Friday 17 September 2021

ಬಾತು ಕೋಳಿ ಇಟ್ಟ ಮೊಟ್ಟೆ

ಬಾತು ಕೋಳಿ ಇಟ್ಟ ಮೊಟ್ಟೆಯನ್ನು ನಾಯಿ ಕದಿಯಿತು 

ಬೀದಿ ನಾಯಿ ಅಲ್ಲ ಶುದ್ಧ ಸಸ್ಯಾಹಾರಿ ಮನೆಯ ನಾಯಿ 
ದಿನಕೆ ನಾಲ್ಕು ಬರಿ ಸ್ವಚ್ಛ ಭಾರತಕ್ಕೆ ನಮಿಸುತಾ 
ಕಳ್ಳತನದಿ ಮೊಟ್ಟೆ ಮೆಕ್ಕಿ, ಬಾತು ಕೋಳಿ ಬಿಕ್ಕಿತು 

ಮೊಟ್ಟೆಯೆಂದರದು ಹೀಗೆ  ಬೆಳ್ಳಗೆ ದುಂಡಗೆ ಎಂದು 
ಎಂದೂ ಕಾಣದ ನಾಯಿ ಅಂಜುತಲೇ ನೆಕ್ಕಿತು 
ಗೂಡಿನಿಂದ ಉರುಳಿ ಮೊಟ್ಟೆ ಬಿರುಕು ಬಿಟ್ಟು ಚೆಲ್ಲಿದಾಗ 
ಮೂಸು ನಾಯ ಮೂಗ ಬಡಿದು ನಾಲಿಗೆಗೆ ಸಿಕ್ಕಿತು 

ಏನು ರುಚಿ, ಏನು ರುಚಿ ಆಗಿನಿಂದ ನಾಯಿ ತಾನು 
ತನ್ನ ಮನೆಯ ಹುಳಿ, ಮೊಸರು ಅನ್ನ ತಿನ್ನದಾಯಿತು 
ಮಾಲೀಕನನ್ನು ಕಂಡು ಯಾಕಿಂಥ ಶಿಕ್ಷೆಯೆಂದು 
ಕಟ್ಟಿದ ಸರಪಳಿಗೆ ನೋವ ಹೇಳಿಕೊಂಡಿತು 

ಮೊಟ್ಟೆಯನ್ನು ದೂರವಿಟ್ಟು ಯಾವ ಸ್ವರ್ಗ ಕಂಡಿರಿ 
ಮೂಳೆ ಕಡಿವ ಹಲ್ಲಿಗೆ ಯಾವ ಪಾಡು ಕೊಟ್ಟಿರಿ 
ಓಡಬಲ್ಲ ಕಾಲು ಕಟ್ಟಿ, ಬೊಗಳಿದಾಗ ಬೆತ್ತ ತಟ್ಟಿ 
ಬೇಡದ ಹೆಸರಿಟ್ಟು ಶೋಕಿಗಾಗಿ ಮನೆಯಲ್ಲಿಟ್ಟಿರಿ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...