Saturday 18 September 2021

ಬರುವೆ ಕದ್ದು ಮುಚ್ಚಿ

ಬರುವೆ ಕದ್ದು ಮುಚ್ಚಿ

ಒಲವ ಪದ ಕಟ್ಟಿ ಹಾಡಿ
ಬಳಿಸಾರಿ
ಬೆರಳ ಕಚ್ಚಿ ನಿಲ್ಲು
ಸುರಿವೆ ಮೋಡ ಬಿಟ್ಟು ಹಾರಿ
ಇಳಿಜಾರಿ

ಬಾ ಜೊತೆಗೂಡಿ ಹಾಡುವ
ಕತೆಯಾಗಿ ಬಾಳುವ
ಅತಿಯಾದ ಒಲವಲ್ಲಿ
ಶರಣಾಗಿ ಹೋಗುವ
ಶುರುವಾದ ಹಾಗಿದೆ
ಹೊಸ ದಾರಿ ಈ ದಿನ 
ಸರಿಯಾದ ಹೆಸರೊಂದ
ಇರಿಸುತ್ತ ಸಾಗುವ

ಬರುವೆ ಕದ್ದು ಮುಚ್ಚಿ

ಕತ್ತಲಲಿ ಉರಿಸಿಕೊಂಡ ಹಣತೆಯಲ್ಲಿ
ಬೆಳಕು ನೀನೇ
ಸಕ್ಕರೆಯ ಸಿಹಿಯ ಕೂಡ ಮೀರಬಲ್ಲ
ಕಾಡು ಜೇನೇ
ಹತ್ತಿರಕೆ ಬೇಕು‌ ನೀನು‌ ಇಲ್ಲದಿರಲು
ಹೃದಯ ಬೇನೆ
ಎಲ್ಲದಕ್ಕೂ ಆದಿ‌-ಅಂತ್ಯ ಹಾಡುವವಳು
ನೀನೇ ತಾನೆ

ಎಲ್ಲಿ ಎಲ್ಲಿ ನಿನ್ನ ಗಮನವು 
ಉತ್ತರಿಸು ಬಿಟ್ಟು ಬಿಂಕವನು
ಕಟ್ಟ ಕಡೆ
ಆಸೆಯಿದು ಕೇಳಿ ಹೋಗು ಒಮ್ಮೆ 
ಆವರಿಸು ತಂಪು ಗಾಳಿಯಂತೆ 
ಬೇಸರವೇ ಆಗಲಾರದಂತೆ
ಪ್ರೀತಿಸುವೆ ಪ್ರಾಣ ನೀಡುವಂತೆ
ತ್ರಾಸು ಆಗಿಸಲೇ ಬ್ಯಾಡಲೇ
ಸುರ ಸಖಿಯೇ..

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...