ರೀತಿನ ಹಂಚೋದೇ ರೋಮಾಂಚನಕಾರಿ 
ಹೀಗೆಲ್ಲ ಆಗೋದು ಮುಂಚೆನೇ ತಿಳಿದ ಹಾಗೆ 
ಪಾರಾಗೋ ಹಾಗಿಲ್ಲ ಸುಮ್ಮನೆ ಸಿಲುಕೋದೇ 
ಈ ರೀತಿ ಪ್ರೀತಿಯಲ್ಲಿ ನಾನೂ ಸುಖಿಯಾದೆ  

ಮಳೆಯೇ, ಮಳೆಯೇ, ಮಳೆಯೇ ಓ ಓ ಓ 
ಒಲವಿನ ಸುರಿ ಮಳೆ ಓ ಓ (೨)
ಹಗಲುಗನಸು ನನಸು ಆದ ಹಾಗೆ ನಿನ್ನ ಕಂಡೆ 
ಅರಿಯದಂತೆ ಕರಗಿ ಹೋದೆ ನಿನ್ನ ಕಣ್ಣ ಮುಂದೆ 

ಪ್ರೀತಿ ಗರಿಗೆದರಿದೆ, ಏನೋ ಮಜವಿದೆ (೪)

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...