ಅವನಿಗೆ ಅಂದು ಎಂದಿಗಿಂತಲೂ ಹೆಚ್ಚು ಕೆಲಸ, ಹಾಗಾಗಿ ಮನೆ ತಲುಪುವಲ್ಲಿ ತಡವಾಗಿತ್ತು. ಮಧ್ಯ ರಾತ್ರಿಗೂ ಮೀರಿದ ಸಮಯ, ಅವನ ಸ್ಕೂಟರ್ ಮೇಲೆ ಸಾಗಿತ್ತು ಸವಾರಿ. ಅವನ ಮನೆಗೂ ಅವನಿದ್ದ ಸ್ಥಳಕ್ಕೂ ನಡುವೆ ದಾರಿಯಿಡೀ ವಿಸ್ತರಿಸಿದ್ದ ಸ್ಮಶಾಣವಿತ್ತು. ಅವನಿಗೆ ಆ ಹೊತ್ತಿನಲ್ಲಿ ಮನೆಗೆ ಬಂದು-ಹೋಗಿ ಅಭ್ಯಾಸವಾಗಿದ್ದರಿಂದ ಯಾವುದೇ ಭಯ ಆತಂಕ ಇರಲಿಲ್ಲ.
ಆದರೆ ಗೊಂದಲವೆಲ್ಲಾ ಒಂದೇ, ಅವನಿಗೆ ಪರಿಚಿತರು ಅವನನ್ನ ಗುರುತಿಸುವಲ್ಲಿ ಸೊಲುತ್ತಿದ್ದರು, ಆವ ಮಾತನಾಡಿಸಿದರೂ ಲೆಕ್ಕಿಸದೆ ಹೊರಟು ಬಿಟ್ಟರು, "ಆ ಹೊತ್ತಿನಲ್ಲಿ ಪರಿಚಿತ-ಅಪರಿಚಿತ ಧ್ವನಿಯ ಗ್ರಹಿಸುವ ಸ್ಥಿತಿಯಲ್ಲಿ ಯಾರು ಇರುತ್ತಾರೆ" ಅಂದುಕೊಂಡು ಅವ ಮುನ್ನಡೆದ, ಆದರೆ ವಿಚಿತ್ರವೆಂಬಂತೆ ಕೆಲವರು ಅವನನ್ನ ತಡೆದು ಮಾತನಾಡಿಸಿದರು, ಅದೂ ಒಂದು ಗೊಂದಲಮಯವಾಯ ವಿಷಯವೇ!!
ಇನ್ನೇನು ಕಣ್ಣೋಟ ದೂರದಲ್ಲಿ ಅವನ ಮನೆ. ಒಂದು ಎಡ ತುರುವು ತಗೆದುಕೊಂಡು ನೇರ ಹೋದರೆ ಮೂರನೇ ಮನೆ. ಆದರೆ ಆವತ್ತು ಅವನಿಗೆ ಆಶ್ಚರ್ಯ, ಮನೆ ಬಾಗಿಲು ತೆರೆದೇ ಇತ್ತು, ಬೀಗ ಮುರಿದಂತೆ ಕಂಡಿರಲಿಲ್ಲಾ. ಕಳ್ಳರ ಕೆಲಸವಾಗಿದ್ದರೆ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡುತ್ತಿದ್ದರು, "ಇದ್ಯಾವುದೋ ಪರಿಚಿತರ ಕೆಲಸವೇ" ಅಂದುಕೊಂಡು ಒಳಗೆ ಹೋಗಲು ಮುಂದಾದ, ಹಣೆಯಲ್ಲಿ ಬೆವರು, ಚೂರು ಕೈಕಾಲು ನಡುಕ ಬಂದಿತ್ತು, ಹೊಸಲು ದಾಟಿ ನಾಲ್ಕು ಹೆಜ್ಜೆ ಮುಂದಿಡುತ್ತಿದ್ದಂತೆ ಯಾರೋ ಅವನ ಹಿಂದೆ ನಿಂತಂತೆ ಭಾಸವಾಯ್ತು, ಹಿಂದೆ ತಿರುಗಿ ನೋಡುವಷ್ಟರಲ್ಲಿ ಅವನ ತಲೆಗೆ ಜೋರಾದ ಪೆಟ್ಟು, ಅಷ್ಟೇ; ಇದ್ದಲ್ಲೇ ಅವ ಕುಸಿದು ಬಿದ್ದ.
ಮಂಜು ಮಂಜಾದ ಆವರಣ, ಆಗಷ್ಟೇ ನಿದ್ದೆಯಿಂದ ಎದ್ದವನಂತೆ ಅವ ಮೈ ಮುರಿಯುತ್ತಾ ಕಣ್ಣುಜ್ಜಿ ನೋಟ ಸ್ಪಷ್ಟಪಡಿಸಿಕೊಂಡ, ಆಗಲೇ ಅವನಿಗೆ ಅನಿಸತೊಡಗಿದ್ದು ಅವನು ಬಂದಿಯಾಗಿದ್ದಾನೆಂದು. ಅದು ಗಾಜಿನ ಮನೆ, ಸುತ್ತಲು ಧೂಪದ ತೆಳು ಪರದೆ, ಅದರಾಚೆ ಒಂದಷ್ಟು ಮಂದಿ ನಿಂತಿದ್ದರು, ಅವರ್ಯಾರು-ಎತ್ತ ಎಂಬ ಸುಳಿವು ದೊರೆತಿರಲಿಲ್ಲಾ.
ಅಷ್ಟರಲ್ಲೇ ಯಾರೋ ಒಬ್ಬ ಅರೆ ಬೆತ್ತಲೆ ಮನುಷ್ಯ ಮೈಯೆಲ್ಲಾ ವಿಭೂತಿ ಬಳಿದುಕೊಂಡು, ಕೊರಳಲ್ಲಿ ಮಣಿ, ರುಧ್ರಾಕ್ಷಿ ಮಾಲೆ ಧರಿಸಿ, ಹಣೆ ಕಾಣದಷ್ಟು ಗಂಧ ಬಳಿದುಕೊಂಡು, ಕೆಂಪು ಕಣ್ಣುಗಳಿಂದ ನನ್ನನ್ನು ಧಿಟ್ಟಿಸಿದ. "ನೀನು ಯಾರು??" ಎಂದು ನನ್ನ ಕೆಲಿದ. ನನಗೆ ಆತಂಕದೊಂದಿಗೆ ಚೂರು ನಗು ಬಂದರೂ, ನಗದೆ ಏನೊಂದು ಮಾತಾಡದೆ ಸುಮ್ಮನಿದ್ದೆ. ಕೈಯ್ಯ ತುಂಬಾ ವಿಭೂತಿ ಹಿಡಿದು ನನ್ನ ಮೇಲೆ ಸುರಿದು ಮತ್ತೆ ಗಾಜಿನ ಬಾಗಿಲು ಮುಚ್ಚಿದ. ಎರಡು ಮೂರು ಬಾರಿ ಸೀನಿದ ಮೇಲೆ ಸ್ವಲ್ಪ ಚೇತರಿಸಿಕೊಂಡು "ನನ್ನ ಹೆಸರು ಸದಾಶಿವ, ಇದು ನನ್ನ ಮನೆ. ನೀನು ಯಾರು?" ಅಂದ.ಸದಾಶಿವನ ಮಾತಿಗೆ ಮಂತ್ರವಾದಿ ಉತ್ತರಿಸದೆ, ಯಾರಿಗೋ ಸದಾಶಿವನ ಪರಿಚಯ ಮಾಡಿಕೊಟ್ಟದ್ದು ಕೇಳಿಸಿತು. ಆ ಅಪರಿಚಿತ ಮನುಷ್ಯ ಹತ್ತಿರವಾದಂತೆ ಅವರು ಸದಾಶಿವನ ಚಿಕ್ಕಪ್ಪ ಅಂತ ಸದಾಶಿವನಿಗೆ ಖಾತರಿ ಆಯ್ತು.
ಸದಾಶಿವನಿಗೂ ಅವನ ಚಿಕ್ಕಪ್ಪನಿಗೂ ಆಗಾಗ ಆಸ್ತಿ ವಿಷಯದಲ್ಲಿ ಜಗಳಗಳಾಗುತ್ತಿತ್ತು, ಆಸ್ತಿ ಅಂದರೆ ಆ ಮನೆ ಒಂದೇ ಅಲ್ಲ, ಊರಲ್ಲಿನ ತೋಟ, ವೊಲ, ಗದ್ದೆ ವಗೇರೆ ವಗೇರೆ. ಅದೇ ಕಾರಣಕ್ಕೆ ಸದಾಶಿವನನ್ನ ಅವನ ಚಿಕ್ಕಪ್ಪ ಕೊಲೆ ಮಾಡಿಸಿದ್ದ. ಪಾಪ ತಾನು ಸತ್ತ ಸಂಗತಿ ಖುದ್ದು ಸದಾಶಿವನಿಗೂ ಗೊತ್ತಿರಲಿಲ್ಲ, ಕೊಲೆ ಮಾಡಿ ಸಂಸ್ಕರಿಸದೆ ಪಿಷಾಚಿ ಮಾಡಿ ಬಿಟ್ಟಿದ್ದ ಅವನ ಚಿಕ್ಕಪ್ಪ. ಸದಾಶಿವನಿಗೆ ಅಳು, ಕೋಪ, ಜುಗುಪ್ಸೆ ಎಲ್ಲವು ಒಟ್ಟಿಗೆ ಬಂತು, ತನ್ನಲ್ಲಿದ್ದ ಪೈಷಾಚಿಕ ಶಕ್ತಿಯನ್ನೆಲ್ಲಾ ಬಳಸಿ ಗಾಜಿನ ಮನೆ ಮುರಿದು ಏಕಾಏಕಿ ತನ್ನ ಚಿಕ್ಕಪ್ಪನ ಮೇಲೆ ಹಾರಿ ಕೊಲೆ ಮಾಡಲೆತ್ನಿಸಿದ. ಚಿಕ್ಕಮ್ಮ, ಅವರ ಮಕ್ಕಳು, ಮಂತ್ರವಾದಿ ಎಲ್ಲರೂ ಅವನನ್ನ ಹಿಡಿದು ಹಿಂದಕ್ಕೆ ಜಗ್ಗಿದರು.
ಅರೆ!! ಅವನು ಪಿಷಾಚಿ ಆದರು ಎಲ್ಲರ ಸ್ಪರ್ಶ ಅವನ ಮೇಲೆ ಬಿತ್ತಲ್ಲಾ, ಅವನಿಗೆ ಆಶ್ಚರ್ಯ!! ಕಣ್ಣು ಮಿಟುಕಿಸಿ ನೋಡಿದರೆ ಎಲ್ಲವೂ ಇದ್ದಂತೇ ಇತ್ತು ಮತ್ತೊಮ್ಮೆ ಮಿಟುಕಿಸಿದರೆ ಎಲ್ಲವೂ ಬದಲು, ಆವ ಬದುಕಿದ್ದ, ಎತಾ ಪ್ರಕಾರ ಅವನ ಚಿಕ್ಕಪ್ಪನ ಮೇಲೆ ಜಗಳಕ್ಕಿಳಿದಿದ್ದ.
ಭೂಕಂಪವಾದ ಅನುಭವ ಒಮ್ಮೆಲೇ, ಅಲ್ಲೋಲ ಕಲ್ಲೋಲವಾದಂತಿದೆ ಜಗತ್ತು. ಗಾಜಿನ ಗೋಡೆಗಳಿಗೆ ಅಪ್ಪಳಿಸುತ್ತ ಎಚ್ಚರವಾಯಿತಿ ಸದಾಶಿವನಿಗೆ, ಹೌದು ಅವನಿನ್ನೂ ಧಿಗ್ಬಂದನದಲ್ಲಿದ್ದ, ಸತ್ತಿದ್ದ !! ಅವನ ಆತ್ಮವ ಧಹಿಸಲು ಅವನನ್ನ ಯಾವುದೋ ನಿಘೂಢ ಸ್ಥಳಕ್ಕೆ ಕರೆತರಲಾಗಿತ್ತು . ಅವನಿಗೆ ಆ ಸ್ಥಳ ಗೊತ್ತಿತ್ತು, ಅದು ಅವನದ್ದೇ ನೀಲಗಿರಿ ತೋಪು. ನೋಡು ನೋಡುತ್ತಿದಂತೆ ಅವನು ನಿಶಕ್ತನಾಗುತ್ತಿದ್ದ, ಮಂತ್ರವಾದಿಯ ಮಾತುಗಳಿಗೆ ಆವ ತಲೆಯಾಡಿಸುತ್ತಿದ್ದ. ಅವನಿಗೆ ಒದಗಿದ್ದು ಧರಿದ್ರ ಸಾವು. ಅತ್ತ ಅಂತ್ಯ ಸಂಸ್ಕಾರವೂ ಆಗಿರಲಿಲ್ಲ, ಇತ್ತ ಆತ್ಮಕ್ಕೂ ಶಾಂತಿ ದೊರೆಯಲಿಲ್ಲ. ಮಂತ್ರವಾದಿಯ ಮರ್ಮ ಜ್ವಾಲೆಗೆ ಸಿಲುಕಿದ ಆತ್ಮ ಚೀರಿತ್ತು "ಅಯ್ಯೋ, ಅಮ್ಮ" "ಅಯ್ಯೋ, ಅಮ್ಮ", ಆಗಲೇ ಸಮುದ್ರದ ಧಟ್ಟ ಅಲೆ ಅವನ ಮೇಲೆ ಅಪ್ಪಳಿಸಿತ್ತು. ಸದಾಶಿವನ ಅಮ್ಮ ಅವನನ್ನ ಎಚ್ಚರಿಸಲು ಪ್ರಯತ್ನಿಸಿ ಕೊನೆಗೆ ಮುಖದ ಮೇಲೆ ಲೋಟ ನೀರೆರಚಿದಳು.
ಸದಾಶಿವ ಈಗ ನಿಜಕ್ಕೂ ಬದುಕಿದ್ದ, ಅದ ಖಾತರಿ ಪಡಿಸಿಕೊಳ್ಳಲು ತನ್ನ ಅಮ್ಮನ ಬಾಳಿ ಚಿವುಟಿಸಿಕೊಂಡ.
ಆವ ರಿಯಲ್ ಎಸ್ಟೇಟ್ ಉದ್ಯಮಿ, ಊರಿನ ಜನಕ್ಕೆಲ್ಲಾ ನಾಮ ಹಾಕಿದ್ದಲದೇ, ತನ್ನ ಚಿಕ್ಕಪ್ಪನ ಆಸ್ತಿಯನ್ನೂ ಸುಳ್ಳು ಧಾಕಲಾತಿಗಳಿಂದ ತನ್ನ ಹೆಸರಿಗೆ ಮಾಡಿಕೊಂಡಿದ್ದ.
ಅಂದು ಚಿಕ್ಕಪ್ಪನ ಜೊತೆ ಕೊನೆಯ ಸುತ್ತಿನ ಮಾತುಕತೆಯಿತ್ತು. ಅಮ್ಮನಿಗೆ ಹೇಳಿ ಚಿಕ್ಕಪ್ಪನಿಗೆ ಕರೆ ಮಾಡಿಸಿದ.
ಚಿಕ್ಕಪ್ಪ : "ಹಲೋ, ಯಾರ್ ಮಾತಾಡೋದು"
ಸದಾಶಿವ : "ನಾನು ಚಿಕ್ಕಪ್ಪ ಸದಾಶಿವ"
ಚಿಕ್ಕಪ್ಪ : "ನೀನು ಕೆಳಿದಷ್ಟು ಹಣ ತರ್ತೀನಪ್ಪ, ಇನ್ನೇನು ಅರ್ಧ ಗಂಟೇಲಿ ಅಲ್ಲಿರ್ತೀನಿ"
ಸದಾಶಿವ : "ಏನು ಬೇಡ ಬನ್ನಿ ಚಿಕ್ಕಪ್ಪ, ನಾನು ಪಾಪಿ ಇಷ್ಟು ದಿನ ನಿಮ್ಮನ್ನ ಗೋಳ್ಹೊಯ್ಕೊಂಡೆ. ರಾತ್ರಿ ಅಪ್ಪ ಕನ್ಸಲ್ಲಿ ಬಂದು ಬುದ್ದಿ ಹೇಳಿದ್ರು, ನಿಮ್ಮ ಆಸ್ತಿ ನಿಮ್ಗೆ ಸೇರಿದ್ರೇನೇ ಅವರ ಆತ್ಮಕ್ಕೆ ಶಾಂತಿ ಅಂತೆ"
ಇಷ್ಟು ಹೇಳಿ ಕಾಲ್ ಕಟ್ ಮಾಡಿದ.
ಅಮ್ಮ ಮಗ ಒಳ್ಳೆಯವನಾದ ಅಂತ ದೇವರಿಗೆ ತುಪ್ಪದ ದೀಪ ಹಚ್ಚಿ ಖುಷಿ ಪಟ್ಳು, ಚಿಕ್ಕಪ್ಪ ಆಸ್ತಿ ಧಕ್ಕಿಸ್ಕೊಂದು ಖುಶಿಯಾದ. ಸದಾಶಿವ ರಿಯಲ್ ಎಸ್ಟೇಟ್ ಕೆಲ್ಸ ಬಿಟ್ಟು ವ್ಯವಸಾಯಕ್ಕಿಳಿದ, ಕನಸಲ್ಲಿ ಕಂಡ ದೃಶ್ಯಗಳೆಲ್ಲಾ ಅವನಲ್ಲೇ ಗುಟ್ಟಾಗಿ ಉಳಿಯಿತು.
--ರತ್ನಸುತ