Saturday 4 August 2012

ರಕ್ಷಾ ಬಂಧನ


ಅಮ್ಮಳಲ್ಲದೆ  ಅಮ್ಮನ ಕರೆಗೆ
ಹೂಗೊಡುವ ಸಹೋದರಿಯೇ 
ಜಗಳದಲ್ಲಿಯೂ ತಂಪನೀವ
ಹಬ್ಬಿರುವ ತೆಂಗಿನ ಗರಿಯೇ
ಮುನಿಸಿಕೊಂಡ ಆ ಮೊಗವನು ಹೊತ್ತೂ
ಮನಸೆಳೆವ ಮನೋಹರಿಯೇ
ಹೊತ್ತ ಸಹನೆಗೆ ಸಾಟಿಯಾಗದ
ಸಾಲುಗಟ್ಟಿದ ಮಹಾ ಗಿರಿಯೇ

ಅಂಧಕಾರದ ಒಂಟಿ ಬಾಳಿಗೆ
ದಾರಿಯಾಗಿದೆ ಹೊಂಗಿರಣ 
ಆಕೆಯೊಡನೆ ಕಳೆದಂತ ದಿನಗಳೇ
ಮಾಡಿತೆಲ್ಲವ ಸಂಪೂರ್ಣ 
ಅವಳ ಕಾವಲಿಗೆ ಬೆನ್ನ ನೀಡುತ 
ಆದೆ ಕನಸುಗಳ ನಿಲ್ದಾಣ 
ಇಟ್ಟ ಬೇಡಿಕೆಯ ಪೂರ್ಣಗೊಳಿಸಲು
ಅಂತರಂಗಗಳ ಸಂಧಾನ

ಹೆಜ್ಜೆ ಗುರುತಿಗೆ ಲೆಕ್ಕವಿಲ್ಲದೆ
ಸೋತ ಅಂಕಿಯ ಎಣಿಕೆಯೂ
ಒಂಟಿಗಾಲಿನ ಜಿಗಿತ ಕೂಡ
ಬಾಲ್ಯದಾಟದ ಪ್ರಯಾಸವೂ
ಎಲ್ಲಿ ಹೆದರಿಕೆ ದಳದ ಜ್ಯೋತಿಗೆ
ದೀಪವಲ್ಲಿ ಸುರಕ್ಷಿತ
ಅವಳ ಸ್ಫೂರ್ತಿ ಜೋತೆಯಿದ್ದರಲ್ಲೇ
ಗೆಲುವುಗಳು ಅವು ನಿಶ್ಚಿತ

ಸಡಿಲಗೊಳ್ಳದ ಬಂಧವಿದು
ಗಟ್ಟಿಯಾಯಿತು ಈ ದಿನ
ಉಡುಗೊರೆಗೆ ಕಾದಿದ್ದ ಕಣ್ಗಳ
ದೂರದಲ್ಲೇ ಗಮನಿಸಿದೆ ನಾ 
ಹಣೆಗೆ ಮುತ್ತಿಟ್ಟು, ಕಣ್ಣು ತೊಟ್ಟಿಟ್ಟು
ಸವರಿದ ಕೈ ಪಾವನ
ರಕ್ಷೆಗಾಗಿ ಅಪೇಕ್ಷಿಸಿ ಬಿಗಿದಳು
ಪ್ರೇಮ "ರಕ್ಷಾ ಬಂಧನ"

                          --ರತ್ನಸುತ

2 comments:

  1. This comment has been removed by the author.

    ReplyDelete
  2. ರಕ್ಷಣೆಗಾಗಿ...ಅಣ್ಣತಮ್ಮ ಹಿಂದೆ, ತಂದೆ ಗಂಡನ ಹಿಂದೆ ಹೋಗದೆ ಇರಲಿ
    ಭಾರತ ನಾರಿ ಸ್ವರಕ್ಷಿತಳಾಗಲಿ ....ಅಂತ ಮಟ್ಟಕ್ಕೆ ಬೆಳೆಯಲಿ

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...