ನಿನ್ನ ನಗುವಿಗೆ ಇಡೀ ಹೃದಯ ಸಾಲದು
ನಿನ್ನ ಮುನಿಸಿಗೆ ಎದೆ ಬಡಿತ ತಾಳದು
ನಿನ್ನ ಮೌನವೇ ಆಕರ್ಷಕ ಆದರೂ ಮಾತನಾಡು
ನಿನ್ನ ಧ್ಯಾನ ಹಾನಿಕಾರಕ ಇನ್ನೂ ಚೂರು ಹಾನಿ ಮಾಡು
ನಿನ್ನ ತೋಳಿನಲ್ಲಿ ನನ್ನ ಬೇಗ ಬಂಧಿ ಮಾಡು...
ಕಣ್ಣ ಸಂತೆಯಲ್ಲಿ ಕೊಳ್ಳಲೆಂದು ಬಂದೆ ನಾ
ಬುಟ್ಟಿ ತುಂಬ ಭಿನ್ನ ಭಿನ್ನವಾದ ಬಣ್ಣವ
ಸಾಕು ಇನ್ನು ಏಕೆ ರೆಪ್ಪೆಯನ್ನು ಚಾಚುವೆ
ಹೇಗೆ ತಾನೇ ಸುತ್ತಿ ಬರಲಿ ಹೇಳು ಸ್ವರ್ಗವ
ಬೇಡೆಂದರೂ ಮತ್ತೆ ಬೇಕೆಂದರೂ
ನಿನ್ನದೇ ಮಾತು, ನಿನ್ನದೇ ಧಾಟಿ
ಊರಾದರೂ ಊರಾಚೆಯಿದ್ದರೂ
ನೆನೆದ ಕೂಡಲೇ ಮಾಡು ಮನದಿ ಭೇಟಿ....
ಭಾರಿ ಸಭ್ಯನಲ್ಲ ತುಂಟ ಪೋಲಿ ನಿನ್ನವ
ತಿದ್ದಿಕೊಳ್ಳಬೇಕು ಹೇಗೋ ನೀನೇ ಆದರೆ
ದಾರಿ ತಪ್ಪಿ ಹೋಗೋದಕ್ಕೆ ಇಲ್ಲ ಸಂಭವ
ಪ್ರೀತಿ ಎಂಬ ಲಾಗ ಕಟ್ಟು ಬೇಕು ಎಂದರೆ
ಪಾರದರ್ಶಕ ಗಾಜಿನಂಥ ಪ್ರೇಮಕೆ
ಮಾಯಾವಿ ಮಂಜು, ಸಂಚು ಹೂಡಿದಂತೆ
ಜೀವ ಜೀವದ ನಂಟು ಗಾಢವಾದರೆ
ಏನೇ ಆದರೂ ಪ್ರೀತಿ ಸೋಲದಂತೆ...
****ಹಾಡು****
https://soundcloud.com/bharath-m-venkataswamy/meucebfmnl6j