Friday 12 July 2013

ಹಸಿ ಹನಿಗಳು !!

ತುಟಿಗಳು ಪರಿಚಯಿಸಿಕೊಳ್ಳುವ ವೇಳೆ
ಪರಿಚಿತ ಕಣ್ಣುಗಳಿಗೇನು ಕೆಲಸ ?
ಮುಚ್ಚಿಕೊಂಡವು "ಮುಂದುವರಿಸಿ" ಎನುತ !!

****
ಒಬ್ಬ ಎಳೆದನು ಮಗ್ಗ
ಸೀರೆಯಾಗಿಸಲು
ಒಬ್ಬ ಎಳೆದನು ಸೀರೆ
ಮೊಗ್ಗನರಳಿಸಲು!!

****
ಬಿಂದು ಕಿರಣದ ಮಿಲನ
ಕಾಮನ ಬಿಲ್ಲಿನ ಜನನ
ಮಳೆಯ ತುಂತುರು ಗಾನ
ಇಳೆಯ ನರ್ತಿಸುವದನ
ಬಿರುಕಿಗುನ್ಮತ್ತ ಪಾನ
ಮಣ್ಣು ಹಸಿದ ಶ್ವಾನ
ಆಗ ಹಸಿವಿನ ಶಮನ
ಇದುವೇ ಹಸಿರಿನ ಕಥನ

****
ಆಷಾಡಕೆ ತವರಿಗ್ಹೊರಟ ಮಡದಿಯ ತಡೆದು
ಸೆರಗಂಚನು ಸುರುಳಿ, ಗಂಡ ಬೇಡಿದ
"ಒಂದು ಮುತ್ತು ಕೊಡೇ!!"
ಸುಕ್ಕು ಹಿಡಿದ ಸೆರಗ ಬಿಡಿಸಿಕೊಂಡುಳು
ನಾಚಿ ಮುತ್ತಿಟ್ಟು ಹೇಳಿದಳು
"ಇದೇ ಕಡೆ !!"

****
ರೆಪ್ಪೆ ಬಡಿತಕೆ ನೋಡು
ದೀಪ ಬಳುಕುತ್ತಿದೆ
ಒಂದು
ಜೋರಾಗಿ ಬಡಿದು
ಬೆಳಕನ್ನು ನಂದಿಸು
ಇಲ್ಲವೇ
ನನ್ನಂತೆ ಕಣ್ಮುಚ್ಚಿ
ಕತ್ತಲೆಯ ಸ್ವಾಗತಿಸು

               --ರತ್ನಸುತ 

1 comment:

  1. ಮುತ್ತು ಕೊಡೆ ಎಂದರೆ ಕೆಲವು ಶ್ರೀಮತಿಯರು ಮುಟ್ಟಿ ನೋಡಿಕೊಳ್ಳುವಂತೆ ಕೊಡುತ್ತಾರಂತೆ ರೀ!

    "All time best" ಹನಿ ಎಂದರೆ ರೆಪ್ಪೆಗಳಿಗೆ ಉಪದೇಶದ ಹನಿ. ವಾರೇವ್ಹಾ...

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...