ಕಣ್ಣೀರಿಗೆ ಕರಗುವ ಮುನ್ನ

ಕಣ್ಣಂಚಲಿ ಒಂದು ಕಣ್ಣೀರ ಕಾರ್ಖಾನೆ
ಸ್ಥಾಪಿಸಿಕೊಂಡವಳೇ ನೀನು?
ಎಷ್ಟೆಂದರೆ ಅಷ್ಟು ಕಣ್ಣೀರ ಸುರಿಸುವೆ
ಅಳುವುದಷ್ಟು ಸುಲಭವೇನು?


ನಕ್ಕಂತೆ ಅಳುವೆ, ಅತ್ತಂತೆ ನಗುವೆ
ಎಲ್ಲಕ್ಕೂ ಕಣ್ಣೀರೇ ಕೊಡುಗೆ
ಹಗುರಾಗಿ ಅವನು ಪರಿಗಣಿಸಬೇಕೇ?
ಗಂಭೀರ ಒಗಟಿದುವೇ ನನಗೆ


ಪಸೆ ಅಳಿಸುವಾಗ, ಕಣ್ಣೊರೆಸುವಾಗ
ನೀನೂ ಅಪ್ಪಟ ಹೆಣ್ಣಂತೆ
ಅಳು ತೀರಿದೊಡನೆ ತಾಳುವ ಮುನಿಸು
ಅಬ್ಬಾ ಥೇಟು ನನ್ನಂತೆ


ಒಂದೊಂದು ಹನಿಗೂ ಲೆಕ್ಕವಿಡುವವಳು
ಜಮಾ ಮಾಡುವೆ ಎಲ್ಲದಕ್ಕೂ
ತಪ್ಪಿಗೆ ತಕ್ಕ ಬೆಲೆ ತೆತ್ತ ನನ್ನ
"ಪ್ರೀತಿಸುವೆ" ಅಂದುಬಿಡು ಸಾಕು


ಎಲ್ಲಿಯದು ಹುಸಿ ಕೋಪ?
ಜಿನುಗುತಿಹ ಕಣ್ಣಲ್ಲಿ
ಶರಣಾದಂತೆ ಕಂಗೊಳಿಸಿದೆ
ನಿಮಿಷದ ಹಿಂದೆ
ನಾ ಬೇಡವಾಗಿದ್ದೆ
ಕಣ್ಣೀಗ ನನ್ನನ್ನೇ ಬೇಡುತ್ತಿದೆ!!


                            - ರತ್ನಸುತ

Comments

  1. ಒಮ್ಮೆ ನೋವು ಒಮ್ಮೆ ನಲಿವು
    ಹುಸಿ ಕೋಪ, ಮುದ್ದುಗೆರೆಯೋ ಮನಸು
    ಹೆಣ್ಣೇ ನಿನಗಾರು ಇಳೆಯಲಿಹರು
    ಸಮಾನ?

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩