ಹೂ ದಳಗಳ, ಈ ತಳಮಳ
ಸಂಚರಿಸಿದೆ ನನ್ನ ಈ ಉಸಿರಿಗೆ
ಕಾರಣವನು ನೀಡುವ ಭಯ
ಈ ಅನುಭವ ಹೊಸತು ಈ ತನುವಿಗೆ
ಕಾತರದಲಿ ನೀ ಬೆರೆತರೆ ನಾ ಬೆವರುವೆ ಸೋಲುತ...
ಹಾತೊರೆಯುವೆ ನೀ ತೊರೆದರೆ
ಬಾನುಲಿಯಲೂ ಭೋರ್ಗರೆತವೇ
ಜೀಕಾಡುವ ಮನವ ನೀ ದೂಡಲು ಇನ್ನೂ ತಾ
ಸನಿಹಕೆ ಬರುವುದು
ತೂಕಡಿಕೆಯ ಆರಂಭಕೆ
ಕಣ್ಣಾಲಿಯ ಆವರಿಸುವೆ
ಆರೋಹಣ ಮಿಡಿತ ನೀ ಕಾರಣ ಖಚಿತ ನೀರಾಗಲೇ ಕರಗುತ
ಒಂದು ನೂರು ಬಾರಿ ತೆಕ್ಕೆ ಸೇರಿಕೋ...
ಈ ಕೊರೆಯುವ ತಂಗಾಳಿಗೆ
ಬಾ ಕುಲುಮೆಯ ಊದು ಆ ಕೊಳಲಲಿ
ಹಂಬಲಿಸುವೆ ಚಿನ್ನದ ಗರಿ
ಹಾರಲು ಹೊಸ ಆಸೆ ನಿನ್ನೊಲವಲಿ
ಮಾರ್ದನಿಸಲಿ ನಿನ್ನ ಕರೆ ತೋರ್ಬೆರಳಿಗೆ ಸಿಕ್ಕುವೆ..
ನೀ ತೀಡದ ಕಣ್ ಕಪ್ಪಿಗೆ
ಓಲೈಸುವ ಕಣ್ಣೀರಿದೆ
ಗಾಂಧರ್ವದ ಸಲುಗೆ ಬೇಕಂತಲೇ ಕೊಡದೆ ಒದ್ದಾಡುವ ಸುಖವಿದೆ
ಕಾಡ್ಗಿಚ್ಚಿನ ಜ್ವಾಲೆಯಲೂ
ರೋಮಾಂಚಕ ಕಾರಂಜಿ ನೀ
ಓ ಮೇಘವೇ ನನ್ನ ಸಂದೇಶವ ಕೊಂಡು ಕದ್ದೋಡುವೆ ಎಲ್ಲಿಗೆ..
ನನ್ನ ಸಂತೆಯಲ್ಲಿ ನಿನ್ನೆ ಮಾರಿಕೋ...
*ಹಾಡು*
https://soundcloud.com/bharath-m-venkataswamy/2a-1
No comments:
Post a Comment