ಕಟ್ಟದ ಕವಿತೆ

ಒಂದು ಕವಿತೆ ನೋಡಿದೆ
ನೋಡಿದೆನಷ್ಟೇ ಓದಲಿಲ್ಲ
ಓದದೆಯೇ ಮನ ಮುಟ್ಟಿತು
ಎದೆಯ ಬಡಿತವ ಎಚ್ಚರಿಸಿತು
ಬದುಕಲೊಂದು ಕಾರಣವ
ಮೌನ ಸಂಭ್ರಮದಲ್ಲಿ ಮುಳುಗಿಸಿತು
ಕವಿತೆಯದ್ದು ಇನ್ನೂ ಕಟ್ಟುವ ಹಂತ
ಆಗಲೇ ಇಷ್ಟವಾಗಿಹೋಗಿತ್ತುಶೀರ್ಷಿಕೆ ಇರದ ಕವಿತೆ
ತೋರಿಕೆ ಬಯಸದ ಕವಿತೆ
ತನ್ನಿಡಿ ಆಕಾರವೇ ಜೀವ ಕೋಶ
ತಾ ಚಲಿಸುತ, ನಾ ವಿಚಲಿತ
ಕಣ್ಣು ತುಂಬಿತು ಕವಿತೆ
ಹೊಮ್ಮಿ ಬಂದುದ ಮರೆತೆ
ಪ್ರೀತಿಯ ಕಾರ್ಯರೂಪ
ಅದುವೇ ನಿಜದ ಕಾವ್ಯ ರೂಪ"ಕವಿತೆ ನಾವು ಕಟ್ಟುವುದಲ್ಲ
ತಾನಾಗೇ ಹುಟ್ಟುವುದು"
ಎಷ್ಟು ನಾಜೂಕಾಗಿ ವಿವರಿಸಿ
ಅಸ್ಮಿತೆಯ ಪ್ರಹರಿಸಿತು ಕವಿತೆ
ಕಟ್ಟುವ ಕೆಲಸ ಕೊಟ್ಟು
ಈಗ ಹುಟ್ಟುವೆ ಇಗೋ ಎಂದು
ಕವಿತೆ ಜನ್ಮ ತಾಳುತ್ತಿದೆ
ಕವಿತೆ ಜನ್ಮ ನೀಡಿತ್ತಿದೆಸದ್ದು ಮಾಡುವ ಕವಿತೆ
ಕದ್ದು ಕೇಳುವ ಕವಿತೆ
ಕವಿತೆ, ಕವಿತೆ, ಕವಿತೆ
ಎಲ್ಲೆಲ್ಲೂ ಕವಿದಂತೆ ಕವಿತೆಮೊದಲುಗಳ ಹಿಂದಿಕ್ಕಿ ಮೊದಲಾಗಿ
ಹಗಲಿರುಳು ಕಾಯಿಸುವ ಕವಿತೆ
ಕಣ್ಣೆದುರಿದ್ದೂ ಕೈಗೆಟುಕದ ತಿನಿಸು
ಹಠದಲ್ಲೇ ತಟವಾಗಿ ಕುಳಿತೆಮುಂಬರುವ ಪ್ರಶ್ನೆಗಳ ಉತ್ತರ
ಮಂಪರಿಗೆ ಜೋಗುಳದ ಇಂಚರ
ತಿಳಿನೀರ ಕೊಳದೊಳಗ ಚಂದಿರ
ವರದಂತೆ ಅವತರಿಸೋ ಮಂದಿರ,
ಕವಿತೆ ಸಾಧ್ಯವಾಗಿಸಬಲ್ಲದು
ಎಲ್ಲವನ್ನೂ
ಕವಿತೆ ಕವಿಯಾಗಿಸಬಲ್ಲದು
ನೋಟವನ್ನೂ!!

                        
                            - ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩