ಇವಳೇ ಇವಳು!!

ಇವಳೊಂದು ಮುದ್ದಿನ ಕೂಸು 
ಹೊಗಳುವುದೇ ಸುಮ್ಮನೆ ಲೇಸು 
ಇವಳೊಂದು ಸುಂದರ ಕನಸು 
ಕರಗುವುದು ಕವಿಗಳ ಮನಸು 
ಇವಳಾದಡ ಮಾತಿನ ಹಿಂದೆ 
ಆ ಮೌನದ ಸುಂದರ ಹಾಡು 
ಇವಳಿಡುವ ಹೆಜ್ಜೆಗೂ ಮುನ್ನ 
ಚಿಗುರುವುದು ಮಲ್ಲಿಗೆ ಬೀಡು 

ಇವಳೊಂಥರ ಮಿಂಚಿನ ಸೊಗಸು 
ಅಪರೂಪದ ಇಷ್ಟದ ತಿನಿಸು                             [೧]


ಆ ಮಾಧವ ಹುಡುಕಿದ ರಾಧೆ 
ಆ ಶಾರದೆ ಮೀಟಿದ ವೀಣೆ 
ಆ ಮನ್ಮಥ ಸೋಲಲು ಈಕೆ 
ಕಾರಣಳಾದಳು ತಾನೆ? 

ಆ ದುಂಬಿಯ ಹಂಬಲ ಹೂವು 
ಆ ಚಂದಿರ ಬೇಡುವ ಹೆಣ್ಣು 
ಇಬ್ಬನಿಯ ಕೂಡುವ ಬೆಳಕು 
ಆ ಸುಂದರ ಮಿನುಗುವ ಕಣ್ಣು                           [೨]


ರೇಶಿಮೆಯೋ ಸ್ಪರ್ಶದ ಸಾರ 
ಹುಣ್ಣಿಮೆಯೋ ಭಾವದ ತೀರ 
ಹೂಬನವೇ ಇದ್ದೆಡೆಯೆಲ್ಲ
ಇವಳಂದಕೆ ಹೋಲಿಕೆಯಿಲ್ಲ 


ಮಂದಿರದ ಮಂಗಳ ನಾದ 
ಇವಳಾಡುವ ಇಂಪಿನ ಮಾತು 
ಹಿಂಪಡೆವ ಮಾತಿನ್ನೆಲ್ಲಿ 
ಹೃದಯಾನೇ ಹೋಗಲು ಸೋತು                     [೩]


                        
                              -ರತ್ನಸುತ 

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩