Thursday, 15 December 2022

ನಾ ಎಂದೋ ಬರೆದ ಕವಿತೆ

 ನಾ ಎಂದೋ ಬರೆದ ಕವಿತೆ 

ನಿನಗಷ್ಟೇ ಹೊಂದುವುದು  
ಅದ ಒಪ್ಪಿಸು ಬೇಗನೆ ಎಂದು  
ತುಟಿಯಂಚಲಿ ನಿಂತಿಹುದು 
ನೀ ಮರೆತು ಹೋಗಿರೋ ಗುರುತು 
ನನ್ನಲ್ಲೇ ಉಳಿದಿಹಿದು
ಅದ ನೆನಪಿಸಲಾರದೆ ನಿನಗೆ
ನಾ ಹೇಗೆ ಉಳಿಯುವುದು

ಕರೆತರುವೆ ಎಲ್ಲ ನಿಮಿಷಗಳ
ಇನ್ನಷ್ಟು ಕಾತರಿಸಿ
ನೀ ನಡೆದು ಬರುವ ದಾರಿಯನು
ನಯವಾಗಿ ಸಿಂಗರಿಸಿ
ಬರೆದಿಡುವೆ ನೋಡು ಖುಷಿಗಳನು
ಬದುಕೆಲ್ಲ ಸಿಂಪಡಿಸಿ
ನೀ ಬೇಡವೆಂದರೆ ದೂರುಳಿವೆ
ಮಾತನ್ನು ಗೌರವಿಸಿ

ಈ ನೋವ ಭರಿಸುವ ಸುಖವು
ನನ್ನಲ್ಲೇ ಉಳಿದಿರಲಿ
ಅದರಲ್ಲಿ ಪಾಲಿನು ಕೊಡೆನು 
ಎಂದಷ್ಟೇ ನೆನಪಿರಲಿ 
ನಾ ಎಂದೋ ಬರೆದ ಕವಿತೆ 
ನಿನಗಷ್ಟೇ ಹೊಂದುವುದು  
ಅದ ಒಪ್ಪಿಸು ಬೇಗನೆ ಎಂದು  
ತುಟಿಯಂಚಲಿ ನಿಂತಿಹುದು 

No comments:

Post a Comment

ಬರುವೆ ನಿನಗಾಗಿ

ಬರುವೆ ನಿನಗಾಗಿ  ಇರುವೆ ಜೊತೆಯಾಗಿ  ಪ್ರತಿ ಗಳಿಗೆ ಬೇಕಿದೆ ನಿನ್ನಾಸರೇ  ನೀನದೇ ಈ ಹಾಡು  ಹಿಡಿದು ಹೊಸ ಜಾಡು  ನಾ ಹಾಡುವೆನು ಕೂಡಿ ಬಾ ನೀ ಆದರೆ  ಬೆರೆತ ಮನದಲ್ಲಿ  ಪುಟಿ...