ದೇವ-ದಾಸಿ!!

ತಕ್ಷಣವೇ ಬರುವೆ ಅಂದವನು 
ರಕ್ಷಣೆಗೆ ಬಾರದಿರಲು ನೋದುಕೊಂಡೆ 
ಅಕ್ಷದಲಿ ಜಿನುಗಿದ್ದು ಕಂಬನಿ 
ಭಿಕ್ಷೆಗಾಗಿ ಬಿದ್ದ ಧೂಳಂದುಕೊಂಡೆ  

ತೊಡಿಸಿದ್ದು ಆತ ಬಳೆಯಲ್ಲ ಬೇಡಿ 
ತಡವಾಗಿ ಅರಿತೆ ನಾನದನು 
ಮುಡಿಸಿದ್ದು ಮಲ್ಲೆ ದಿಂಡಲ್ಲ ಅದು 
ತಲೆ ತಗ್ಗಿಸಲು ಭಾರದ ಮೂಟೆ 

ಮೂಗುದಾರದ ತಾಳಿ, ತಾಳಿದೆ 
ಕೊರಳಿಂದ ಹೊಮ್ಮುವ ಮಾತ ನಿಯಂತ್ರಿಸಿ 
ಹಣೆಯ ಸಿಂಧೂರ ಬೈತಲೆಗೆ 
ಬಡ್ತಿ ಪಡೆಯಿತು ಶಕ್ತಿ ಕೊಗ್ಗಿಸಿ 

ಎಲ್ಲವೂ ಅವನಿಷ್ಟದಂತೆಯೇ 
ಸರಸ, ವಿರಸ, ಕಾಮ, ಪ್ರಣಯ
ಬೆಚ್ಚಗಾಗಿಸಲು, ನಾ ಹಾಗೇ ಕರಗುವೆನು 
ಚುಚ್ಚಿ ನೋಯಿಸುವ ಘಟ್ಟಿ ಮನಸನ್ನು 

ಆತ ನನಗೆ ಕೊಟ್ಟ ಆಭರಣ 
ನಾ ತೊಟ್ಟು ಸಿಗಾರಗೊಳ್ಳಲು ಸಾಕು 
ನನ್ನಿಂದ ಆತ ದೊಚಿದವುಗಳೆಲ್ಲವೂ 
ಹಿಂಪಡೆಯಲು ಸತ್ತು ಹುಟ್ಟಿ ಬರಬೇಕು 

ತಡಮಾಡಿದವನು ಬೀಳಿಸಿದ ತೆರೆಯ 
ಮತ್ತೊಂದು ನಾಟಕೀಯ ಭಾವ ಜಾಲದಿ 
ತಾನೇ ಮುಡಿಸಿದ್ದ ದಿಂಡನು ಹೊಸಕಿದ 
ಎದೆಯಾಳವ ಸೀಳಿ ಸುಳ್ಳು ತ್ರಿಶೂಲದಿ 

ಸಿಂಧೂರವ ನುಂಗಿತ್ತು ಬೆವರ ಹನಿ 
ಸೀರೆ ಸೆರಗು ಮುದುಡಿತ್ತು ಹೂವಂತೆ 
ಅಕ್ಷದಲಿ ಮತ್ತದೇ ಕಂಬನಿಯ ಅಕ್ಷರ 
ಮೂಕ ರಾಗದ ಹೊಸೆಯುವಿಕೆಗೆ ಸತ್ತಿತ್ತು ..... 

                                       --ರತ್ನಸುತ  

Comments

  1. ಒಂದು ಅನಿಷ್ಟ ಪದ್ಧತಿಯು ಶತಮಾನ ಶತಮಾನಗಳನ್ನೂ ದಾಟಿಕೊಂಡು ಇನ್ನೂ ಇಣುಕುತ್ತಲೇ ಇದೆ. ಕಣ್ಣೀರಿನಲ್ಲೇ ನಿತ್ಯ ಕೈ ತೊಳೆಯುವ ಹೆಣ್ಣು ಮಕ್ಕಳ ಇಂತಹ ಪಾಪ ಕೂಪ ವ್ಯಥೆ ತರಿಸುತ್ತದೆ.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩