ಓಡುವ ಸಮಯವೇ
ಏಕೆ ಅವಸರ ನಿಂತುಕೋ
ಆಡದ ಮಾತಿಗೂ
ಅರ್ಥ ಹೇಳುವೆ ತಿಳಿದುಕೋ
ಹೋದರೆ ಹೋಗಲಿ
ಯಾರೇ ಆದರೂ ಬಾಳಲಿ
ಉಳಿಯುವ ನೆನಪನು
ನಿನ್ನ ಕಿಸೆಯಲಿ ತುಂಬಿಕೋ...
ನೀ ಮುಳ್ಳನು ನಡೆಸುವ ಚತುರನು
ಅ ಮುಳ್ಳಿಗೆ ಸಿಲುಕಿದ ಪಯಣಿಗ ನಾನು...
ತಿರುವುಗಳು ಕಿರು ಕತೆಯ ಹೇಳಿವೆ ಆಲಿಸು
ನೀ ನೆರಳ ನೀಡದ ಮರದ ಮರುಕವ ದಾಟಿಸು
ಎರವಲಾಗಿವೆ ಪಡೆಯಲಾಗದ ಸುಖಗಳು
ನೀ ಪಡೆದ ಕಡೆಯಲೇ ಎಲ್ಲ ಋಣವನು ತೀರಿಸು
No comments:
Post a Comment