Saturday, 18 September 2021

ಹೆಂಗಸರಿಗೆ ಬಂಗಾರ ಕೋರಿಕೆ

ಹೆಂಗಸರಿಗೆ ಬಂಗಾರ ಕೋರಿಕೆ

ಗಂಡಸರಿಗೆ ನೆಪವಾಯಿತು ಹೂಡಿಕೆ
ಹೆಂಗಸರಿಗೆ ಬಂಗಾರ ಕಾಣಿಕೆ
ತೊಡಿಸುವುದು ಗಂಡರ ಹೊಣೆಗಾರಿಕೆ

ಬಂಗಾರ ಆಚಾರಿಯ ಆಟಿಕೆ
ಬ್ಯಾಂಕಿನವರ ಪಾಲಿಗೆ ಅದು ಭದ್ರತೆ
ಸಾಲವೇನೋ ಕೊಡುತಾರೆ ಸುಲಭಕೆ
ಬಡ್ಡಿ ಕಟ್ಟಿ ಬಿಡಿಸಿಕೊಳ್ಳುವುದೇ ಹೆದರಿಕೆ

ವಾಕಿಗಂತ ಹೋಗಬ್ಯಾಡಿ‌ ಆಚೆಗೆ
ಪಾಲೀಶು ಮಾಡಿಸಿ ಆಭರಣಕೆ
ಅಸಲಿ-ನಕಲಿ ನೋಡರು ಕದಿಯೋದಕೆ
ಶೋಕಿ ಕೊನೆಗೆ ಎರಗಬಹುದು ನಿಮ್ಮ ಜೀವಕೆ

ಏ.ಸಿ ಮಳಿಗೆಯೊಳಗೆ ಕಾಲಿಟ್ಟಿರಿ
ಸಲ್ಯೂಟು ಹೊಡೆಯುವನು ಸೆಕ್ಯೂರಿಟಿ
ದೊಡ್ಡ ಒಡವೆ ಕೊಂಡರೆ ಕೂಲ್ಡ್ರಿಂಕು ಫ಼್ರೀ
ಚಿಕ್ಕ ಗ್ರಾಹಕರೋ ಕ್ಯಾರೇ ಇಲ್ಲ ರೀ

ಕೊಂಡಾಗ‌ ಒಡವೆಗಳು ಲಕ್ಷಕೆ
ಗಿರವಿಯಿಟ್ಟಾಗ ಬರದೇಕೋ ತೂಕಕೆ
ಕಲ್ಲು, ವ್ಯಾಕ್ಸು, ಮಣ್ಣು-ಮಸಿ ತಗೆಯಿರಿ
ಮಜೂರಿಗೆಂದು ಕೊಟ್ಟ ಮೊತ್ತ ಕಳೆಯಿರಿ

ಕೊನೆಗೆ ಉಳಿದ ಬಂಗಾರ ಕಷ್ಟಕೆ
ಆಗಬಹುದು ಎಂಬುದೇ ಮೂಢನಂಬಿಕೆ
ಶೇಟು ಕಟ್ಟಿಕೊಂಡ ದೊಡ್ಡ ಬಂಗಲೆ
ಪಾಠ ಕಲಿಯಬೇಕಿತ್ತು ನಾವಾಗಲೇ

ಮತ್ತೆ ಬಂತು ನೋಡಿ ಹೊಸ ಆಫ಼ರು
ಜಾಹೀರಾತು ನೀಡಬರುವ ದೊಡ್ಡ ಲೋಫ಼ರು
ಈ ಜೇಬಿನಿಂದ ಆ ಜೇಬಿಗೆ
ಪೈಸ ಉಳಿಸದೆ ಎಗರಿಸುವ ನಿಸ್ಸೀಮರು...

ನೆಚ್ಚಿಕೊಂಡ ಹಾಗೆ

 ಓಹ್ ... ಓಹ್ 

(A)ನೆಚ್ಚಿಕೊಂಡ ಹಾಗೆ 
ಹಚ್ಚಿಕೊಂಡೆ ಹೀಗೆ 
(C)ಹುಚ್ಚು ಹೃದಯವ (G)ಸವರುತ  
(A)ಒಪ್ಪಿಕೊಳ್ಳದೇನೆ 
ಅಪ್ಪಿಕೊಂಡ ಹಾಗೆ  
(C)ಕಳ್ಳ ಕನಸಲಿ (G)ಸುಳಿಯುತ 
(A)ನೀನೇ ಹೇಳು 
(F)ಇದೇನಿದು (Dm)ಕತೆ?
(A)ಬಾಳು ಈಗ 
(F)ಶುರು ನಿನ್ನ (Dm)ಜೊತೆ 
ಹೇ.. (A)ಕನ್ನಡಿ ಎದುರು ನಿಂತರೂ ಕೂಡ   
(F)ಕಾಣುವೆ ಅಲ್ಲಿ ನಿನ್ನದೇ ಛಾಯೆ 
(A)oh yeah. oh yeah.. (F)yeah yeah yeah yeah ನಿನ್ನದೇ ಛಾಯೆ
(A)ಎಲ್ಲಿಯೂ ಬಿಡದೆ ಕಾಡಿದೆ ಪ್ರೀತಿ 
(F)ಮಾಡಿದ ಹಾಗೆ ಯಾವುದೋ ಮಾಯೆ 
(A)oh yeah. oh yeah.. (F)yeah yeah yeah yeah ಯಾವುದೋ ಮಾಯೆ 

(A)ನೆಚ್ಚಿಕೊಂಡ ಹಾಗೆ 
ಹಚ್ಚಿಕೊಂಡೆ ಹೀಗೆ 
(C)ಹುಚ್ಚು ಹೃದಯವ (G)ಸವರುತ  
(A)ಒಪ್ಪಿಕೊಳ್ಳದೇನೆ 
ಅಪ್ಪಿಕೊಳ್ಳೋ ಹಾಗೆ  
(C)ಕಳ್ಳ ಕನಸಲಿ (G)ಸುಳಿಯುತ 

(C)ಸಾರೋಣ (G)ಖುಷಿ 
(A)ಬಾ ಕೈ (F)ಜೋಡಿಸಿ 
(C)ಕಣ್ಣಲ್ಲೇ (G)ಇದೋ  
(A)ಆಸೆ (F)ಒಪ್ಪಿಸಿ 
(C)ಇಳಿದೆ ನನ್ನೊಳಗೆ (G)ಮೌನವ 
(C)ಕದಡೋ (A)ರಾಗವನು ನೀಡುತ 
(C)ಕಲಿಸು (G)ಮಾತಿರದ ಭಾಷೆಯ 
(A)ಎಲ್ಲ (F)ದಿನ (A)ಕ್ಷಣ (C)ಈ ಜೀವ (G)ಭಾಗವಾಗಿರು 

ಹೇ.. (A)ಕನ್ನಡಿ ಎದುರು ನಿಂತರೂ ಕೂಡ   
(F)ಕಾಣುವೆ ಅಲ್ಲಿ ನಿನ್ನದೇ ಛಾಯೆ 
(A)oh yeah. oh yeah.. (F)yeah yeah yeah yeah ನಿನ್ನದೇ ಛಾಯೆ
(A)ಎಲ್ಲಿಯೂ ಬಿಡದೆ ಕಾಡಿದೆ ಪ್ರೀತಿ 
(F)ಮಾಡಿದ ಹಾಗೆ ಯಾವುದೋ ಮಾಯೆ 
(A)oh yeah. oh yeah.. (F)yeah yeah yeah yeah ಯಾವುದೋ ಮಾಯೆ 

ಕಾಡುವಂತೆ ನೀ ನೆನಪಾಗುವೆ

ಕಾಡುವಂತೆ ನೀ ನೆನಪಾಗುವೆ

ಊಹೆಯ ತುಂಬ ಆವರಿಸುವೆ   
ಕಾಡುವಂತೆ ನೀ ನೆನಪಾಗುವೆ

ದಾಹದ ವೇಳೆಯೂ, ನೀನೇ ನೀರಾಗುವೆ 
ಜೀವ ಕಾಪಾಡೋ ಉಸಿರಾಗುವೆ  
ಕಾಡುವಂತೆ ನೀ ನೆನಪಾಗುವೆ

ನೀಡದೇ ಕಾರಣ ಮಾಯವಾದಾಗ ನೀ 
ಸಾವಿನ ಅಂಚಿಗೆ ದೂಡಿದಂತಾಗಿದೆ 
ನೋಡು ಏಕಾಂತವೇ ದಾರುಣ 
ನೋವಿಗೂ ನಿನ್ನನೇ ಕೂಗುವೆ
ಕಾಡುವಂತೆ ನೀ ನೆನಪಾಗವೆ...

ಉತ್ತರ ಇಲ್ಲದ ಪ್ರಶ್ನೆಯ ಕೇಳುತ
ರೇಗಿಸಿ ಮಾತಲೇ ಸೋಲಿಸು ಹಾಗೆಯೇ
ಇಂಗಿದ ಕಣ್ಣನು ತಾಕುತ
ಬಾಷ್ಪಕೂ ಭಾಷೆಯ ಕಲಿಸುವೆ 
ಕಾಡುವಂತೆ ನೀ ನೆನಪಾಗವೆ...

ನೂಪುರ ನಾಚಿದೆ ನಾಟ್ಯವ ಆಡಲು 
ತಾಳವು ನಿನ್ನಲಿ ಲೀನವಾದಂತಿದೆ 
ಪಲ್ಲವಿ ಆಗು ನೀ ಹಾಡಿಗೆ 
ನಿನ್ನನು ಕೂಡಿ ನಾ ಹಾಡುವೆ  
ಕಾಡುವಂತೆ ನೀ ನೆನಪಾಗವೆ...

ಹೊಂಬಿಸಿಲೇ ಹೊಂಬಿಸಿಲೇ

ಹೊಂಬಿಸಿಲೇ ಹೊಂಬಿಸಿಲೇ 

ಚುಂಬಿಸಲೇ ಕಣ್ಣಿನಲೆ ಕಣ್ಣಿನಲೇ  
ಮುದ್ದಾಡುವೆ ಬಾ ಈಗಲೇ   
ಏನೇನೋ ಬೇಡಿಕೆ ಬಂದಿದೆ ಈ ವೇಳೆ 

ಚುಂಬಿಸಲೇ ಹೊಂಬಿಸಿಲೇ

ಬೇಲಿ ಇರದ ಮನಸಲಿ 
ಹೂವು ಅರಳಿ ನಿಂತಿದೆ 
ಖಾಲಿ ಉಳಿದ ಕಾಗದ  
ಓಲೆಗಳಿಗೆ ಸಾಲದೇ 
ಜೀವವೆರಡು ಒಂದೇ ಎನುತ 
ಸಣ್ಣ ಮುಗುಳು ಮೂಡಿದೆ 
ನೀನಿರದೇ, ಹೇಗಿರಲಿ 
ನೆನೆಯುತಲೇ ಭಯವಾಗಿದೆ 

ಮೀಟಿ ಹೊರಟೆ ನನ್ನನು 
ನಿಲ್ಲುತಿಲ್ಲ ಕಂಪನ 
ಒದ್ದೆಯಾದ ತುಟಿಯನು 
ತೇದು ಹೋಗು ಈ ಕ್ಷಣ 
ಜಾರಿ ಬಿಡುವೆ ತೋಳಿನೊಳಗೆ 
ಗಾಳಿಯಂತೆ ಹಗುರದಿ 
ಉಸಿರಿಲಿ, ಬೆರೆಸಿಕೋ 
ಭಯಕೆಗಳು ಮರವಾಗಿದೆ .. 

*******

(C)ಬೇಲಿ ಇರದ (G)ಮನಸಲಿ 
(C)ಹೂವು ಅರಳಿ (A)ನಿಂತಿದೆ 
(C)ಖಾಲಿ ಉಳಿದ (G)ಕಾಗದ  
(C)ಓಲೆಗಳಿಗೆ (A)ಸಾಲದೇ 
(A)ಜೀವವೆರಡು ಒಂದೇ ಎನುತ 
(F)ಸಣ್ಣ ಮುಗುಳು ಮೂಡಿದೆ 
(A)ಕೂಡಿ ಹೆಣೆದ ಗೂಡಿನೊಳಗೆ 
(F)ಪ್ರೇಮ ಚಿಗುರು ಮೂಡಿದೆ 
(Dm)ನೀನಿರದೇ, (G7)ಹೇಗಿರಲಿ 
(C)ನೆನೆಯುತಲೇ (G)ಭಯವಾಗಿದೆ 
(C)ಉಸಿರಿಲಿ ಬೆರೆಸಿಕೋ (G)ಭಯಕೆಗಳ
(A)ಹೆಸರಿಸಿ ಕಳುಹಿಸಿ (F)ಕೊಡುವೆ 
(C)ಕನಸಲಿ ಬರುವೆನು (G)ಕೊಡೆ ಹಿಡಿದು 
(A)ಮಳೆಗರೆಯಲು (F)ನಾನಿರುವೆ  

ಸೈರನ್ ಹಾಕಿಕೊಂಡೇ ಡಿಕ್ಕಿ ಹೊಡೆದಳು

ಸೈರನ್ ಹಾಕಿಕೊಂಡೇ ಡಿಕ್ಕಿ ಹೊಡೆದಳು

ಮಾನ್ಸೂನ್ ಮಳೆಯ ತಂದು ನೆನೆಸಿ ಬಿಟ್ಟಳು
ಗಾರ್ಡನ್ ಹೂವಿನಂತೆ ಚೆಲುವ ಹೊತ್ತಳು
ಮಾರ್ಡನ್ ಆದ್ರೂ ಸಂಸ್ಕಾರವಂತಳು
ಎಲ್ಲ ಹೇಳಿಕೊಟ್ಟಳು
ಮತ್ತೆ ಮರ್ಸಿಬಿಟ್ಟಳು
ಹಾರ್ಟು ಕೊಡ್ತೀನಂದಳು
ಹ್ಯಾಂಡು ಕೊಟ್ಟು ಹೋದಳು
ನನ್ನ ಕಾರ್ಟೂನು ಮಾಡಿಬಿಟ್ಟು ಕಿಸಿ ಕಿಸಿ ನಕ್ಕಳು

ಭಾರಿ ಚೂಟಿ ಇವಳು 
ಚೂರಿ ಘಾಟಿ ಇವಳು 
ಬ್ಯೂಟಿಫ಼ುಲ್ಲು ಬೆಳ್ದಿಂಗ್ಳು .. ನನ್ನವಳು
ಚೂರಿ ಕಣ್ಣಿನಂತವಳು 
ಪ್ಯಾರಿ ಮಾತನಾಡುವಳು 
ಕಲ್ಲರ್ಫುಲ್ಲು ಕಗ್ಗತ್ಲು .. ನನ್ನವಳು 

ಬರುವೆ ಕದ್ದು ಮುಚ್ಚಿ

ಬರುವೆ ಕದ್ದು ಮುಚ್ಚಿ

ಒಲವ ಪದ ಕಟ್ಟಿ ಹಾಡಿ
ಬಳಿಸಾರಿ
ಬೆರಳ ಕಚ್ಚಿ ನಿಲ್ಲು
ಸುರಿವೆ ಮೋಡ ಬಿಟ್ಟು ಹಾರಿ
ಇಳಿಜಾರಿ

ಬಾ ಜೊತೆಗೂಡಿ ಹಾಡುವ
ಕತೆಯಾಗಿ ಬಾಳುವ
ಅತಿಯಾದ ಒಲವಲ್ಲಿ
ಶರಣಾಗಿ ಹೋಗುವ
ಶುರುವಾದ ಹಾಗಿದೆ
ಹೊಸ ದಾರಿ ಈ ದಿನ 
ಸರಿಯಾದ ಹೆಸರೊಂದ
ಇರಿಸುತ್ತ ಸಾಗುವ

ಬರುವೆ ಕದ್ದು ಮುಚ್ಚಿ

ಕತ್ತಲಲಿ ಉರಿಸಿಕೊಂಡ ಹಣತೆಯಲ್ಲಿ
ಬೆಳಕು ನೀನೇ
ಸಕ್ಕರೆಯ ಸಿಹಿಯ ಕೂಡ ಮೀರಬಲ್ಲ
ಕಾಡು ಜೇನೇ
ಹತ್ತಿರಕೆ ಬೇಕು‌ ನೀನು‌ ಇಲ್ಲದಿರಲು
ಹೃದಯ ಬೇನೆ
ಎಲ್ಲದಕ್ಕೂ ಆದಿ‌-ಅಂತ್ಯ ಹಾಡುವವಳು
ನೀನೇ ತಾನೆ

ಎಲ್ಲಿ ಎಲ್ಲಿ ನಿನ್ನ ಗಮನವು 
ಉತ್ತರಿಸು ಬಿಟ್ಟು ಬಿಂಕವನು
ಕಟ್ಟ ಕಡೆ
ಆಸೆಯಿದು ಕೇಳಿ ಹೋಗು ಒಮ್ಮೆ 
ಆವರಿಸು ತಂಪು ಗಾಳಿಯಂತೆ 
ಬೇಸರವೇ ಆಗಲಾರದಂತೆ
ಪ್ರೀತಿಸುವೆ ಪ್ರಾಣ ನೀಡುವಂತೆ
ತ್ರಾಸು ಆಗಿಸಲೇ ಬ್ಯಾಡಲೇ
ಸುರ ಸಖಿಯೇ..

ತರ್ಕಾರಿ ಮಾರ್ಕೆಟ್ನಲ್ಲಿ

ತರ್ಕಾರಿ ಮಾರ್ಕೆಟ್ನಲ್ಲಿ

ಬಾಳೆ ಸಿಪ್ಪೆ ಮೆಟ್ಟಿ ಜಾರಿ
ಕಾಲ್ಜಾರಿ
ರಾತ್ರಿ ಪೂರ ಮಳೆ
ರಸ್ತೆ ಕೆಸರ ಗದ್ದೆಯಲ್ಲಿ
ಒದ್ದಾಡಿ
ಮಾ ತರ್ಕಾರಿ ತಂದಿದ್ದೀನಮ್ಮ
ಎಲ್ಲಾನೂ ದುಬಾರಿನಮ್ಮ
ಈರುಳ್ಳಿ, ಟಮೋಟೊ
ಚೌಕಾಶಿ ಮಾಡಿದ್ನಮ್ಮ
ಹೈಸ್ಕೂಲು ಫ಼್ರೆಂಡು ಸುಮ
ಹೂ ಮಾರ್ತಾಯಿದ್ದಳಮ್ಮ
ಮೊಳದುದ್ದ ಕೊಡು ಅಂದ್ರೆ 
ಮಾರುದ್ದ ಕೊಟ್ಟಳಮ್ಮ

ತರ್ಕಾರಿ ಮಾರ್ಕೆಟ್ನಲ್ಲಿ
 
ತಟ್ಟೆಯಲ್ಲಿ ಬೆರೆಸಿ ಕೊಟ್ರೆ 
ತಿನ್ನೋದಕ್ಕೇ ಲಾಯಕ್ ನೀನು 
ತಲೆಯಲಿ ತುಂಬಿಕೊಂಡಿರುವೆ 
ಮೂಟೆಗಾಗುವಷ್ಟು ಮಣ್ಣು 
ಹಟ್ಟಿಯಲ್ಲಿ ಮಾತ್ರ ಶೂರ 
ಹೊರಗೆ ನೀರ ಬಿಟ್ಟ ಮೀನು 
ಜೊತೆಗಿದ್ದೋರಂತೆ ನೀನು 
ಉದ್ಧಾರನೇ ಆಗೋಲ್ವೇನು 

ತಗೋ ತಗೋ ಇನ್ನೂ ಚೂರು ಉಂಡು 
ತೂಕಡಿಸು ಬಿಟ್ಟು ನಾಚಿಕೆಯ 
ತೇಗುತಲಿ 
ಆಕಳಿಸಿ ಜಾರು ನಿದ್ದೆಗೀಗ 
ಗೊರ್ಕೆ ಹೊಡಿ ಹಗ್ಲು ಹೊತ್ತಿನಾಗೆ
ಪರ್ಕೆ ತಗೊಂಡ್ ಹೊಡ್ದ್ರೂ ಕೂಡ ನಿಂಗೆ   
ಬರ್ದೇ ಹೋಯ್ತು ಬುದ್ಧಿನಾದ್ರೂ ಸ್ವಲ್ಪ 
ಯಾವ ಶಾಪವೊ ಇದು 
ಕರ್ಮ ನನಗೆ..  

ಮಾ ಸರಿಹೋಗುತೀನಿ ಕಣಮ್ಮ 
ಗೋಳಾಡಬೇಡ ಕಣಮ್ಮ 
ದಿನವೆಲ್ಲ ಬೈಬ್ಯಾಡ 
ವಿಶ್ರಾಂತಿ ತಗೋಳಮ್ಮ 
ಜೇಬಲ್ಲಿ ಕಾಸಿಲ್ಲಮ್ಮ 
ಒಂದ್ನೂರುಪಾಯ್ ಕೊಡಮ್ಮ 
ಪಿಚ್ಚರ್ರು ನೋಡೋಣ 
ಟಿಕೇಟು ತತ್ತೀನಮ್ಮ

ಸಿಗುವ ಥೇಟರ್ನಲ್ಲಿ.. 

ಗೆರೆಯ ದಾಟಿ ಬಂದು

ಗೆರೆಯ ದಾಟಿ ಬಂದು 

ಮನಕೆ ಲಗ್ಗೆ ಇಟ್ಟ ಪೋರಿ
ಮದನಾರಿ
ಗಿಲಕಿ ಸದ್ದಿನಂತೆ  
ಎದೆಯ ಕಲಕಿ ಹೋದ ಚೋರಿ
ಸುಕುಮಾರಿ
ಹೇ ಕಡೆಗಣಿಸಬೇಡವೇ 
ಕನಿಕರವೇ ಇಲ್ಲವೇ 
ಕನಸಲ್ಲೂ ಎದುರಾಗಿ ಮರೆಯಾಗಬೇಡವೇ 
ಒಲವುಣಿಸು ಕೂಡಲೇ
ಮನ ತಣಿಸು ಕೋಗಿಲೆ 
ಇನಿದಾದ ದನಿಯಲ್ಲಿ ನೀ ಕೆಣಕು ಜೀವವೇ 
ಗೆರೆಯ ದಾಟಿ ಬಂದು... 

ಚಪ್ಪರವ ಸೀಳಿಕೊಂಡು   
ನುಸುಳಿ ಬಂದೆ ಬಿಸಿಲಿನಂತೆ 
ಸಕ್ಕರೆಯ ಪಾಕದಲ್ಲಿ 
ಸಿಕ್ಕಿ ಹಾಕಿಕೊಂಡೆ ದುಂಬಿಯಂತೆ 
ಹಪ್ಪಳವು ಮುರಿಯುವಂತೆ 
ಚಲ್ಲಾಪಿಲ್ಲಿ ಆಗಿ ಹೋದೆ ನೋಡು   
ಹತ್ತಿರಕೆ ಬಂದು ಮೆಲ್ಲ  
ಮುದ್ದು ಮಾಡಿ ಹೋಗು ಮಗುವಿನಂತೆ 

ಎಲ್ಲಿ ಎಲ್ಲಿ ನಿನ್ನ ಗಮನವು 
ಉತ್ತರಿಸು ಬಿಟ್ಟು ಬಿಂಕವನು
ಕಟ್ಟ ಕಡೆ
ಆಸೆಯಿದು ಕೇಳಿ ಹೋಗು ಒಮ್ಮೆ 
ಆವರಿಸು ತಂಪು ಗಾಳಿಯಂತೆ 
ಬೇಸರವೇ ಆಗಲಾರದಂತೆ
ಪ್ರೀತಿಸುವೆ ಪ್ರಾಣ ನೀಡುವಂತೆ
ತ್ರಾಸು ಆಗಿಸಲೇ ಬ್ಯಾಡಲೇ
ಸುರ ಸಖಿಯೇ..

ಗರಿಯ ಬೀಸಿಕೊಂಡು

ಗರಿಯ ಬೀಸಿಕೊಂಡು 

ಕನಸ ಬೆನ್ನ ಹತ್ತಿ ಹಾರಿ 
ಸುಕುಮಾರಿ 
ಗಿಲಕಿ ಸದ್ದಿನಂತೆ  
ಎದೆಯ ಕಲಕಿ ಹೋದ ನಾರಿ 
ಮದನಾರಿ
ಹೇ ಕಡೆಗಣಿಸಬೇಡವೇ 
ಉಪಕರಿಸು ಈಗಲೇ 
ಎದುರಾಗಿ ಬಳಿ ಸಾರಿ ಇಳಿಜಾರಿ ನನ್ನಲಿ   
ಒಲವುಣಿಸು ಕೂಡಲೇ
ಮನ ತಣಿಸು ಕೋಗಿಲೆ 
ಇನಿದಾದ ದನಿಯಲ್ಲಿ ನೀ ಎರಗು ತೋಳಲಿ  

ಗರಿಯ ಬಿಚ್ಚಿ ನಿಂತು.... 

ಚಪ್ಪರವ ಸೀಳಿಕೊಂಡು   
ನುಸುಳಿ ಬಂದೆ ಬಿಸಿಲಿನಂತೆ 
ಸಕ್ಕರೆಯ ಪಾಕದಲ್ಲಿ 
ಸಿಕ್ಕಿ ಹಾಕಿಕೊಂಡೆ ದುಂಬಿಯಂತೆ 
ಹಪ್ಪಳವು ಮುರಿಯುವಂತೆ 
ಚಲ್ಲಾಪಿಲ್ಲಿಆಗಿ ಹೋದೆ ನೋಡು   
ಹತ್ತಿರಕೆ ಬಂದು ಮೆಲ್ಲ  
ಮುದ್ದು ಮಾಡಿ ಹೋಗು ಮಗುವಿನಂತೆ 

ಎಲ್ಲಿ ಎಲ್ಲಿ ನಿನ್ನ ಗಮನವು 
ಸುತ್ತಿ ಬಂದು ನಿಂತೆ ಎದುರಿಗೆ 
ಕಟ್ಟ ಕಡೆ
ಆಸೆಯಿದು ಕೇಳಿ ಹೋಗು ಒಮ್ಮೆ 
ಆವರಿಸು ತಂಪು ಗಾಳಿಯಂತೆ 
ಬೇಸರವೇ ಆಗದಂತೆ ನಿನ್ನ 
ಪ್ರೀತಿಸುವೆ ಪ್ರಾಣವೆನ್ನುವಂತೆ  
ಗೆದ್ದೇ ಗೆಲ್ಲುವೆ ಮನಸನು 
ನೋಡುತಿರು ನೀ... 

ನಿಂತೇ ನಿನ್ನೆದೆಗೊರಗುತ 

ಸದ್ದು ಗಿದ್ದು ಮಾಡಬೇಡ 
ಆದ ಹಾಗೆ ಏನೇನೋ 
ಏನೂ ಆಗದಿದ್ದರೂನು 
ಹಚ್ಚುತಾರೆ ಬಣ್ಣವನ್ನು 
ನನ್ನ ನಿನ್ನ ಹೊದ್ದು ನಿಂತ  
ಮಂಜು ಕರಗುತಿಲ್ಲವೇಕೆ 
ಪ್ರೀತಿ ಸುಲಭ ಅನ್ನುತಾರೆ 
ಅರ್ಥವಾಗುತ್ತಿಲ್ಲವೇಕೆ 

ನಿನ್ನೊಂದಿಗೆ ಈ ಯಾನವೇ ಚಂದ

ನಿನ್ನೊಂದಿಗೆ ಈ ಯಾನವೇ ಚಂದ

ನಿನ್ನಿಂದಲೇ‌ ನೆನಪೆಲ್ಲವೂ ಅಂದ
ಏನಾದರೂ ನಾ ಸೋಲುವುದಿಲ್ಲ 
ನೀ ನೀಡಿದ ಆ ಬೆಂಬಲದಿಂದ
ಎಲ್ಲೇ ಇರು ಹೇಗೇ ಇರು
ಅರಸುವೆ ಮನದಾಳದಿಂದ
ಗೆಳೆತನವೇ ಚಂದ
ಸ್ನೇಹಾನುಬಂಧ

ಆಟಾಡುವ ಬಾ ಕಣ್ಣಾ ಮುಚ್ಚಾಲೇ
ಹುಡುಕಾಡಿ ನಾ ಸೋಲಬೇಕು
ಗೀಚೋಣ ಬಾ ಬಿಳಿ ಗೋಡೆಯ ಮೇಲೆ
ಬಳಪಾನೇ‌ ಸಾಕೆನ್ನಬೇಕು
ಹಾಳೆಗಳ ದೋಣಿಯಲಿ
ಚಲಿಸುವ ಸಂತೋಷದಿಂದ
ಗೆಳೆತನವೇ ಚಂದ
ಸ್ನೇಹಾನುಬಂಧ

ತಗಾದೆ ಮಾಡಲು ತಮಾಷೆಯಲ್ಲಿ 
ಒಮ್ಮೊಮ್ಮೆ ನೋವಾಗುವಂತೆ
ವಿರಾಮವಿಲ್ಲದ ತಯಾರಿಯಲ್ಲಿ
ತೂಕಡಿಸಿ ಒದ್ದಾಡಿದಂತೆ
ಸಾಕಾದರೂ ಬೇಕೆನ್ನುವ
ಹರುಷವು ಈ ಸ್ನೇಹದಿಂದ
ಗೆಳೆತನವೇ ಚಂದ
ಸ್ನೇಹಾನುಬಂಧ

ಮರಳಿ ಆ ನೆನಪುಗಳು

ಮರಳಿ ಆ ನೆನಪುಗಳು

ಮರುಕಳಿಸುತಿವೆ ಹನಿಯಾಗಿಸುತ 
ಬೆರೆತು ದೂರಾಗುತಿವೆ 
ಒಲವಾಗಿಸುವ ಕನಸೂ ಸಹಿತ  
ಕಣ್ಣೀರು ಜಾರುವಾಗ 
ಸಾಲಾಗಿ.. ಸಾಲಾಗಿ
ನೋವೆಲ್ಲ ಮೂಡಿ ಬಂತು 
ಹಾಡಾಗಿ .. ಹಾಡಾಗಿ
ನನ್ನನ್ನು ಕೂಡಿ ಹಾಡು
ನೀನಾಗಿ..ನೀನಾಗಿ 
ಕಣ್ಣೀರು ಜಾರುವಾಗ 
ಸಾಲಾಗಿ.. ಸಾಲಾಗಿ
ಈ ಕಂಬನಿ ಒಬ್ಬಂಟಿಯಾಗುತಿದೆ  
ನೀನಿರದೆ 
ಓ ಓ.. 

ಒಂದಾಗಬೇಕಿದೆ ಕೂಡಿಟ್ಟುಕೊಂಡ ನನ್ನ ನಿನ್ನ ಸವಿ ಭಾವನೆ 
ಮುಂದಾಗಲಾರೆಯಾ ನನ್ನಂತೆ ನೀನೂ ಕೈ ಚಾಚುತ ಸುಮ್ಮನೆ?
ಬೇಕಿಲ್ಲ ಕಾರಣ ಈ ಜೀವವಿನ್ನೂ ನಿನಗಾಗಿ ಒದ್ದಾಡಿದೆ 
ಯಾಕಿಷ್ಟು ದಾರುಣ  ನೀ ಬಿಟ್ಟು ಹೋದ ಗಾಯವಿನ್ನೂ ಹಸಿಯಾಗಿದೆ
ನಿಂತಂತೆ ಬಾಕಿ ಮಾತು 
ಸಾಲಾಗಿ.. ಸಾಲಾಗಿ
ಈ ಮೌನ ಮೂಡಿಬಂತು 
ಹಾಡಾಗಿ .. ಹಾಡಾಗಿ
ನನ್ನನ್ನು ಕೂಡಿ ಹಾಡು 
ನೀನಾಗಿ..ನೀನಾಗಿ 
ಕಣ್ಣೀರು ಜಾರುವಾಗ 
ಸಾಲಾಗಿ.. ಸಾಲಾಗಿ
ಈ ಕಂಬನಿ ಒಬ್ಬಂಟಿಯಾಗುತಿದೆ  
ನೀನಿರದೆ 
ಓ ಓ.. 

ಬರುವೆ ನೀ ಕಾಯುತಿರು

ಬರುವೆ ನೀ ಕಾಯುತಿರು 

ಆ ಕನಸುಗಳ ರಹದಾರಿಯಲಿ   
ಕೊಡುವೆ ಸಿಹಿ ಬಯಕೆಗಳ 
ಆ ತಾರೆಗಳ ಕಿರುಬೆಳಕಿನಲಿ 
ಪ್ರೀತಿಗೆ ಸೋಲುವಾಗ 
ಹಾಯಾಗಿ ಹಾಯಾಗಿ 
ಈ ಮೌನ ತಾಳುವಾಗ 
ಹಾಡಾಗಿ ಹಾಡಾಗಿ 
ನನ್ನನ್ನು ಕೂಡಿ ಹಾಡು 
ನೀನಾಗಿ..ನೀನಾಗಿ 
ಈ ಮೌನ ತಾಳುವಾಗ 
ಹಾಡಾಗಿ ಹಾಡಾಗಿ 
ನೀನೆಂದರೆ ಮುಂಜಾವಿನ ಬೆಳಗು
ಈ ಜೀವಕೆ  
ಓ ಓ 

ಒಂದಾಗಬೇಕಿದೆ ಕೂಡಿಟ್ಟುಕೊಂಡ ನನ್ನ ನಿನ್ನ ಸವಿ ಭಾವನೆ 
ಮುಂದಾಗಲಾರೆಯಾ ನನ್ನಂತೆ ನೀನೂ ಕೈ ಚಾಚುತ ಸುಮ್ಮನೆ?
ಬೇಕಿಲ್ಲ ಕಾರಣ ಈ ಜೀವವಿನ್ನೂ ನಿನಗಾಗಿ ಒದ್ದಾಡಿದೆ 
ನಿಂತಲ್ಲೇ ಕಂಪನ ಆ ನೋಟದಲ್ಲೇ ಲೂಟಿ ಆಗೋ ಶಂಕೆಯಿದೆ 
ನಿಂತಾಗ ಬಾಕಿ ಮಾತು 
ಹಾಯಾಗಿ ಹಾಯಾಗಿ 
ಈ ಮೌನ ತಾಳುವಾಗ 
ಹಾಡಾಗಿ ಹಾಡಾಗಿ 
ನನ್ನನ್ನು ಕೂಡಿ ಹಾಡು 
ನೀನಾಗಿ..ನೀನಾಗಿ 
ಈ ಮೌನ ತಾಳುವಾಗ 
ಹಾಡಾಗಿ ಹಾಡಾಗಿ 
ನೀನೆಂದರೆ ಮುಂಗಾರಿನ ಬೆರಗು  
ಈ ಜೀವಕೆ  
ಓ ಓ

ಹೇ ಒಲವೇ ... ಈ ಜೀವವಿನ್ನೂ ನಿನ್ನದೇ

ಹೇ ಒಲವೇ

ಈ ಜೀವವಿನ್ನೂ ನಿನ್ನದೇ 
ನೀ ಇರದೆ
ಈ‌ ಲೋಕ ಶೂನ್ಯವಾಗಿದೆ
ಮಾತು ಮಾತಿಗೂ ಮರೆಯಾಗೋ
ಮಾಯಗಾತಿ ಆಗುವೆಯೇಕೆ
ಸಾಕು ಮಾಡು ಒದ್ದಾಟವನು
ಸಮೀಪವಾಗುತ
ಗಾಯಗೊಂಡಿರೋ ಹೃದಯಕ್ಕೆ
ಹಿತವಾದ ಲೇಪನ ನೀನಾದೆ
ಸೋತು ಹೋದರೂ ಈ ವೇಳೆ
ಸಹಾಯವಾದಹಾಗಿದೆ
ಬೇಲಿ ಹಾಕದೆ ಮನಸನ್ನು
ತೆರೆಯುತ್ತ ನಿನ್ನ ದಾರಿ ಕಾದೆ
ಕಣ್ಣಿನಲ್ಲಿಯೇ ಮನೆ ಮಾಡು
ವಿದಾಯ ಹೇಳದೆ

ಕಳುಹಿಸಿದ ಕನಸದು ತುಲುಪಿತಾ
ಕವಿತೆಗಳ ಸರಣಿಕೆ ಹಿಡಿಸಿತಾ
ಕಲಿಸುತಲಿ ಕಲಿಯೋ ಪ್ರೀತಿ ಎದೆಗೆ ನಾಟಿತಾ
ಎಣಿಸುತಿರು ಸರಿಯುವ ಕ್ಷಣವನು
ಸ್ಮರಿಸುತಲಿ ಪ್ರಣಯದ ಪದವನು
ಆಗುವುದು ನನಗಾದಂತೆ ನಿನಗೂ ಖಂಡಿತ
ಬಿಡಿಸುತಲಿ ಬಾಳ ಸಿಕ್ಕನು
ಹೆಣೆಯುತಲಿ ನೆನಪ ಕೌದಿಯ
ಕಳೆಯುವ ಉಳಿದ ಜೀವನ ಪ್ರೀತಿ ಮಾಡುತಾ...

ಎತ್ತ ನೋಡಲು ನೀನೇನೇ
ನಿನ್ನತ್ತ ವಾಲುವ ಮಗುವಾದೆ
ಬಿತ್ತಿ ಹೋದೆ ನೀ ತಳಿರನ್ನು
ಉಪಾಯವಿಲ್ಲದೆ
ಚಿತ್ತ ಮೂಡಿಸೋ ಚಿತ್ತಾರ
ನೂರಾರು ಬಣ್ಣ ಕೂಡುವ ಸಂತೆ
ಪ್ರೀತಿ ಮಾಡುವ ಮನಸಲ್ಲೇ
ಪ್ರಚಾರವಿಲ್ಲದೆ...

ಹೇ ಒಲವೇ
ಈ ಜೀವ ಭಾಗ ನಿನ್ನದೇ
ನೀ ಇರದೆ
ಈ‌ ಲೋಕ ಶೂನ್ಯವಾಗಿದೆ

Friday, 17 September 2021

ನೀನಿಲ್ಲದೆ ~~~

ನೀನಿಲ್ಲದೆ 

ತುಂಬಿ ಬಂದ ಕಣ್ಣಿಗಿಲ್ಲ ಯಾವ ಸಾಂತ್ವನ 
ನೀನಿಲ್ಲದೆ 
ಬಾಳ ದಾರಿ ಮುಂದೆ ಸಾಗಲಿಲ್ಲ ಕಾರಣ 
ನೀನಿಲ್ಲದೆ 
ಉಸಿರಾಟವಿನ್ನೇಕೆ ಅನಿಸುತ್ತಿದೆ ಈ ಕ್ಷಣ 
ನೀನಿಲ್ಲದೆ
ಮನಸಿಲ್ಲದೆ ಬದುಕುವ ಬದುಕು ಬಲು ದಾರುಣ

ಸೋತು ಹೋದ ಆಟವೇ 
ನೀತಿ ಪಾಠ ಹೇಳಿದೆ 
ಬಿಟ್ಟು ಕೊಡುವ ಅಭ್ಯಾಸವಾಗಿಹೋಗಿದೆ 
ಹತ್ತು ಹಲವು ತಿರುವಲಿ 
ಹೃದಯ ಕಳುವಾಗಿದೆ 
ಕಟ್ಟಿಕೊಂಡ ಕನಸ ಗೂಡು ಚೂರಾಗಿದೆ 
ಎಂದೋ ಕೊಟ್ಟ ಮಾತು, ಮತ್ತೆಲ್ಲೋ ಎದುರು ಸಿಕ್ಕು 
ಬಿಕ್ಕಿ ಬಿಕ್ಕಿ ಅಳುವ ಸದ್ದು ಜೀವವನ್ನೇ ಘಾಸಿ ಮಾಡಿದೆ... 

ಆಸೆ ಉಂಟು ಸಾವಿರ
ಆದರೆಲ್ಲ ಸ್ಥಾವರ
ದೂಡ ಬೇಕು ಎಲ್ಲವನ್ನೂ ನೀನೇ ಮುಂದಕೆ
ಶಾಪದಂತೆ ಮೂಡಲು
ಪ್ರೀತಿಯಲ್ಲಿ ಬೇಸರ
ಯಾವ ಲಾಭ ನೀಡಲಿಲ್ಲ ನಮ್ಮ ಹೂಡಿಕೆ
ಮಾಯಾ ಚಿಟ್ಟೆಯೊಂದು, 
ನನ್ನ ಹೂದೋಟದೆಲ್ಲ ಬಣ್ಣವನ್ನು ಹೊತ್ತು ಹೋಗಿದೆ...

ಊರ ಬಿಟ್ಟು ಬಂದವರು

ಊರ ಬಿಟ್ಟು ಬಂದವರು

ಸೂರನ್ನೇ ಕಾಣದವರು
ಎದುರು ಸಿಕ್ಕರು
ಒಂದು ಮಳೆಗಾಲದ ರಾತ್ರಿ
ಕನಸು ಬತ್ತಿದ ಕಣ್ಣು
ಉಸಿರಲಿ ಆರದ ಹುಣ್ಣು
ಮುಗುಳು ನಕ್ಕರು
ಅದು ನೋವೆಂಬುದು ಖಾತ್ರಿ  

ಒಬ್ಬರ ಮನೆಯಲ್ಲಿ 
ಹಬ್ಬದ ಊಟ ಸವಿ 
ಮತ್ತೊಬ್ಬರಿಗಲ್ಲಿ  
ಊಟವೆಂಬುದೇ ಹಬ್ಬ
ಹಸಿವನ್ನು ಹಂಚುವಲ್ಲಿ 
ತೋರಿದ ನಿಷ್ಠೆಯ ನೀ 
ಅನ್ನ ಹಂಚುವಲ್ಲಿ 
ಯಾಕೆ ತೋರಲಿಲ್ಲ ದೇವರೇ?

ನೀನು ನಾನು ಸೇರಿ

ನೀನು ನಾನು ಸೇರಿ 

ಸಾಗಿ ಹೊರಟ ದಾರಿ 
ನಮ್ಮ ಪ್ರೀತಿಗೊಂದು ಗುರುತನ್ನು ನೀಡಿದೆ  
ಕೇಳಿ ನೋಡು ಒಮ್ಮೆ 
ನಿನ್ನ ಮಾತಿನಂತೆ 
ನನ್ನ ಮೌನ ಕೂಡ ಏನನ್ನೋ ಹೇಳಿದೆ 
ರೆಕ್ಕೆ ಮೂಡಿ ಬಂದು 
ಕೂಡಿ ಹಾರಿಕೊಂಡು 
ಈಗಷ್ಟೇ ಭೂಮಿಯನ್ನು ತಾಕಿದಂತಿದೆ 

ಕಾದಿದ್ದು ಸಾಕು 
ನೆಪವೇಕು ಬೇಕು 
ಬೇಕೆಂದಾಗೆಲ್ಲ ಮುತ್ತು ನೀಡೋ ಸಮ್ಮತಿಯ ನೀಡು 
ಕಾಡೋದು ಯಾಕೆ  
ಪ್ರೀತಿ ನಾಜೂಕು 
ವಿರಕ್ಕೆ ಕೊನೆಯ ಇಟ್ಟು ಕನಸಿನಲ್ಲೂ ಮುದ್ದಾಡು 
ಇಲ್ಲಿಂದ ಮುಂದೆ ಎಲ್ಲಾನೂ ಚಂದ 
ಹೀಗೆಲ್ಲ ನಿನಗೂ ಅನಿಸೋದು ಉಂಟಾ 
ಕಾದಾಟದಲ್ಲೂ ಏನೋ ಆನಂದ 
ಕಾರಣವೇ ಇರದೆ ಕಣ್ಣೀರು ಜಾರಿ ಬಂತಾ ಹೇಗೆ ... 

ಸಂಕೋಚವೇ, ಸಂಕೋಚವೇ

ಸಂಕೋಚವೇ, ಸಂಕೋಚವೇ

ಸಂಗಾತಿಯ ಸೆರಗಾಗಿರು  
ಬಂಗಾರದ ಎಳೆಯಾಗಿರು 
ತೊದಲು ನುಡಿ ಮೊದಲಾಗುವಾಗ 
ಮುಗಿಯದ ಮಳೆಯಾಗಿರು!

ಕುಡಿಯೊಡೆದ ಪ್ರೀತಿ... ಕುಡಿಯೊಡೆದ ಪ್ರೀತಿ
ನಾಮದಾಗಿದೆ... ನಾಮದಾಗಿದೆ
ಅತಿಶಯದ, ಅನುಭವದ 
ಒಲವ ಸುಧೆಯ ಸವಿವ ಸಮಯ 
ಮಧುರ ಕ್ಷಣವಾಗಿದೆ.. 

ಹೂವಾಗಿ, ಹೂವಾಗಿ
ಅರಳೋಣವೇ?
ಹೂವಾಗಿ, ಹೂವಾಗಿ ಅರಳೋಣವೇ
ನವಿರಾದ ಕತೆಯಾಗಿ ಉಳಿಯೋಣವೇ?
ಕೊನೆಯಿರದ ಕಡಲಲ್ಲಿ ಅಲೆಯಾಗಿ ಬೆರೆಯೋಣವೇ?

ಕನಸಲಿ ಕಂಡ ಮೊಗವನು

ಕನಸಲಿ ಕಂಡ ಮೊಗವನು

ಎದುರಲಿ ಕಾಣೋ‌ ಸುಖವಿದು
ಅಳತೆಗೂ ಸಿಗದ ಭಾವನೆ
ಸಮಯಕೆ ಕಾದು ಕೂರದು
ಮಾತನಾಡಲು ಬಾರದು ಪದ
ಹಾಡಿಲೇನು ಬರೆದು
ಬರುವೆಯಾ ಬರುವೆಯಾ ಬೇಗನೆ
ಹೃದಯದ ಬಾಗಿಲ ತೆರೆಯುವೆ
ಮರೆಯುತ ಮರೆಯುತ ಜಗವನೇ
ಕಳೆದು ಹೋಗುವ ಬಾ ಸುಮ್ಮನೆ...

ಈ... ಬೆರಳ ತುದಿಯ ಮಡಲಲ್ಲಿ 
ಆ ಕಂಬನಿ, ಇನ್ನೆಷ್ಟು ಒದ್ದಾಡಬೇಕು
ನೀ ಬೇಕು ಎಂಬ ಹಠವೊಂದನು 
ಸಂತೈಸುವ ಆ ಉಸಿರೊಂದಿಗೆ
ಪೂರೈಸು ನೀ ಮನದಾಸೆಯ
ಹೊಂಬಣ್ಣವ ಗೀಚಿ ಈ ಬಾಳಿಗೆ 
ಓ ನನ್ನ ಅನುರಾಗವೇ... 

ಬರುವೆಯಾ ಬರುವೆಯಾ ಬೇಗನೆ
ಹೃದಯದ ಬಾಗಿಲ ತೆರೆಯುವೆ
ಮರೆಯುತ ಮರೆಯುತ ಜಗವನೇ
ಕಳೆದು ಹೋಗುವ ಬಾ ಸುಮ್ಮನೆ...

ಒಲಿಯುತಾ, ಒಲಿಯುತಾ

ಒಲಿಯುತಾ, ಒಲಿಯುತಾ

ನಗುವ ಹಂಚಿ ಹೋಗು ಸಂಗಾತಿ  
ಒಲಿಯುತಾ, ಒಲಿಯುತಾ
ನಗುವ ಹಂಚಿ ಹೋಗು ಸಂಗಾತಿ 
ಈ ಸಾಂಗತ್ಯಕೆ, ನೀ ಬರಲಾದರೆ   
ನಾ ಕಲ್ಲಾಗುವೆ ಖುಷಿಯೊಂದಿಗೆ 

ತೊರೆಯುತ, ತೊರೆಯುತ 
ಅಳಿಸಬೇಡ ನನ್ನ ಸಂಪ್ರೀತಿ 
ತೊರೆಯುತ, ತೊರೆಯುತ 
ಅಳಿಸಬೇಡ ನನ್ನ ಸಂಪ್ರೀತಿ 
ನಾ ಹಿಂಬಾಲಿಸೋ, ನಿನ್ನ ಆ ಹೆಜ್ಜೆಯು
ಹೂ ಗುರುತಾಗಿದೆ ಈ ಬಾಳಿಗೆ 

ಬಾ ಹಳೆಯ ನೆನಪೇ

ಬಾ ಹಳೆಯ ನೆನಪೇ

ಆವರಿಸು ನನ್ನ ಮನವ
ಈ ತಂಪು ಸಂಜೆಯ ವೇಳೆ 
ಏಕಾಂಗಿ ಯಾನದಲಿ
ಓ ಕಳೆದ ಕ್ಷಣವೇ
ದಾಖಲಿಸು ಗುರುತಾಗಿಸುತ  
ಮರೆತಾಗ ತೆರೆಯುತ ಹಾಳೆ  
ನೆನಪನ್ನು ಮೂಡಿಸು ನನ್ನ ಮನಸಿನಲಿ

ದಿನವೆಲ್ಲ ಕಾದು ಸೋತೆ
ಬರಲೇ ಇಲ್ಲವೇಕೆ
ಈ ಕಣ್ಣಲ್ಲಿ ನೀರಾಗಿ
ನೀ ಜಾರಬೇಕಿದೆ
ಅದು ಎಲ್ಲಿ ಅಡಗಿ ಕೂತೆ
ಕರೆ ಕೇಳಿಲ್ಲವೇಕೆ
ಈ ಹಾಡನ್ನು ಒಂದಾಗಿ
ಹಾಡಬೇಕಿದೆ.. ಹೇ

ನೆನಪುಗಳ ಕಂತೆ
ಕಾಡುವುದೇ ಹೀಗೆ.. ಏ ಹೇ
ಕವಿತೆಗಳ ಸಂತೆ
ಸಾಗುವುದೇ ಹೀಗೆ.. ಹೇ

ಅಲೆಯಲೆಯಾಗಿ ಅಲೆಯಲೆಯಾಗಿ

ಅಲೆಯಲೆಯಾಗಿ ಅಲೆಯಲೆಯಾಗಿ

ಮನಸನು ತಾಕುವೆ
ಬರೆದಿಹ ಸಾಲನು
ಬಿದದೆಯೇ ಓದುವೆ
ಹನಿಹನಿಯಾಗಿ ಹನಿಹನಿಯಾಗಿ
ಇನಿದನಿಯಾಗುವೆ 
ಇಳೆಯನು ತಾಕುವ
ಮಳೆಹನಿಯಾಗುವೆ
ಆಸೆಗಳ ಹಾಸುತಲಿ ಎದುರಲಿ ನಿಲ್ಲುವೆ
ನೀನಿಡುವ ಹೆಜ್ಜೆಯನು ಸವಿಯುತ ಸಾಗುವೆ
ಕಣ್ಣು ಮುಚ್ಚಿಯೂ, ನಿನ್ನೇ ಕಾಣುವೆ

ಸೀಬೆಯ ಮರ ಕಡಿದು

ಸೀಬೆಯ ಮರ ಕಡಿದು

ಮಾವಿಗೆ ಮೊರೆಯಿಟ್ಟವನು ಮಾನವ, ಮಾನವ
ಜೇಬನು ಅದುಮಿಟ್ಟು
ಊರಿಗೇ ಕಣ್ಣಿಟ್ಟವನು ಮಾನವ, ಮಾನವ
ಕೂಡಿಡಲು ಗೋಡೆಯ
ಕಾಪಿಡಲು ಬಾಗಿಲ
ಭದ್ರವಾದ ಚಿಲಕ ಅದಕೆ
ಕಬ್ಬಿಣದ ಬೀಗ ಜಡಿದು
ಹಾಲನು ತಾ ಕುಡಿದು ಹಾಲಾಹಲ ಕಕ್ಕಿದವ ಮಾನವ, ಮಾನವ
ಗೋಳಿನ‌ ಕತೆ ಕೇಳಿ ಆಕಳಿಸಿ ಮಲಗಿದವ ಮಾನವ, ಮಾನವ

ಬಾತು ಕೋಳಿ ಇಟ್ಟ ಮೊಟ್ಟೆ

ಬಾತು ಕೋಳಿ ಇಟ್ಟ ಮೊಟ್ಟೆಯನ್ನು ನಾಯಿ ಕದಿಯಿತು 

ಬೀದಿ ನಾಯಿ ಅಲ್ಲ ಶುದ್ಧ ಸಸ್ಯಾಹಾರಿ ಮನೆಯ ನಾಯಿ 
ದಿನಕೆ ನಾಲ್ಕು ಬರಿ ಸ್ವಚ್ಛ ಭಾರತಕ್ಕೆ ನಮಿಸುತಾ 
ಕಳ್ಳತನದಿ ಮೊಟ್ಟೆ ಮೆಕ್ಕಿ, ಬಾತು ಕೋಳಿ ಬಿಕ್ಕಿತು 

ಮೊಟ್ಟೆಯೆಂದರದು ಹೀಗೆ  ಬೆಳ್ಳಗೆ ದುಂಡಗೆ ಎಂದು 
ಎಂದೂ ಕಾಣದ ನಾಯಿ ಅಂಜುತಲೇ ನೆಕ್ಕಿತು 
ಗೂಡಿನಿಂದ ಉರುಳಿ ಮೊಟ್ಟೆ ಬಿರುಕು ಬಿಟ್ಟು ಚೆಲ್ಲಿದಾಗ 
ಮೂಸು ನಾಯ ಮೂಗ ಬಡಿದು ನಾಲಿಗೆಗೆ ಸಿಕ್ಕಿತು 

ಏನು ರುಚಿ, ಏನು ರುಚಿ ಆಗಿನಿಂದ ನಾಯಿ ತಾನು 
ತನ್ನ ಮನೆಯ ಹುಳಿ, ಮೊಸರು ಅನ್ನ ತಿನ್ನದಾಯಿತು 
ಮಾಲೀಕನನ್ನು ಕಂಡು ಯಾಕಿಂಥ ಶಿಕ್ಷೆಯೆಂದು 
ಕಟ್ಟಿದ ಸರಪಳಿಗೆ ನೋವ ಹೇಳಿಕೊಂಡಿತು 

ಮೊಟ್ಟೆಯನ್ನು ದೂರವಿಟ್ಟು ಯಾವ ಸ್ವರ್ಗ ಕಂಡಿರಿ 
ಮೂಳೆ ಕಡಿವ ಹಲ್ಲಿಗೆ ಯಾವ ಪಾಡು ಕೊಟ್ಟಿರಿ 
ಓಡಬಲ್ಲ ಕಾಲು ಕಟ್ಟಿ, ಬೊಗಳಿದಾಗ ಬೆತ್ತ ತಟ್ಟಿ 
ಬೇಡದ ಹೆಸರಿಟ್ಟು ಶೋಕಿಗಾಗಿ ಮನೆಯಲ್ಲಿಟ್ಟಿರಿ

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...