ದೂರಿ ದೂರಿ ದೂರಮ್ಮ !!

ದೂರಿ ದೂರಿ ದೂರಮ್ಮ
ಮಲ್ಗೋ ನನ್ನ ಕಂದಮ್ಮ
ಚಂದಾ ಮಾಮಾ ಬರ್ತಾನೆ
ಬೆಣ್ಣೆ ಹೊತ್ತು ತರ್ತಾನೆ
ನಿನ್ನ ಕೆನ್ನೆ ಗಿಂಡ್ತಾನೆ
ಬೆಣ್ಣೆ ಸವ್ರಿ ಹೋಗ್ತಾನೆ

ದೂರಿ ದೂರಿ ದೂರಮ್ಮ
ಕಣ್ಣು ಮುಚ್ಚು ಕಂದಮ್ಮ
ಸರಿ ತಿನ್ಸಿ ಆಗೈತೆ
ಸ್ನಾನ ಮಾಡ್ಸಿ ಆಗೈತೆ
ನಿದ್ದೆ ಚಾಮಿ ಬರ್ತಾನೆ
ಕನ್ಸಲ್ಲಾಟಾಡಿಸ್ತಾನೆ

ದೂರಿ ದೂರಿ ದೂರಮ್ಮ
ಲಾಲಿ ಹಾಡು ಕೇಳಮ್ಮ
ಗುಮ್ಮ ಬಂದ್ರೆ ಬೈತಾನೆ
ಕಣ್ಣು ಕಿತ್ಕೊಂಡ್ಹೋಗ್ತಾನೆ !!
ಈಗ ತಾಚಿ ಮಾಡಿದ್ರೆ
ಚಾಕಿ ಗೀಕಿ ಕೊಡ್ತಾನೆ

ದೂರಿ ದೂರಿ ದೂರಮ್ಮ
ತರ್ಲೆ ಆಟ ಬೇಡಮ್ಮ
ಅಮ್ಮ ಅಡ್ಗೆ ಮಾಡ್ತೌಳೆ
ಈಗ ಮಾಮಾನೇ ಅಮ್ಮ
ಒಂದು ಮುತ್ತು ಕೊಡ್ತೀನಿ
ಆಮೇಲ್ಗೊಂಬೆ ತರ್ತೀನಿ

ದೂರಿ ದೂರಿ ದೂರಮ್ಮ
ಮಲ್ಗೋ ನಿನ್ನ ದಮ್ಮಯ್ಯ
ನಂಗೇ ನಿದ್ದೆ ಬರ್ಸ್ಬಿಟ್ಟೆ
ಬಟ್ಟೆ ಎಲ್ಲಾ ನೆನ್ಸ್ಬಿಟ್ಟೆ
ಈಗ ಮಲ್ಗ್ತೀನಂತೀಯಾ ?
ಇಲ್ಲ ಸತಾಯಿಸ್ತೀಯಾ ?

                   -- ರತ್ನಸುತ

Comments

  1. ಮೊದಲ ಬಹುಮಾನ ಚಿತ್ರದಲ್ಲಿರುವ ಪಾಪುವಿಗೆ.
    ಇಡೀ ಗೀತೆಯನ್ನು ಶಿಶುಗೀತೆಯಾಗಿ ಹಾಡಿಕೊಳ್ಳುವ ಪ್ರಯತ್ನ ಪಟ್ಟೆ.
    ವಿಭಿನ್ನ ಪ್ರಯತ್ನ.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩