Monday 19 May 2014

ಹಬ್ಬದ ಕೊನೆಯಲ್ಲಿ

ಉರಿದದ್ದು ಸಾಕು
ಆರಿಸಿ ಒಲೆಯ
ಸುಟ್ಟದ್ದು ಸಾಕು
ತಿನ್ನುವ ಸಮಯ

ನಾಳೆಗೆ ಇಟ್ಟರೆ
ಕೆಡುಕಿನ ಭೀತಿ
ಕೊಟ್ಟೆವು ಇಂದಿಗೆ
ಸಾಕಷ್ಟು ಪ್ರೀತಿ

ಬೆಂದದ್ದು ಸಾಕು
ತಿಂದದ್ದು ಸಾಕು
ಮುಗಿದರೆದ್ದೇಳಿ
ಮುಗಿದು ಎದ್ದೇಳಿ

ಮುಂದಿದೆ ಬದುಕು
ಒಂದೊಂದು ದಳಕೂ 
ಬಾಯ್ಮುಚ್ಚಿದವರಿಗೂ
ಕೂಗಾಡಿದವರಿಗೂ

ನಿತ್ಯವೂ ಹಬ್ಬದಲಿ
ತೊಳೆಯದಿರಿ ಕೈಯ್ಯ
ಸಾಲ ತೀರಿಸಲೊಂದು
ಕಣ್ಣಿರಲಿ ಸದ್ಯ !!

ಹೊಸ ನೀರು ಬಂತು
ಹೊಸ ತೇರು ಬಂತು
ಇನ್ನು ತಿಳಿವುದು ಬಾಕಿ
ಒಳಿತೆಷ್ಟು ಕಂತು?!!

              -- ರತ್ನಸುತ

1 comment:

  1. ದಿನವೂ ವಿಶೇಷವೇ ಆಗಿಹೋದರೆ, ಮನಸ್ಸಿಗೆ ಪುಳಕವೇ ನಾಸ್ತಿ, ತುಂಬ ಚೆನ್ನಾಗಿ ವಿವರಿಸಿದ್ದೀರ.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...