ಹೇಯ್ ನಿಮ್ಮೊಂದಿಗೆ ನಾನೂ ಬರಲೇ ಒಂದಷ್ಟು ದೂರ
ಇಳಿಸಬೇಕೆನಿಸಿದೆ ನನ್ನೆದೆಯ ಭಾರ
ಕೊಟ್ಟರೆ ಸಾಕು ಒಂದಷ್ಟು ದೂರಕೆ ಜೊತೆ
ಹೇಳಿ ಮುಗಿಸುವೆ ನನ್ನ ನೋವ ಕಥೆ
ನಾ ಕಥೆ ಹೇಳುತ ಭಾವುಕನಾಗಬಹುದು
ಹಾಗೆಂದು ನಿಮ್ಮಲ್ಲಿಯೂ ಅದ ಬಿಂಬಿಸಲೋಲ್ಲೇ
ನನ್ನ ಕಥೆ ಬಿಸಿ ದೋಸೆ ಆಗದಿರಬುದು ನಿಮಗೆ
ತಂಗಲಿಗೂ ಮೇಲು ಎಂಬುದ ಮಾತ್ರ ಬಲ್ಲೆ
ನೀವು ಕೇಳಿದಂತೆ ನಟಿಸಿ ಜಾರಿದರು ಚಿಂತೆ ಇಲ್ಲ
ನೂರರಲ್ಲಿ ಒಬ್ಬರಂತೆ ಆಗುವಿರಿ ನನಗೆ
ನಿಮಗೂ ಮೀಸಲಿಡುವೆ ನನ್ನ ಬಾಳಿನಲ್ಲಿ ಒಂದು ಪುಟ
ನಿಮ್ಮ ನೆನಪೇ ಪ್ರತೀ ಸಾಲಿನ ಅಕ್ಷರದ ಕೊನೆಗೆ
ನಿಮ್ಮಿಂದ ಎನೊಂದ ಅಪೇಕ್ಷಿಸಿಲ್ಲ ನಾನು
ಹೆದರದಿರಿ ಇಷ್ಟೆಲ್ಲಾ ಹತ್ತಿರವಾಗಲು ನಿಮಗೆ
ಎಂದಾದರು ಎದುರಾದರೆ ಒಮ್ಮೆ ನಕ್ಕು ನೋಡಿ ಸಾಕು
ನಿಮಗೂ ಸ್ಪಂದಿಸಬಹುದು ನನ್ನೆದೆಯ ಬಡಿಗೆ
ಅರ್ಥವಾಗದ ನಾನು ಇನ್ನೂ ಗೊಂದಲವಾದೆ
ನಿಮಗೆ ಇಲ್ಲ ಸಲ್ಲದ ಭಾರವಾದೆ
ಹೊರಲಾದರೆ ನನ್ನ ಸಹಿಸಿಕೊಳ್ಳಿ ಬಂಧುಗಳೇ
ಇಲ್ಲವಾದರೆ ಬಿಡಿ ತಲೆ ಕೆಡಿಸಿಕೊಳ್ಳದೆ........
- ರತ್ನಸುತ