ತಮಾಷೆಗೊಂದು ಹಾಡು ಕೇಳಿ ಎಲ್ಲರೂ
ವಿಶೇಷವೇನೂ ಇಲ್ಲ ಇಲ್ಲಿ ಆದರೂ
ನಾಗೋಕೆ ಬೇಕು ನಮಗೆ ಒಂದು ಕಾರಣ
ಬಾಳೊಂದು ತುಂಡು ನಾಟಕ
ಹೇಳಬೇಕು ಅನಿಸಿ ಹೇಳಿಕೊಂಡೆನು
ಬೇಕು ಬೇಡ ಎಲ್ಲ ನಿಮಗೆ ಬಿಟ್ಟೆನು (೨)
ತಲೆ ಸರಿ ಇದೆ ಅನ್ನೋದೇ ಆದರೆ
ಅದೇ ತಗೋ ನಮ್ಮಲ್ಲಿರೋ ಆ ತೊಂದರೆ
ಕೆಡೋ ಥರ ನಾ ಹಾಡುವೆ ಈ ಹಾಡನು
ನಾನಲ್ಲ ಒಳ್ಳೆ ಗಾಯಕ
ಇಲ್ಲದ್ದೆಲ್ಲವನ್ನೂ ಬಲ್ಲೆ ಅಂದವ
ಮೀಸೆ ಮಣ್ಣ ಒದರಿಕೊಂಡ ಮಾನವ (೨)
ಅದೇ ಕತೆ ಹೊಸ ಜೊತೆ ಈ ದಾರಿಗೆ
ಆ ದೂರಕೆ ಕಾಣೋ ಬೆಟ್ಟನೂ ನುಣ್ಣಗೆ
ನಿರಂತರ ಸವಾರಿಗೂ ಇದೆ ಕೊನೆ
ನಾಳೆ ಅನ್ನೋದೇ ಕೌತುಕ....
**ಹಾಡು**
No comments:
Post a Comment