ಸಾವಿಲ್ಲದವು

ಸಾವಿರ ಸುಳ್ಳಿನ ನಡುವೆ
ನಿಜವಾದ ಬದುಕೊಂದು
ತನ್ನ ಸಾಚಾತನವನ್ನ ಸಾರುತ್ತ
ಸುಳ್ಳಿನ ಬಣ್ಣ ಹಚ್ಚುತ್ತಲೇ
ಸುಳ್ಳನ್ನು ಸುಳ್ಳಾಗಿಸುವ ಹಾದಿಯಲಿ
ಬಹಳ ಬೇಗ ಕೊನೆಗಾಣುತ್ತಿದೆಬಿತ್ತಿದ ಬೀಜದ ಸತ್ಯದಲಿ
ಹೆಮ್ಮರವಾಗುವಷ್ಟು ತೂಕ
ಸುಳ್ಳು ತಾನಾಗಲೇ ಕಳಚಿಕೊಂಡ ತೇವ,
ಈಗ ಬೀಜಕ್ಕೆ ಹೆಮ್ಮರವಾಗುವ ಆಸ್ತೆಗಿಂತ
ತೇವಾಂಶ ಗಿಟ್ಟಿಸಿಕೊಳ್ಳುವ ತವಕಮೋಡದ ನಿಧಾನ ಗತಿಯಲ್ಲಿ
ಹುನ್ನಾರವುದುಗಿಹುದೆಂದನಿಸಿ
ಮಣ್ಣು ಸತ್ತಂತೆ ನಟಿಸಿದರೆ
ಅನುಕಂಪಕ್ಕೆ ಜಲಪ್ರಳಯವಾಗಬಹುದು,
ಸುಳ್ಳಾಡುವಲ್ಲಿ ಎಚ್ಚರಿಕೆಯ ನಡೆಯಿಟ್ಟರೆ
ಸತ್ಯದ ಬಾಯಿ ಮುಚ್ಚುವುದು ಖಾಯಂಕನಸಿನ ಹಸಿ ಸತ್ಯ ಇಷ್ಟಪಟ್ಟವರು
ಚಿರನಿದ್ದೆಯ ಮೊರೆ ಹೋಗಿ
ಗುರುತೇ ಇಲ್ಲದಂತಾಗಿರುವುದ
ಕಪಟಿಗಳು ಒತ್ತಿ ಒತ್ತಿ ಹೇಳುವಾಗ
ನಂಬಿಕೆಗಳು ಒಂದೊಂದಾಗಿ
ಸೋತು ಶರಣಾಗುತಿವೆನೆರಳು ಸುಳ್ಳಾಗದಿರಲು
ಮೂಲ ಸುಳ್ಳಾಗದಿರಬೇಕೆಂದು
ಪ್ರತಿಪಾದಿಸುವ ಆಕಾರಗಳದೆಷ್ಟು ಸತ್ಯ?
ಎಲ್ಲವೂ ಸುಳ್ಳೆಂದು ಭಾವಿಸಿದರೆ
ಕೆಲವಾರು ನಿಜದಿಂದ ನಿಟ್ಟುಸಿರು ಬಿಡಬಹುದು
ಅನ್ಯತಾ ಭಾವಿಸಿದೊಡೆ
ನಮ್ಮತನಗಳೇ ನಮ್ಮನ್ನು ದೂರಬಹುದು!!ಸತ್ಯಕ್ಕೆ ಸಾವಿಲ್ಲ
ಅಂತೆಯೇ ಸುಳ್ಳಿಗೂ...

                                     - ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩