ನೀ ಅಂದುಕೊಂಡಂತೆಲ್ಲ!!!

ನಾ ನಿನ್ನ ಮುಂದಿಟ್ಟದ್ದು 
ತೆರೆದ ನನ್ನ ಮನಸನ್ನ 
ನೀ ಅದನ್ನ ಕನ್ನಡಿ ಅಂತಾದರೂ ತಿಳಿ 

ನಿನಗೆ ಮೊನ್ನೆ ಕೊಟ್ಟದ್ದು 
ನನ್ನ ನೆನಪುಗಳ ಪಟ್ಟಿ 
ನೀ ಅದನ್ನ ಮಗ್ಗಿ ಪುಸ್ತಕ ಅಂತಾದರೂ ಕರಿ 

ನಾ ಹಂಚಿಕೊಂಡದ್ದು 
ಸಣ್ಣ-ಪುಟ್ಟ ಆಸೆಗಳನ್ನ 
ನೀ ಬೇಕಾದ ಹೆಸರಿಟ್ಟು ಹುಚ್ಚಾಟವೆಂದು ಪರಿಗಣಿಸು 

ನಾ ತೆರೆದಿಟ್ಟದ್ದು 
ನೀ ದೂರಾದ ಹಾಗಿನ ಧುಸ್ವಪ್ನಗಳನ್ನ 
ನಿನ್ನಿಷ್ಟಕೆ ಊಹಿಸಿ ಪೊಳ್ಳು ಕಥೆಗಳಿಗೆ ಹೋಲಿಸು 

ನಾ ಕಾಣಿಕೆಯಾಗಿ ನೀಡಿದ್ದು 
ಸ್ವಚ್ಛ ಹಾಳೆಯಂತ ಪ್ರೀತಿಯನ್ನ  
ನೀ ಅಲ್ಲಿ ಚಿತ್ತು ಹೊಡೆದು ಹೇಗೆ ಬೇಕಾದರೂ ಗೀಚು 

ನನ್ನುಸಿರ ತಲುಪಿಸಲು 
ನೀರ ಗುಳ್ಳೆ ಹಾರಿಸಿ ಬಿಡುವೆ 
ನೀನದನು ಚುಚ್ಚಿ ಕೊಲ್ಲು, ಇಲ್ಲವೇ ಬಾಚಿ ಹಿಡಿ 

ನೀ ಸಿಗದಿರೆ 
ನಾ ಕಣ್ಣು ಮುಚ್ಚುವೆ ಅನುವೆ 
ಕಣ್ಣಾಮುಚ್ಚಾಲೆ ಆಟದಲ್ಲಿ ನಾ ಸೋತವನೆಂದು ಭಾವಿಸು 

                                                      --ರತ್ನಸುತ 

Comments

  1. ತನ್ನತನವನ್ನು ಹೇಗಾದರೂ ಬಳಸಿಕೋ ಎನ್ನುವ ಭಾವಾರ್ಪಣೆ ಗೆಲ್ಲುತ್ತದೆ ಗೆಲ್ಲುತ್ತದೆ.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩