Thursday, 28 January 2021

ಮನಸಿಗೆ ಬಾರೆಯಾ.. ಮನಸಿಗೆ ಬಾರೆಯಾ..

ಮೆಲ್ಲ ಮೆಲ್ಲ ಕದ್ದು‌ ಓಡಬೇಡ ತಾಳು 

ಬಳ್ಳಿಯಂತೆ ನಿನ್ನ ಹಬ್ಬುವೆನು ನಿಲ್ಲು
ಅಪ್ಪಿ ತಪ್ಪಿ ಕೂಡ ಬಿಟ್ಟಿರಲಾರೆ ಮನಸಿಗೆ ಬಾರೆಯಾ.. 

ಬಣ್ಣದ ಬಲೆಯನು ಬೀಸುವ ಕಣ್ಣಲಿ ಬೀಳಲೇ..  ಬೀಳಲೇ?
ಮಣ್ಣಿನ ಸೊಗಡನು ಸೂಸುವ ಚೆಲುವಿಗೆ ಸೋಲಲೇ..  ಸೋಲಲೇ?
ಒಂದೇ ಒಂದು‌ ಸಣ್ಣ ಆಸೆ, ಸಿಗು ಬೇಗ ಹೇಳುವೆ
ಎಂದೋ ಬರೆದ ಕಾಗದವನ್ನು ಇದೋ ಈಗ ಓದುವೆ  

ಮೆಲ್ಲ ಮೆಲ್ಲ ಕದ್ದು‌ ಓಡಬೇಡ ತಾಳು 
ಬಳ್ಳಿಯಂತೆ ನಿನ್ನ ಹಬ್ಬುವೆನು ನಿಲ್ಲು
ಅಪ್ಪಿ ತಪ್ಪಿ ಕೂಡ ಬಿಟ್ಟಿರಲಾರೆ ಮನಸಿಗೆ ಬಾರೆಯಾ..  ಮನಸಿಗೆ ಬಾರೆಯಾ.. 

ಬಣ್ಣದ ಬಲೆಯನು ಬೀಸುವ ಕಣ್ಣಲಿ ಬೀಳಲೇ..  ಬೀಳಲೇ?
ಮಣ್ಣಿನ ಸೊಗಡನು ಸೂಸುವ ಚೆಲುವಿಗೆ ಸೋಲಲೇ..  ಸೋಲಲೇ?
ಒಂದೇ ಒಂದು‌ ಸಣ್ಣ ಆಸೆ, ಸಿಗು ಬೇಗ ಹೇಳುವೆ
ಎಂದೋ ಬರೆದ ಕಾಗದವನ್ನುಇದೋ ಈಗ ಓದುವೆ 

ಮೆಲ್ಲ ಮೆಲ್ಲ ಕದ್ದು‌ ಓಡಬೇಡ ತಾಳು 
ಬಳ್ಳಿಯಂತೆ ನಿನ್ನ ಹಬ್ಬುವೆನು ನಿಲ್ಲು
ಅಪ್ಪಿ ತಪ್ಪಿ ಕೂಡ ಬಿಟ್ಟಿರಲಾರೆ ಮನಸಿಗೆ ಬಾರೆಯಾ..  ಮನಸಿಗೆ ಬಾರೆಯಾ.. 


ಹೃದಕ್ಕೆ‌ ಸರಿಯಾಗಿ ಬಡಿಯುವುದ ಹೇಳಿ ಕೊಡು
ಮೌನಕ್ಕೂ ಕೂಡ ಚೂರು ಸಮಯವಿಡು 
ಪರಿಚಯವ ಮಾಡಿಸುವೆ ಏಕಾಂಗಿ ಲೋಕವನು
ಆಗಾಗ ಬಂದು ನನ್ನ ಕಾಡುತಿರು
ಗೆರೆ ಹಾಕಿ ನಿಂತಿದೆ ಪ್ರಾಣ
ನಾನಾಗೇ ದಾಟೋ ಅನುಮಾನ
ಅದಕಾಗಿಯೇ ಪರದಾಡುತಿರುವೆನು 
ಬರಲಾರೆ ಎಂದು‌ ಹೇಳದಿರು‌ ನೀ

ಮೆಲ್ಲ ಮೆಲ್ಲ ಕದ್ದು‌ ಓಡಬೇಡ ತಾಳು 
ಬಳ್ಳಿಯಂತೆ ನಿನ್ನ ಹಬ್ಬುವೆನು ನಿಲ್ಲು
ಅಪ್ಪಿ ತಪ್ಪಿ ಕೂಡ ಬಿಟ್ಟಿರಲಾರೆ ಮನಸಿಗೆ ಬಾರೆಯಾ..  ಮನಸಿಗೆ ಬಾರೆಯಾ.. 

ಬಣ್ಣದ ಬಲೆಯನು ಬೀಸುವ ಕಣ್ಣಲಿ ಬೀಳಲೇ..  ಬೀಳಲೇ?
ಮಣ್ಣಿನ ಸೊಗಡನು ಸೂಸುವ ಚೆಲುವಿಗೆ ಸೋಲಲೇ..  ಸೋಲಲೇ?

ತಂಪಾದ ಬೆಳಕಿಂದ ಉರಿವ ಕತ್ತಲು ಸರಿದು 
ಕಂಡಷ್ಟೂ ದೂರ ನೀನೇ ಜೊತೆಯಂತೆ 
ಇಂಪಾದ ಮಾತಲ್ಲಿ ನನ್ನನ್ನು ಉಪಚರಿಸು 
ನೋವೆಲ್ಲ ಮಾಯ ಮಂಜು ಸರಿದಂತೆ 
ಕಾಲಾನುಸಾರ ಈ ಪ್ರೀತಿ 
ಸರ್ವಾಧಿಕಾರಿಯ ರೀತಿ 
ಇದರಂತೆಯೇ ನಡೆದಾಗ ಮಾತ್ರವೇ 
ಉಳಿಗಾಲ ಈ ಜೀವಕೆ ಎಂದೂ 

ಮೆಲ್ಲ ಮೆಲ್ಲ ಕದ್ದು‌ ಓಡಬೇಡ ತಾಳು 
ಬಳ್ಳಿಯಂತೆ ನಿನ್ನ ಹಬ್ಬುವೆನು ನಿಲ್ಲು
ಅಪ್ಪಿ ತಪ್ಪಿ ಕೂಡ ಬಿಟ್ಟಿರಲಾರೆ ಮನಸಿಗೆ ಬಾರೆಯಾ..  ಮನಸಿಗೆ ಬಾರೆಯಾ.. 

ಮನಸಿಗೆ ಬಾರೆಯಾ,  ಮನಸಿಗೆ ಬಾರೆಯಾ .. ಪ್ರೇಮವೇ ಓ ಪ್ರೇಮವೇ..

Friday, 22 January 2021

ಹುಡುಕಿ ಕೊಡು ನನ್ನ ಕಳುವಾಗಿರುವೆ

ಹುಡುಕಿ ಕೊಡು ನನ್ನ ಕಳುವಾಗಿರುವೆ 

ಎದೆಯಾಳದಿಂದ ಕರೆ ನೀಡಿರುವೆ 
ಕೆದಕುತಲಿ ಎದೆಯ ಕವಿಯಾಗಿಸುವೆ 
ಕಿರು ನಗೆಯ ಬೀರಿ ಮರೆಯಾಗಿರುವೆ 
ಪ್ರತಿದ್ವನಿಸು ನನ್ನಲ್ಲಿ ಕಾರಣವ ನೀಡದೆ 
ಈ ಜೀವ ಎಂದೆಂದಿಗೂ ನಿನ್ನದೇ 

ಅಭ್ಯಾಸವಾಗಿದೆ ಹಿಂಬಾಲಿಕೆ 
ಮುಂದುವರಿಸು ನಿನ್ನ ಒಡನಾಟವ 
ಆಲಸ್ಯವಾಗದು ಈ ಜೀವಕೆ 
ನೋಡುತಿರಲು ನಿನ್ನ ನಿತ್ಯೋತ್ಸವ 
ಉಸಿರಾಡಲು ಅನುಮತಿ ನೀಡಿ ಹೋಗು 
ಗಮನಿಸುತಿರು ನನ್ನ ಒದ್ದಾಟವ 
ಬೇಕೆನಿಸಲು ನಿನ್ನ ನೆನಪಲ್ಲೇ ಕೂಗು 
ಈ ಮರುಳ ಅಲ್ಲೇ ಹಾಜರಿ ನೀಡುವ 

ಹಿಡಿದು ನಡೆ ನನ್ನ ಕೈ ಚಾಚಿರುವೆ 
ಹಲವಾರು ಬಾರಿ ಮನಸೋತಿರುವೆ
ಹುಡುಕಿ ಕೊಡು ನನ್ನ ಕಳುವಾಗಿರುವೆ 
ಎದೆಯಾಳದಿಂದ ಕರೆ ನೀಡಿರುವೆ 

ಮೌನಕ್ಕೂ ನಾನೇ ಕಿವಿಯಾಗುವೆ 
ಸುಳ್ಳಾದರೂ ಎಷ್ಟು ಹಿತವಾಗಿದೆ 
ವಾಲೋದೇ ಬೇಡ ಈ ಗುಂಡಿಗೆ 
ನೋಡೀಗ ಜೋರಾಗಿ ಬಡಿಯುತ್ತಿದೆ 
ನದಿ ತಪ್ಪಲು ನಿನ್ನ ಕಣ್ಣಂಚಿನಲ್ಲಿ 
ಉರುಳುತ್ತಿರೋ ಹನಿಗೆ ನಾ ಕಾವಲು 
ಕಿವಿ ಸುತ್ತಲ್ಲೇ ಸುತ್ತುವ ಕುರುಳಿನಂತೆ 
ನನ್ನ ಪಿಸು ಮಾತು ನಿನಗೇ ಮೀಸಲು 

ಹುಡುಕಿ ಕೊಡು ನನ್ನ ಕಳುವಾಗಿರುವೆ 
ಎದೆಯಾಳದಿಂದ ಕರೆ ನೀಡಿರುವೆ 
ಕೆದಕುತಲಿ ಎದೆಯ ಕವಿಯಾಗಿಸುವೆ 
ಕಿರು ನಗೆಯ ಬೀರಿ ಮರೆಯಾಗಿರುವೆ 
ಪ್ರತಿದ್ವನಿಸು ನನ್ನಲ್ಲಿ ಕಾರಣವ ನೀಡದೆ 
ಈ ಜೀವ ಎಂದೆಂದಿಗೂ ನಿನ್ನದೇ 

ಮಕ್ಕಳ ಪದ್ಯ

ಮಕ್ಕಳ ಪದ್ಯ

 *ನವಿಲೇ*

ನೂರು ಕಣ್ಣ ಗರಿಯ ನವಿಲೇ
ಎಷ್ಟು ಅಂದವಾಗಿಹೆ
ನಿನ್ನ‌ ಕಾಣಲೆಂದು ನಾನು
ದೂರದಿಂದ ಬಂದಿಹೆ

ಎಲ್ಲಿ‌ ಹಾರು ಒಮ್ಮೆ
ಮತ್ತೆ ಒಮ್ಮೆ ಗರಿಯ ಬಿಚ್ಚು
ನಿನ್ನ ಕುಣಿತ ಕಣ್ಣಿಗುಚಿತ
ಮಳೆಗೂ ಅಚ್ಚು ಮೆಚ್ಚು

ಎಷ್ಟು ಬಣ್ಣ ಮೈಯ್ಯಲಿ
ಎಣಿಸಿ‌ ಬಿಡುವೆ ತಾಳು
ಏನು ಬೇಕು ಬದಲಿಗೆ
ಇಗೋ‌ ತೊಗರಿ‌ ಕಾಳು

ನಿನ್ನ ದನಿಯೂ‌ ಇಷ್ಟ ನನಗೆ
ನಿನ್ನ ಹಾಗೆ ಕೂಗುವೆ
ಉದುರಿ ಬಿದ್ದ ಗರಿಗಳನ್ನು
ಹೆಕ್ಕಿ ತಂದು‌ ನೀಡುವೆ...


*ಆಮೆ *
ನಾನೊಂದು ಆಮೆ 
ನನ್ನ ಹೆಸರು ಚಿಂಟು 
ನನ್ನ ಬೆನ್ನ ಮೇಲೆ 
ಗಟ್ಟಿ ಚಿಪ್ಪು ಉಂಟು 

ಈಜಬಲ್ಲೆ ನೀರಲಿ 
ನಡೆಯಬಲ್ಲೆ ನೆಲದಲಿ 
ಸೋಲಿಸಿದ್ದೆ ಒಮ್ಮೆ ನಾ 
ಮೊಲವ ಓಟದಲ್ಲಿ 

ಪುಟ್ಟದಾಗಿ ಇರುವೆ 
ದೊಡ್ಡದಾಗಿ ಬೆಳೆವೆ 
ಮೀನು, ಹುಳ, ಗೆಣಸು, ಎಲೆ 
ಏನೇ ಇರಲಿ ತಿನ್ನುವೆ 

ಮಳೆ, ಬಿಸಿಲು, ಗಾಳಿ 
ಎಲ್ಲವನ್ನೂ ಮೀರಿ 
ಹಾಯಾಗಿ ಬದುಕುವೆ 
ಚಂದ ನಗುವ ಬೀರಿ  

*ಆಟ, ಪಾಠ, ಊಟ*

ಮುಂಜಾನೆ ಕಣ್ಬಿಟ್ಟು ಮನೆಯಾಚೆ ನೋಡಿದೆ 
ಎದುರಿತ್ತು ದಟ್ಟವಾದ ಬಿಳಿ ಮಂಜು ಪರದೆ 

ಕಂಬಳಿ ಹೊದ್ದುಕೊಂಡೇ ಅಮ್ಮನನ್ನು ಕೂಗಿದೆ 
ಎದ್ದೆನಾದರೂ ನನಗೆ ಇನ್ನೂ ಬಿಡದ ನಿದ್ದೆ 

ಹಲ್ಲು ತಿಕ್ಕಿ, ಸ್ನಾನ ಮಾಡಿ ಬದಲಾಯಿಸಿ ಬಟ್ಟೆ 
ಬಿಸಿ ಲೋಟ ಹಾಲು ಗುಟುಕಿನಲ್ಲೇ ಮುಗಿಸಿಬಿಟ್ಟೆ 

ಶಾಲೆಗಾಗಿ ಸಿದ್ದವಾದೆ ತಿಂಡಿ ಮುಗಿಸಿಕೊಂಡು 
ಆಟ, ಪಾಠ ಖುಷಿ ಗೆಳೆಯರೆಲ್ಲ ಕೂಡಿಕೊಂಡು 

ಎರಡೊಂದ್ಲಾ ಮಗ್ಗಿ ಕಲಿತು ಅಪ್ಪನಿಗೆ ಹೇಳುವೆ 
ಭೇಷ್ ಎನಿಸಿಕೊಂಡು ಹೊಸ ಸೈಕಲ್ಲು ಕೇಳುವೆ

ರಾತ್ರಿ ಊಟ ಮುಗಿಸಿ ನಾಳೆ ತಡವಾಗಿ ಏಳುವೆ 
ಭಾನುವಾರ ರಜೆ ದಿನಮೋಜು ಮಾಡಿ ಕಳೆಯುವೆ...


*ಮನೆ ಹಿತ್ತಲು*

ನನ್ನ ಮನೆಯ ಹಿತ್ತಲಲ್ಲಿ ಒಂದು ಸಸಿಯ ನೆಟ್ಟೆ
ಗಾಳಿ, ನೀರು, ಬಿಸಿಲು, ನೆರಳು ಎಲ್ಲವನ್ನೂ ಕೊಟ್ಟೆ

ನನ್ನ ಹಾಗೇ ತಾನು ಕೂಡ ಚಂದ ಬೆಳೆಯುತಿತ್ತು
ಅಂದು ತನ್ನಲ್ಲಿ ಮೊದಲ ಹೂವ ಅರಳಿಸಿತ್ತು

ಬಿಳಿ ಬಣ್ಣದ ಹೂವು ಎಷ್ಟು ಸೊಗಸು ಕಾಣಲು
ಮತ್ತು ದೂರ ದೂರ ಪಸರಿಸಿತ್ತು ಅದರ ಘಮಲು

ಅಮ್ಮನಿಗೆ ತೋರಲೆಂದು ಬಿಡಿಸಿ ತಂದು ಕೊಟ್ಟೆ
"ಮಲ್ಲಿಗೆ" ಎಂದಳಮ್ಮ ಮುಡಿಗೆ ಮುಡಿದು ಬಿಟ್ಟೆ

ಹಿತ್ತಲ ಮರದಿ ಗೂಡು, ಹಕ್ಕಿಗಳ ಸದ್ದು
ಏನೇ‌ ಖಾಯಿಲೆ‌ ಇರಲಿ ಹಿತ್ತಲ ಗಿಡ ಮದ್ದು...


*ಚೀಚಿ*

ಚೀಚಿ‌ ತಿನ್ನುವೆ ನಾನು ಚೀಚಿ ತಿನ್ನುವೆ
ಕೋಳಿ, ಕುರಿ, ಮೀನು ಇಷ್ಟ ಪಟ್ಟು ತಿನ್ನುವೆ

ಖಾರ ಎಷ್ಟೆ ಇರಲಿ, ಸೊರ್ss ಎಂದು ಸೊರೆಯುವೆ
ನಲ್ಲಿ ಮೂಳೆ ಬಹಳ ರುಚಿ ಕುಟ್ಟಿ ಹೀರುವೆ

ಚೀಚಿ‌ ತಿನ್ನುವೆ ನಾನು ಚೀಚಿ ತಿನ್ನುವೆ
ಎಲ್ಲ ನನಗೇ ಬೇಕು ಎಂದು ಬಾಚಿ ತಿನ್ನುವೆ

ಸಾರಿನಲ್ಲಿ ಮುದ್ದೆ ಅದ್ದಿ ಗುಳುಂ‌ ಮಾಡುವೆ
ನಾರು ಚೀಚಿಯನ್ನು ಮೆಲ್ಲ ಕಚ್ಚಿ ನುಂಗುವೆ

ಸೌದೆ ಒಲೆ ಮೇಲೆ ಬೆಂದು ಸ್ವಾದ ಹೆಚ್ಚಿದೆ
ನಾಲ್ಕು ತುತ್ತು ಅನ್ನ ಇನ್ನೂ ಹೆಚ್ಚು ತಿನ್ನುವೆ

ಭಾನುವಾರ ಬಾಡಿಗಾಗಿ ಎದುರು ನೋಡುವೆ
ಮಾಡದೆ ಇರಲು ಪೆಚ್ಚು ಮೋರೆ ತಾಳುವೆ

ಚೀಚಿ‌ ತಿನ್ನುವೆ ಜೊತೆಗೆ ಮೊಟ್ಟೆ ತಿನ್ನುವೆ
ಅಪ್ಪನಂತೆ ಶಕ್ತಿ ಬರಲು‌ ಹೆಚ್ಚು ತಿನ್ನುವೆ

ಆಸೆ ತಿಳಿಸುವುದು ಹೇಗೆ?

ಆಸೆ ತಿಳಿಸುವುದು ಹೇಗೆ

ಮೀಸೆ ತಿರುವಿದರೆ ಹಾಗೆ
ಎದೆ ಸಾಗರದೊಳ ಮುಳುಗುವ ನಿನ್ನ
ಕಾಪಾಡುವ ಭರದಲ್ಲಿ
ನಾ ಮುಳುಗಿಯೇ ಹೆಚ್ಚು ಆನಂದಿಸುವೆ
ನಿನ್ನ ಜೊತೆಯಲ್ಲಿ

ಬೆನ್ನಿಗೆ ಬೆನ್ನು ನೀಡುವ
ಒಂದು ಸಂಜೆ ಜಾರಿ ಹೋಗಲಿ
ಎದುರಾಗಲು ಕಣ್ಣು ತವಕಿಸಿದರೆ
ಹಿಡಿ ಕನ್ನಡಿ‌ ಕೈಯ್ಯಲ್ಲಿ
ನಿನ್ನ ಕಣ್ಣಲಿ ನಾನು ಕಾಣುವೆ
ಮತ್ತೆ ನನ್ನಲಿ ನೀನು
ನೀಲಿ ಎಲ್ಲೋ ಕಳುವಾದಂತಿದೆ
ಬಣ್ಣ ಬಳಿದ ಬಾನು
ಬದುಕಲಿ ಎಲ್ಲ‌ ಚನ್ನಾಗಿತ್ತು
ನೀ ಒಳ ಬರುವ ತನಕ
ಬಹುಶಃ ನೀನೇ ಶಾಶ್ವತ ಮನಕೆ
ಬೇರೆ ಎಲ್ಲವೂ ಕ್ಷಣಿಕ

ಕಣದಲಿ ರಾಗಿಯ ರಾಶಿಯ ಹಾಗೆ
ಮೆರುಗಿದೆ ನಿನ್ನಲ್ಲಿ
ಯುಗಗಳೇ ಸವೆದರೂ ಸವೆಯದ ಹಸಿವು
ಅಡಗಿದೆ ನನ್ನಲ್ಲಿ
ಅಚ್ಚರಿಗಳ ‌ಬೆಲ್ಲದ ಅಚ್ಚನು
ತಂದಿರುವೆ ಏನಂತಿ?
ಜೊತೆಗೆ ಮೆಲ್ಲುಲಿಯ ಎಳ್ಳಿದ್ದರೆ
ಅದುವೇ ಸಂಕ್ರಾಂತಿ
ತೋರಣವಾಗಿಸು ನವ ಸಂವತ್ಸರ
ಹಬ್ಬವೇ ಎಂಬಂತೆ
ಅಂತರವ ಕಳೆಯಲಿ‌‌ ಇಡುವೆಜ್ಜೆ
ಹತ್ತಿರವಾದಂತೆ...

ಬೆಳಕ ಹಿಡಿಯುವ ಆಟವಾಡೋಣಾ?

ಬೆಳಕ ಹಿಡಿಯುವ ಆಟವಾಡೋಣಾ?

ಅದು ಇದ್ದ ಬೆಳಕಿಗಿಂತಲೂ ಪ್ರಕಾಶಮಾನವಾಗಿ 
ಸೀಮೆಗಳ ದಾಟಿ ನಮ್ಮ ಗೋಡೆಗಂಟಿದೆ 

ಹಿಡಿಯೆ ಹೊರಟರೆ ಇದ್ದಲ್ಲಿಂದ ಕಾಲ್ಕಿತ್ತು 
ಪಕ್ಕದ ಗೋಡೆಗೆ ಜಿಗಿದು 
ಮತ್ತಿನ್ನಾರನ್ನೋ ಆಟಕ್ಕೆ ಸೆಳೆವಂತೆ.. 

ಬೆಳಕ ಮೂಲ ಯಾರು ಅರಿತವರು?
ಎಲ್ಲರೂ ತನ್ನ ಅಲ್ಪಾಯುಷ್ಯದ ಸೊಬಗ ಸವಿದವರೇ 
ಬೇಕೆಂದಲ್ಲಿ ಹರಿಸಿ, ಬೇಡವಾದಾಗ ಬಡವಾಗಿಸಿ..

ಗಾಜಿನ ತಿರುವಲಿ ಬಣ್ಣಗಳು ಬಯಲಾಗಿ 
ತಣ್ಣಗೆ ಒಡ್ಡಿಕೊಂಡ ಮೈಗೆ ಮೈ ಊರಿ 
ಇನ್ನೆಲ್ಲೋ 
ತೀಕ್ಷ್ಣವಾಗಿ, ಕಿಡಿಯಾಗಿ ಸುಡಬಲ್ಲ ಪ್ರಾಬಲ್ಯ 
ಒಂದೇ ನಾಣ್ಯದ ಎರಡು ಮುಖ 

ನೋಡು, ಆಟವಾಡುವುದ ಮರೆತು 
ಪ್ರಯೋಗಕ್ಕೆ ಇಳಿದಿದ್ದೇವೆ
ಹಿಂದೆ ಹೀಗೇ ಬಹಳಷ್ಟು ಮಂದಿ 
ಆಟದಲ್ಲಿ ಮೊದಲಾಗಿ, ಚಟಕ್ಕೆ ಬಿದ್ದು 
ಅಜ್ಞಾನಿಗಳೋ, ವಿಜ್ಞಾನಿಗಳೋ ಆಗಿದ್ದಾರಂತೆ 
ಅವರ ಆತ್ಮ ತಣ್ಣಗಿರಲಿ!

ಇಗೋ ಪೀಠಿಕೆ ಇನ್ನೂ ಮುಗಿದಿಲ್ಲ 
ಆಗಲೇ ಇರುಳು ಬಾಗಿಲಲ್ಲಿ ನಿಂತಿದೆ 
ಒಂದು, ಒಳಗೆ ಬರಮಾಡಿಕೊಂಡು ಸುಪ್ತವಾಗೋಣ 
ಅಥವ ಜ್ಯೋತಿ ಬೆಳಗಿಸಿ ಆಟ ಮುಂದುವರಿಸೋಣ... 

ನಿನ್ನಲೇ ಕಾಣುವೆ ನನ್ನನ್ನು

ನಿನ್ನಲೇ ಕಾಣುವೆ ನನ್ನನ್ನು 

ನಿನಗೂ ಹೀಗೆಲ್ಲ ಅನಿಸುವುದೇ?
ಅತಿಯಾದಾಗ ಸುಡುವ ನೆನಪು 
ಉರುಳೋ ಕಂಬನಿ ಮಾತಾಡುತಿದೆ
ಹೇಗಾಗಿರುವೆ ನಾ ನೋಡೀಗ 
ಅದೇ ಸಂತೆ, ಅದೇ ಬೇನೆ 
ಎಂದೆಂದೂ ನಿನ್ನೇ ಪ್ರೀತಿಸುವೆ 
ಎಂದೆಂದೂ ನಿನ್ನೇ ಪ್ರೀತಿಸುವೆ 
ಎಂದೆಂದೂ ನಿನ್ನೇ ಪ್ರೀತಿಸುವೆ 
ಎಂದೆಂದೂ ನಿನ್ನೇ ಪ್ರೀತಿಸುವೆ 
ಬೇರೇನನೂ ನಾ ಯೋಚಿಸದೆ 
ಎಂದೆಂದೂ ನಿನ್ನೇ ಪ್ರೀತಿಸುವೆ 
ಅನುಮಾನಗಳ ಹುಸಿಯಾಗಿಸಲು 
ಅನುರಾಗದ ಕಾಣಿಕೆ ತಂದಿರುವೆ.. ಹ್ಮ್ಮ್.. 
ಎಂದೆಂದೂ ನಿನ್ನೇ ಪ್ರೀತಿಸುವೆ 
ಎಂದೆಂದೂ ನಿನ್ನೇ ಪ್ರೀತಿಸುವೆ 
ಬೇರೇನನೂ ನಾ ಯೋಚಿಸದೆ 
ಎಂದೆಂದೂ ನಿನ್ನೇ ಪ್ರೀತಿಸುವೆ 

ಕಾಯುವ ಮನಸು ಕಲ್ಲಾಗಿ 
ಕೆತ್ತಿರುವೆ ನಿನ್ನದೇ ಗುರುತು 
ಆಗಿರೋ ಗಾಯಕೆ ಬದಲಾಗಿ 
ಗೀಚಿರುವೆ ಒಲವ ಕುರಿತು 
ಉಸಿರು ಬಿಗಿದರೂ ಸಹಿತ 
ಪಿಸುಮಾತಲ್ಲೇ ಕೂಗಿರುವೆ 
ನಿನಗಾಗಿ ಮಿಡಿಯುವ ಹೃದಯವನು 
ಪರಿಚಯಿಸಲೆಂದೇ ತಂದಿರುವೆ 
ಸ್ವೀಕರಿಸಿದರೆ ಆಹ್ವಾನವನು 
ಆ ನೆನಪಲೇ ಹಾಗೇ ಬದುಕಿರುವೆ

ಎಂದೆಂದೂ ನಿನ್ನೇ ಪ್ರೀತಿಸುವೆ 
ಎಂದೆಂದೂ ನಿನ್ನೇ ಪ್ರೀತಿಸುವೆ 
ಬೇರೇನನೂ ನಾ ಯೋಚಿಸದೆ 
ಎಂದೆಂದೂ ನಿನ್ನೇ ಪ್ರೀತಿಸುವೆ 

(female)ನೀ ಬರಲು ನನ್ನ ಸನಿಹ 
ಹೂವಿನ ಹಾಗೆ ಅರಳುವೆನು 
ಕೇವಲ ನಿನ್ನ ನೋಟಕೆ ನಾ 
ಮಂಜಿನ ಹಾಗೆ ಕರಗುವೆನು 
ಸರಿವ ಸಮಯವ ತಡೆದು 
ಕೊಡುವೆ ತಾಳು ಕನಸುಗಳ 
ವಿದಾಯದ ಕರೆಯು ಬಂದಿರಲು 
ಉಪಾಯವೇ ಇರದೆ ಸೋತಿರುವೆ 
(male)ಬೇಕಂತಲೇ ಚೂರು ತಡ ಮಾಡು 
ನಾ ಈಗಲೇ ಹೊರಟು ನಿಂತಿರುವೆ  

ಎಂದೆಂದೂ ನಿನ್ನೇ ಪ್ರೀತಿಸುವೆ 
ಎಂದೆಂದೂ ನಿನ್ನೇ ಪ್ರೀತಿಸುವೆ 
ಬೇರೇನನೂ ನಾ ಯೋಚಿಸದೆ 
ಎಂದೆಂದೂ ನಿನ್ನೇ ಪ್ರೀತಿಸುವೆ 

Thursday, 14 January 2021

ಹಿಮ ಸುರಿದು ಸಮವಾಗಿ, ನೆಲದೊಡಲ ಸುಮವಾಗಿ















ಹಿಮ ಸುರಿದು ಸಮವಾಗಿ, ನೆಲದೊಡಲ ಸುಮವಾಗಿ

ಬಾನು-ಭುವಿ ಒಂದಾಗುವ ಸಮಯದಲ್ಲಿ 
ಹಸಿರು ತಣ್ಣಗೆ ಕೆಳಗೆ, ಬೆಟ್ಟ ಕಂಪಿಸಿ ಚಳಿಗೆ 
ದಾರಿ ಕಣ್ಮುಚ್ಚಿರಲು ಪಯಣವೆಲ್ಲಿ?!

ಉರುಳು ಕಾಣದ ಹನಿಯು, ಕೊರಳ ಮಾಲೆಯ ಮುತ್ತು 
ಬಿಳಿಯ ಹೊದಿಕೆಯ ಒಳಗೆ ಅಡಗಿ ಮೊಗವು 
ಮನೆ ಮನೆಗೂ ಪಟ್ಟಾಭಿಶೇಕ ನೆರವೇರಿದೆ 
ಬೆಳ್ಳಿ ಕಿರೀಟ ಹೊತ್ತವೇ ಎಲ್ಲವೂ 

ಇಟ್ಟ ಹೆಜ್ಜೆಯನೊಂದು ನೆನಪಾಗಿ ಇರಿಸುತ್ತ -
- ಕೆಲಕಾಲ ಮತ್ತದೇ ಹಾಲ್ನೊರೆಯ ಪದರ 
ಕಡೆಗಣನೆಗೊಳಗಾದವೆಲ್ಲವನೂ ಆವರಿಸಿ 
ಅವುಗಳೊಡನೆಯೇ ಮತ್ತೆ ನಡೆಸಿ ಸಮರ 

ಉದುರಿದಂತೆ ಪಾರಿಜಾತ ದಳಗಳು 
ಅಂಟಿದಂತೆ ಕಿಟಕಿ ಗಾಜಿಗೆ ಕೆಲವು 
ಕುಪ್ಪೆ ಕುಪ್ಪೆ ಮಾಡಿ ಬೊಗಸೆಯಲ್ಲಿಟ್ಟರೆ 
ಮಲಗಿದಂತೆ ಅಲ್ಲಿ ಪುಟ್ಟ ಮೊಲವು 

ಹೀಗೂ ಆಕಾರ ಬದಲಿಸಿ ಮಳೆ ತನ್ನ
ನೆಚ್ಚಿನ ಶಿಲೆ ಮುಡಿಗೆ ಆಯಿತು ಸಿಂಗಾರ 
ಮೊಲ್ಲೆ ದಿಂಡನ್ನು ಹೊಸೆದು ನಲ್ಲೆಗಾಗಿ ಕಾದ 
ಪ್ರಿಯತಮನ ಬೆರಳಿಗೆ ಬಿಳಿ ಹೊನ್ನ ಉಂಗುರ 

ಜೋಮು ಹಿಡಿದ ಮನಸು ಕಾವನು ಬಯಸಿ 
ಕಾಮದಗ್ನಿಯ ಚಿತೆಯ ಹೆಣವಾಗುವ ತುಡಿತ 
ಮದಿರೆ ಹೀರಿದ ತುಟಿಗಳೊಂದಾಗುವ ವೇಳೆ 
ಹೃದಯದಾಳದಿ ಪಾರಮ್ಯ ಮೊರೆತ

ಬಿಸಿಲು ಬಂತೋ ಕರಗಿ ತೊರೆ-ತೊರೆಗಳಾಗಿ 
ಹರಿಯಿತು ನಿರಾಕಾರದ ಆಕಾರಕೆ 
ಅಲ್ಲಲ್ಲಿ ಉಳಿದವು ತಮ್ಮೊಳಗೆ ತಮ್ಮನ್ನು 
ಕೂಡಿಕೊಂಡವು ಪ್ರಕೃತಿಯ ಸಾಕಾರಕೆ.... 

Tuesday, 5 January 2021

ನೀನಿಲ್ಲದೆ ಅಪೂರ್ಣ ಜೀವನ

ಎಂದಾದರೊಮ್ಮೆ ಸೇರ ಬಹುದೇ ನಿನ್ನ 

ನೀನಾಗಿ ನನ್ನ ಕೂಡ ಬರಬಹುದೇ!
ಹೇಳೋಕೆ ಆಗಲಾರದಂಥ ವಿಷಯ
ತಾನಾಗೇ ಎಲ್ಲ ಮೂಡಿ ಬಿಡಬಹುದೇ !
 
ನೀನಿಲ್ಲದೆ ಅಪೂರ್ಣ ಜೀವನ
ನೀನಿಲ್ಲದೆ ಅಪೂರ್ಣ ಜೀವನ
ನಿಧಾನವಾಗಿ ಕಂಡುಕೊಂಡೆ ನೋಡು ನನ್ನೇ ನಾ

ನೀನಿಲ್ಲದೆ ಅಪೂರ್ಣ ಜೀವನ
ನೀನಿಲ್ಲದೆ ಅಪೂರ್ಣ ಜೀವನ
ನಿಧಾನವಾಗಿ ಕಂಡುಕೊಂಡೆ ನೋಡು ನನ್ನೇ ನಾ


ಬಾ ಒಂದು ಪ್ರಶ್ನೆಯಾಗಿ
ನಾ ಮೌನ ತಾಳಿದಂತೆ
ನೀ ನೀಡೋ ಉತ್ತರಕ್ಕೆ ಸೋತು ಬಿಡುವೆ
ಹೆಚ್ಚೇನೂ ಬೇಡಲಾರೆ 
ನನ್ನುಸಿರ ಭಾಗವಾಗು
ನೀ ಕೇಳೋ ಮುನ್ನ ನನ್ನೇ‌ ಬರೆದು ಕೊಡುವೆ

ನಿರಾಸೆಗೂ ನೀ ಆಗು ಕಾರಣ
ನಿರಾಸೆಗೂ ನೀ ಆಗು ಕಾರಣ
ನಿಧಾನವಾಗಿ ಕಂಡುಕೊಂಡೆ ನೋಡು ನನ್ನೇ ನಾ

ನೀನಿಲ್ಲದೆ ಅಪೂರ್ಣ ಜೀವನ
ನೀನಿಲ್ಲದೆ ಅಪೂರ್ಣ ಜೀವನ
ನಿಧಾನವಾಗಿ ಕಂಡುಕೊಂಡೆ ನೋಡು ನನ್ನೇ ನಾ

ಕಣ್ಣು ಕಣ್ಣಿಗೆ ಏನೋ ಹೇಳಿದಂತಿವೆ

ಕಣ್ಣು ಕಣ್ಣಿಗೆ ಏನೋ ಹೇಳಿದಂತಿವೆ 

ಬಣ್ಣ ಬಣ್ಣದ ಹೂವು ನಾಚಿದಂತಿವೆ 
ಸಣ್ಣದೊಂದು ಸಂಕೋಚ ಮಾತು ಮಾತಿಗೆ 
ಎಚ್ಚರ‌ ತಪ್ಪುವೆ ನಕ್ಕ ಮೋಡಿಗೆ 

ತಂಪು ಗಾಳಿ ಸೀರೆಯುಟ್ಟು 
ಮಾಡಿದಂತೆ ಏನೋ ಗುಟ್ಟು 
ಹಿಡುಯಲು ಮುಂದಾಗಿ ಸೋಲುವೆ ಹಾಗೇ 
ಹಾಡಿನಲ್ಲಿ ಪ್ರಾಸವಿಟ್ಟು 
ಹಾಡುವಾಗ ಆಸೆ ಪಟ್ಟು 
ನಟಿಸುವೆ ಹೀಗೇಕೆ ಕೇಳದ ಹಾಗೆ 
ಹೂ ಮಳೆಯನು ನಾ ಸುರಿಸುವೆ ಎದುರಾಗುವ ವೇಳೆ 
ಮೌನದ ಅನುಮೋದನೆಯನು ನೀ ನೀಡು .. ಓ... 

ಕಣ್ಣು ಕಣ್ಣಿಗೆ ಏನೋ ಹೇಳಿದಂತಿವೆ 
ಬಣ್ಣ ಬಣ್ಣದ ಹೂವು ನಾಚಿದಂತಿವೆ 
ಸಣ್ಣದೊಂದು ಸಂಕೋಚ ಮಾತು ಮಾತಿಗೆ 
ಎಚ್ಚರ‌ ತಪ್ಪುವೆ ನಕ್ಕ ಮೋಡಿಗೆ 

ದೂರವಾಗಿ ಕಾಡಬೇಡ 
ಕೈಯ್ಯ ತಪ್ಪಿ ಹೋಗಬೇಡ 
ಮರೆಯದೆ ಬರಬೇಕು ಕನಸಲೂ ನೀನೇ 
ನೇರವಾಗಿ ಮಾತಿನಲ್ಲಿ 
ಹೇಳುವಾಗ ಪ್ರೀತಿಯನ್ನು 
ಒಗಟಿನ ಪರಿಹಾಸ ವ್ಯರ್ಥವು ತಾನೆ 
ತಾಕಿಸು ತುಸುವಾದರೂ ಬೆರಳಂಚನು ಓ ಬಾಲೆ 
ಅಂತರವನು ಕಾದಿರಿಸುವ ಆಮೇಲೆ.. ಓ.. 

ಕಣ್ಣು ಕಣ್ಣಿಗೆ ಏನೋ ಹೇಳಿದಂತಿವೆ 
ಬಣ್ಣ ಬಣ್ಣದ ಹೂವು ನಾಚಿದಂತಿವೆ 
ಸಣ್ಣದೊಂದು ಸಂಕೋಚ ಮಾತು ಮಾತಿಗೆ 
ಎಚ್ಚರ‌ ತಪ್ಪುವೆ ನಕ್ಕ ಮೋಡಿಗೆ 

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...