ಕಥೆ ಹೇಳುತ ಮುಂದೆ....

"ಇದಿಷ್ಟು ನನ್ನ ಕಥೆ"
ಎಂದು ತುಟಿ ಮುಚ್ಚಿದಳು;
ನನ್ನ ಕಥೆ ಮೊದಲಾಯ್ತು,
ಇನ್ನು ನಿಲ್ಲುವ ಸೂಚನೆಗಳಿಲ್ಲ!!

ಹುಟ್ಟಿನ ಗುಟ್ಟಿಗೆ ನಾಚಿದಳು,
ಪೋಲಿ ಅಂದಳು ನನ್ನ;
ಮೆಲ್ಲಗೆ ಅಧರವ ಜಗ್ಗಿದಳು
ತರುವಾಯ ಆಲಿಸುವ ಮುನ್ನ!!

ಬಾಹ್ಯ ಪರಿಚಯದ ಜೊತೆಗೆ
ಆಂತರ್ಯವನ್ನೂ ಅರಿತೆ
ಅಂತೆಯೇ ಆಕೆಯೂ;
ಇದೊಂದು ನೂತನ ವಿನಿಮಯ!!

ಕರಗುತ್ತಲೇ ಸೆರೆಯಾದಳು
ನನ್ನ ಬೊಗಸೆಯಾಕಾರವಾಗಿ;
ಬೆರಳ ಸಂದಿಯಲಿ ಮೆಲ್ಲಗೆ
ನುಸುಳಿ ಜಾರಿಕೊಂಡಳು ಹಾಗೆ!!

ಯಾವ ಗುಪ್ತ ಬೇಟಿಯೂ
ಇಷ್ಟು ಮುಕ್ತವಾಗಿರದೆ
ಕಾಲಹರಣವೇ ಆಗಿತ್ತು;
ಇಂದೋ ಬರಪೂರ ಬಳಕೆ!!

ಕಿಟಕಿಯಾಚೆ ಬೆಳದಿಂಗಳ ಪೋಳು,
ಒಳಗೆ ಕಣ್ಮಿಚಿನದ್ದೂ!!
ಮುಲುಗಾಟದ ನಡುವೆ ಹಾಡುವ ಸರದಿ
ಹೂವಿನದ್ದು!!

                                      -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩