ಆಗಷ್ಟೇ ಅವರ ಮದುವೆಯಾಗಿತ್ತು, ಹೊಸ ಅಪಾರ್ಟ್ಮೆಂಟ್ ಒಳಗೆ ನೂತನ ವಧು ವರರ ಪ್ರವೇಶ.
ಎದುರಿಗೆ ಕಂಡ ಹಾಲಿನ ಗೋಡೆ ಮೇಲೆ ಹೃದಯಾಕಾರದ ಬೆಂಡಿನ ಮೇಲೆ ಬೆಂಡಿನಕ್ಷರಗಳಲ್ಲಿ ಬರೆದಿತ್ತು
"ರಾಹುಲ್ ವೆಡ್ಸ್ ತಾರಾ"
ರಾಹುಲ್ ನ ಫ್ಯಾಮಿಲಿ ಹೈ ಪ್ರೊಫೈಲ್ ಆಗಿತ್ತು, ಇನ್ನು ತಾರಾ ಮಧ್ಯಮ ವರ್ಗದ ಗುಮಾಸ್ತನ ಮಗಳು. ಹಾಗಾಗಿ ಅವಳು ಸಹಜವಾಗಿಯೇ ಮುಜುಗರದಿಂದ ನಡೆದುಕೊಳ್ಳುತ್ತಿದ್ದಳು.
ಇನ್ನು ಆ ಎರಡು ಕೋಣೆಯ ಅಪಾರ್ಟ್ಮೆಂಟಿನಲ್ಲಿ ರಾಹುಲ್ ಗೆ ತಾರಾ, ತಾರಾಳಿಗೆ ರಾಹುಲ್ ಅಷ್ಟೇ. ದಿನಕ್ಕೊಮ್ಮೆ ಬಂದು ಹೋಗುವ ಮನೆ ಕೆಲಸದವಳು.
ರಾಹುಲ್ ಪ್ರತಿಷ್ಟಿತ ಸಾಫ್ಟ್ವೇರ್ ಕಂಪನಿ ಉಧ್ಯಮಿ. ತಾರಾ ಬಿ.ಎಸ್ಸಿ ಪದವೀಧರೆ, ಮನೆಯಲ್ಲೇ ಟ್ಯೂಶನ್ ನಡೆಸುತ್ತಿದ್ದಳು ಮದುವೆಗೆ ಮುಂಚೆ, ಈಗ ಹೌಸ್ ವೈಫ್ ಅಷ್ಟೇ.
ಮದುವೆ ಆಗಿ ತಿಂಗಳು ಕಳೆದರೂ ರಾಹುಲ್, ತಾರಾ ಬಹಳ ಅಸಹಜವಾಗಿ ನಡೆದುಕೊಳ್ಳುತಿದ್ದಿದ್ದು ಕೆಲಸದವಳ ಗಮನಕ್ಕೆ ಬಂದಿದ್ದೂ ಉಂಟು. ಇಷ್ಟಾದರೂ ತಾರಾ ತನ್ನಲ್ಲೇ ಏನೋ ಹೊಂದಾಣಿಕೆಯ ಸಮಸ್ಯೆ ಇರಬೇಕೆಂದು ಸುಮ್ಮನಿದ್ದಳು.
ರಾಹುಲ್ ಒಮ್ಮೆ ಜಂಟಿ ಖಾತೆ ತೆರೆಯೋಕೆ ಅಂತ ತಾರಾಳನ್ನ ಬ್ಯಾಂಕಿಗೆ ಕರೆತಂದಿದ್ದ. ಬೇಕಾದಲ್ಲಿ ಸಹಿ ಹಾಕಿಸಿಕೊಂಡು ತಾರಾಳನ್ನ ಮನೆಗೆ ಕಳುಹಿಸಿ ಏ.ಟಿ.ಎಮ್ ಕಾರ್ಡ್ ಪಿನ್ ರಿಸೆಟ್ ಮಾಡಲು ಏ.ಟಿ.ಎಮ್ ಮಷೀನ್ ಬಳಿ ಹೋದ. ಹೊಸ ಪಿನ್ ಏನು ಇಡೋದು ಅಂತ ಯೋಚಿಸ್ತಾ ಇದ್ದಂತೆ ಒಂದು ಫ್ಲಾಶ್ ಬ್ಯಾಕ್ ಓಪನ್ ಆಯ್ತು:
ಫ್ಲಾಶ್ ಬ್ಯಾಕ್ ಸ್ಟೋರಿ
---------------------
ಅದು ರಾಹುಲ್ ನ ಕಾಲೇಜ್ ದಿನಗಳು. ರಾಹುಲ್ ಗೆ ಅವನ ಕ್ಲಾಸ್ ಮೇಟ್ ಶ್ವೇತ ಮೇಲೆ ಪ್ರೀತಿ ಹುಟ್ಟಿ ಎರಡು ವರ್ಷ ಆಗಿತ್ತು, ಆದರೆ ಯಾವತ್ತೂ ಅವ ಮನ ಬಿಚ್ಚಿ ಹೇಳಿಕೊಂಡಿರಲಿಲ್ಲ.
ಆವತ್ತು ಶ್ವೇತಾಳ ಜನ್ಮ ದಿನ "01/06/2008", ಇಂಜಿನಿಯರಿಂಗ್ ಕೊನೆ ಸೆಮಿಸ್ಟರ್ ಅದಾಗಿತ್ತು. ರಾಹುಲ್ ಗೆ ತನ್ನ ಪ್ರೀತಿ ಎಕ್ಸ್ಪ್ರೆಸ್ ಮಾಡೋಕೆ ಒಳ್ಳೆ ಅವಕಾಶ ಆವತ್ತು. ಎಂದಿನಂತೆ ಟಿಪ್ ಟಾಪ್ ಆಗಿ ರೆಡಿ ಆಗಿ ಕಾಲೇಜಿನ ಪಾರ್ಕ್ಅಲ್ಲಿ ಕಾದಿದ್ದ .
ಶ್ವೇತ ಬಂದ್ಲು
ರಾಹುಲ್ : ""ಹ್ಯಾಪಿ ಬರ್ತ್ಡೇ!!", ಈ ಬೊಕೆ ನಿನಗಾಗಿ"
ಶ್ವೇತ : "ಥ್ಯಾಂಕ್ಸ್ ರಾಹುಲ್, ಅದೇನದು ಇನ್ನೊಂದು ಕೈಯ್ಯಲ್ಲಿ ಏನೋ ಬಚ್ಚಿಟ್ಟಿದ್ದೀಯ? ಎಲ್ಲಿ ತೋರ್ಸು"
ರಾಹುಲ್ : "ಇದು ನಿನಗಾಗಿಯೆ. "ಐ ಲವ್ ಯು" ಶ್ವೇತ"
ಶ್ವೇತಾಳಿಗೆ ಎಲ್ಲಿಲ್ಲದ ಕೋಪ ನೆತ್ತಿಗೆ ಏರಿ ರಾಹುಲ್ ಕಪಾಳಕ್ಕೆ ಚಟಾರ್ ಅಂತ ಬಾರಿಸಿದ್ಲು.
ಅಲ್ಲಿಗೆ ರಾಹುಲ್ ಫ್ಲಾಶ್ ಬ್ಯಾಕ್ ಗೆ ತೆರೆ!!
ರಿಯಲ್ ಸ್ಟೋರಿ
----------------
ಏ.ಟಿ.ಎಮ್ ಕಾರ್ಡ್ ಪಿನ್ ನಿರ್ಧರಿಸಿದ ರಾಹುಲ್ "0106"ಗೆ ರೀಸೆಟ್ ಮಾಡಿ ಮನೆಗೆ ಹೊರಟ.
ಕಾರ್ಡ್ ತಾರಾಳಿಗೆ ಕೊಟ್ಟು, ಅವಶ್ಯಕತೆ ಬಿದ್ದಾಗ ಬಳಸಿಕೊಳ್ಳುವಂತೆ ಹೇಳಿದ.
ಈ ಪಿನ್ ಹೇಗೆ ನೆನಪಿಡೋದು ಅಂತ ತಾರಾ ಕೇಳಿದ್ದಕ್ಕೆ "ಫಸ್ಟ್ ಜೂನ್" ಅಂತ ರೂಮಿನೊಳಗೆ ಹೋಗುತ್ತಲೇ ಹೇಳಿದ.
**************************************
ಅಂದು "01/06/2013", ರಾಹುಲ್ ಗೆ ಶ್ವೇತಾಳ ಜನ್ಮ ದಿನ ನೆನಪಾಗಿ ಎಲ್ಲೋ ಡೈರಿಯಲ್ಲಿ ಬರೆದಿಟ್ಟಿದ್ದ ಅವಳ ಅಮ್ಮನ ಮನೆಯ ಲ್ಯಾಂಡ್ ಲೈನ್ ನಂಬರಿಗೆ ಫೋನ್ ಮಾಡಿ ಅವಳ ಮೊಬೈಲ್ ನಂಬರ್ ತಗೊಂಡಿದ್ದ.
ಆವತ್ತು ಅವನ ಮುಖದಲ್ಲಿ ಕಂಡ ಖುಷಿ ತಾರಾಳಿಗೆ ಮದುವೆಯಾದಾಗಿಂದ ಕಂಡಿರಲಿಲ್ಲ.
ಎರಡು ಮೂರು ಬಾರಿ ಟ್ರೈ ಮಾಡಿದಮೇಲೂ ಫೋನ್ ನಿರತವಾಗಿದ್ದರಿಂದ ಅವನ ಒದ್ದಾಟವ ಗಮನಿಸಿದ ತಾರಾಳಿಗೆ ಅದು ಯಾರಿಗೆ ಫೋನ್ ಮಾಡ್ತಿದ್ದಾನೆ ಅಂತ ತಿಳಿಯೋ ಕುತೂಹಲ.
ಅಷ್ಟರಲ್ಲೇ ರಾಹುಲ್ ನ ಫೋನ್ ರಿಂಗಾಯ್ತು, ಚೂರು ನಡುಗುತ್ತ, ನಸು ನಗುತ್ತಾ ರಿಸೀವ್ ಮಾಡಿ "ಹ್ಯಾಪಿ ಬರ್ತ್ಡೇ ಶ್ವೇತ" ಅಂತ ಹೇಳುತ್ತಲೇ ರೂಂ ಒಳಗೆ ಹೋಗಿ ಚಿಲಕಹಾಕಿಕೊಂಡ. ಇದನ್ನೆಲ್ಲಾ ತಾರಾ ಮೂಖ ಪ್ರೆಕ್ಷಕಳಾಗಿ ನಿಂತು ನೋಡಿದಳು.
ರಾಹುಲ್ ಸುಮಾರು ಅರ್ಧ ಗಂಟೆ ಶ್ವೇತಾಳ ಜೊತೆ ಮಾತಾಡಿ ಮುಗಿಸಿದ್ದ.
ಶ್ವೇತಾಳಿಗೆ ಮದುವೆ ಆಗಿ ಒಂದು ಮಗು ಕೂಡ ಇತ್ತು. ರಾಹುಲ್ ಬಗ್ಗೆ ಆಕೆಗೆ ಇದ್ದ ನಿಲುವು ಈಗಲೂ ಅದೇ, ಒಬ್ಬ ಒಳ್ಳೆ ಗೆಳೆಯನೆಂದು.
ರಾಹುಲ್ ಶ್ವೇತಾಳನ್ನ ಎಷ್ಟು ಹಚ್ಚಿಕೊಂಡಿದ್ದನೆಂದರೆ ಒಮ್ಮೆ ವಿಷ ಕೂಡ ಸೇವಿಸಿದ್ದ. ಆದರೆ ಶ್ವೇತ ಮಾತ್ರ ತನ್ನ ದೃಢ ನಿರ್ಧಾರವನ್ನ ಬದಲಿಸಿರಲಿಲ್ಲ. ರಾಹುಲ್ ಗೆ ಅವಳನ್ನ ಮರೆಯೋದು ಕಷ್ಟ ಸಾಧ್ಯವಾಗಿದ್ದೂ ಅವಳನ್ನ ಅವಾಯ್ಡ್ ಮಾಡ ತೊಡಗಿದ. ಅವಳ ಮದುವೆಗೂ ಹೋಗಿ ಶುಭಾಷಯ ಹೆಲಿದ್ದ.
ಇತ್ತ ತಾರಾ ಒಗಟಿನಲ್ಲಿ ಚಿಂತಿಸುತ್ತಿರುವಂತೆ ಆವತ್ತಿನ ದಿನ ಜೂನ್ ಒಂದು ಎಂಬುದು ಅರಿವಾಗಿ, ಏ.ಟಿ.ಎಮ್ ಪಿನ್ ನಂಬರ್ಗೂ, ಶ್ವೇತಾಳಿಗೂ, ರಾಹುಲ್ ಜೊತೆ ಇರುವ ಸಂಭಂದದ ಬಗೆಗಿನ ಸುಳಿವು ಸಿಕ್ಕಂತಾಯಿತು.
ಅಂದಿನಿಂದ ರಾಹುಲ್ ತುಂಬಾ ಖುಷಿಯಾಗಿದ್ದ, ತನ್ನ ಎಲ್ಲಾ ಹಳೆ ನೆನಪುಗಳನ್ನ ಮರೆತು ಹೊಸ ಜೀವನ ನಡೆಸಬೇಕೆಂದು ನಿರ್ಧರಿಸಿದ್ದ, ಹಾಗಾಗಿ ಶ್ವೇತಾಳ ನೆನಪುಗಳನ್ನೆಲ್ಲಾ ಸುಟ್ಟುಹಾಕಿಬಿಡುವ ಸಲುವೇ ಆಕೆಗೆ ಬರೆದು ನೀಡಲಾಗದ ಪ್ರೇಮ ಪತ್ರಗಳು, ಗಿಫ್ಟ್ ಗಳನ್ನೆಲ್ಲಾ ಸುಟ್ಟು ಹಾಕಿದ.
ಇನ್ನೇನಿದ್ದರೂ ಇಷ್ಟು ದಿನ ಕಾಯಿಸಿದ ತಾರಾಳನ್ನ ತನ್ನ ತೆಕ್ಕೆಗೆ ಸೇರಿಸಿಕೊಳ್ಳಬೇಕಿತ್ತಷ್ಟೇ.
ಅಂದು ರಾಹುಲ್ ಗೆ ಆಫೀಸ್ ಇಂದ ಫೋನ್ ಬಂತು. ಮಾರನೇ ದಿನವೇ ಅವ ಕೆಲಸದ ಮೇರೆಗೆ ಸಿಂಗಾಪುರ್ ಗೆ ಒಂದು ವಾರಕ್ಕೆ ಹೋಗುವಂತೆ ಸಂದೇಶ ರವಾನಿಸಿದರು ಅವನ ಮ್ಯಾನೇಜರ್.
ಈ ವಿಷಯ ತಾರಾಳಿಗೆ ತಿಳಿಸಿ ತನ್ನ ಲಗೇಜ್ ಪ್ಯಾಕ್ ಮಾಡುವಂತೆ ಕೊರಿದ. ಆ ಒಂದು ರಾತ್ರಿ ತನ್ನ ಪ್ರೀತಿಯನ್ನ ತಾರಾಳಿಗೆ ವ್ಯಕ್ತ ಪಡಿಸಬೇಕೆಂದು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.
ಸರಿ, ಒಂದೇ ವಾರ ತಾನೇ, ವಾಪಸ್ಸು ಬದಲಾದ ರಾಹುಲ್ ಆಗಿ ಬಂದಮೇಲೆ ತಾರಾಳನ್ನ ಚನ್ನಾಗಿ ನೋಡಿಕೊಳ್ಳಬೆಕಂದುಕೊಂಡ.
ಇನ್ನೊಂದೆಡೆ ತಾರಾಳ ಸುತ್ತ ಸಂಶಯಗಳ ಹುತ್ತ ನಿರ್ಮಿತವಾಗಿತ್ತು.
ರಾಹುಲ್ ಹೊರಟ ನಂತರ ಅವನ ತಂದೆ ತಾಯಿ ತಾರಾಳನ್ನ ತಮ್ಮೊಂದಿಗೆ ಬರುವಂತೆ ಹೇಳಿದರು, ಅಂತೆಯೇ ತಾರಾ ಅವರ ಜೊತೆ ಹೊರಟಳು.
ತಾರಾ ಅವಳ ಅತ್ತೆ ಮಾವನ ಮನೆಯಲ್ಲಿ ರಾಹುಲ್ ಇದ್ದ ರೂಮಿನಲ್ಲಿ ನೆಲೆಸಿದ್ಲು.
ಹೀಗೇ ರೂಂ ಸುತ್ತ ಸುತ್ತಾಡುತ್ತಿರುವಂತೆ ಅವಳಿಗೆ ರಾಹುಲ್ ನ ಕಾಲೇಜ್ ಟೈಮಿನ ಒಂದು ಸೂಟ್ ಕೇಸ್ ಸಿಕ್ತು. ಮೆಲ್ಲಗೆ ಕೆಳಗಿಳಿಸಿ ಅದನ್ನ ತೆರೆದಾಗ, ರಾಹುಲ್ ನ ಬಾಲ್ಯದ ಫೋಟೋ ಆಲ್ಬಮ್, ಮಾರ್ಕ್ಸ್ ಕಾರ್ಡ್ಸ್, ಪ್ರಾಜೆಕ್ಟ್ ಫೈಲ್ಸ್ ಜೊತೆಗೆ ಯಾವುದೋ ಅಂಚೆ ಕವರ್ ಸಿಕ್ತು.
ಕುತೂಹಲದಿಂದ ತಾರಾ ಆ ಕವರಲ್ಲಿದ್ದ ಲೆಟರ್ ಓದಲು ಆರಂಬಿಸಿದಳು.
ಅದು ಅದೇ ಪತ್ರ, ಮೋದ ಮೊದಲು ರಾಹುಲ್ ಶ್ವೇತಾಳಿಗೆ ಕೊಡಲು ಮುಂದಾದ ಪತ್ರ. ಆ ಪತ್ರ ಓದಿಡಿದ ತಾರಾಳ ಮನಸು ಛಿದ್ರ-ಛಿದ್ರವಾಯಿತು.
ಮಾರನೇ ದಿನ ಬೆಳಿಗ್ಗೆ ರಾಹುಲ್ ತಾರಾಳ ಮೊಬೈಲ್ ಗೆ ಕರೆ ಮಾಡಿದ, ಆದರೆ ಫೋನ್ ಸ್ವಿಚ್ ಆಫ್ ಆಗಿತ್ತು, ಆದ ಕಾರಣ ತನ್ನ ಅಮ್ಮನಿಗೆ ಫೋನ್ ಮಾಡಿ ತಾರಾ ಎಲ್ಲೆಂದು ಕೇಳಿದ.
"ಸ್ನಾನಕ್ಕೆ ಹೋಗಿದ್ದಾಳೆ ಕಣೋ" ಅಂದಳು ಅಮ್ಮ.
ಹೊಸ ಮನೆ; ತಾರಾ ಜೊತೆ ಅಡ್ಜೆಸ್ಟ್ ಮಾಡಿಕೊಳ್ಳುವಂತೆ, ಇನ್ನೊಂದೇ ವಾರದಲ್ಲಿ ಅವಳಿಗಾಗಿ ಉಡುಗೊರೆಗಳೊಂದಿಗೆ ಬರುವುದಾಗಿ ಹೇಳಲು ಹೇಳಿದ. ಜೊತೆಗೆ ತನ್ನ ಪರ್ಸನಲ್ ಲ್ಯಾಪ್ಟಾಪ್ ಅಲ್ಲಿ ಒಂದೆರಲು ಡಾಕ್ಯುಮೆಂಟ್ಸ್ ಬೇಕಿರುವುದಾಗಿಯೂ, ತಾರಾ ಸ್ನಾನ ಮುಗಿಸಿದ ನಂತರ ತನಗೆ ಫೋನ್ ಮಾಡುವಂತೆಯೂ ಹೇಳಿದ.
ಅಂತೆಯೇ ಅವನಮ್ಮ ತಾರಾಳಿಗೆ ಸುದ್ದಿ ಮುಟ್ಟಿಸಿದಳು. ತಾರಾಳ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ತಾರಾ ತನ್ನತ್ತೆಯ ಮೊಬೈಲೊಂದಿಗೆ ಅಪಾರ್ಟ್ಮೆಂಟ್ ಕಡೆ ಹೊರಟು.
ಲ್ಯಾಪ್ಟಾಪ್ ಆನ್ ಮಾಡಿದ್ಲು, ಆದರೆ ಲ್ಯಾಪ್ಟಾಪ್ ಅನ್ಲಾಕ್ ಮಾಡಲು ಪಾಸ್ವರ್ಡ್ ಬೇಕಿದ್ದ ಕಾರಣ ತಾರಾ ರಾಹುಲ್ ಗೆ ಫೋನ್ ಮಾಡಿದ್ಲು
ತಾರಾ: ಹಲೋ ರಾಹುಲ್
ರಾಹುಲ್: "ಹೇ ತಾರಾ ಆಗ್ಲೇ ಫೋನ್ ಮಾಡಿದ್ದೆ ಸ್ವಿಚ್ ಆಫ್ ಬಂತು, ಲ್ಯಾಪ್ ಟಾಪ್ ಅಲ್ಲಿ ಡಿ ಡ್ರೈವ್ ಅಲ್ಲಿ "Office Important" ಅನ್ನೋ ಫೋಲ್ಡರಲ್ಲಿರೋ ಡಾಕ್ಯುಮೆಂಟ್ಸ್ ನನಗೆ ಮೇಲ್ ಮಾಡು ಪ್ಲೀಸ್"
ತಾರಾ: "ಲ್ಯಾಪ್ ಟಾಪ್ ಲಾಕ್ ಆಗಿದೆ, ಪಾಸ್ವರ್ಡ್ ಏನು?"
ರಾಹುಲ್: "ಶ್ವೆ....ತಡಿ, ನಾನು ಮೆಸೇಜ್ ಮಾಡಿತೀನಿ"
ಕಾಲ್ ಕಟ್ ಆಯ್ತು
ಎರಡೇ ನಿಮಿಷದಲ್ಲಿ ಮೆಸೇಜ್ ಬಂತು.
ಪಾಸ್ವರ್ಡ್ "Shweta143" ಆಗಿತ್ತು.
ತಾರಾಳಿಗೆ ಆ ಒಂದು ಕ್ಷಣ ಉಸಿರು ಕಟ್ಟಿದಂತಾಯಿತು.
ಸ್ವಲ್ಪ ಹೊತ್ತಿಗೆ ಎಲ್ಲಾ ಡಾಕ್ಯುಮೆಂಟ್ಸ್ ರಾಹುಲ್ ಗೆತಲುಪಿತು. ರಾಹುಲ್ ಕ್ರುತಜ್ಞತನಾಗಿ ಮೀಟಿಂಗ್ ಮುಗಿದ ನಂತರ ತಾರಾಳಿಗೆ ಫೋನ್ ಮಾಡೋಣವೆಂದು ಅಂದುಕೊಂಡ. ಸಧ್ಯ ಅವಳ ಮನಸಿನಲ್ಲಿ ಏನೆಲ್ಲಾ ಪ್ರಶ್ನೆಗಳು ಎದ್ದಿರಬಹುದೆಂದು ಅವ ಊಹಿಸಿದ್ದ.
ಎರಡು ತಾಸಿನ ನಂತರ
-----------------------
ರಾಹುಲ್ ಶಾಪಿಂಗ್ ಮಾಡುತಿದ್ದ, ತಾರಾಳಿಗೆ ಏನು ಬೇಕೆಂದು ಕೇಳಲು ಫೋನ್ ಮಾಡಿದ ಆದರೆ ತಾರಾ ಫೋನ್ ರಿಸೀವ್ ಮಾಡಲಿಲ್ಲ. ಗಾಬರಿಯಾದ ಅವನು ತನ್ನ ತಂದೆಗೆ ಫೋನ್ ಮಾಡಿದ. ತಂದೆಯೂ ರಿಸೀವ್ ಮಾಡಲಿಲ್ಲ.
ಸುಮಾರು ಹತ್ತು ನಿಮಿಷದ ಬಳಿಕ ರಾಹುಲ್ ನ ಅಪ್ಪ ರಾಹುಲ್ ಗೆ ಫೋನ್ ಮಾಡಿ "ತಾರಾ ಮನೆಯಲ್ಲಿ ಜಾರಿ ಬಿದ್ದು ತಲೆಗೆ, ಕಾಲಿಗೆ ಪೆಟ್ಟಾಗಿದೆ" ಎಂದು ಹೇಳಿದ್ರು. ಆವ ಆಗಿಂದಾಗೆ ಇಂಡಿಯಾ ಗೆ ವಾಪಸ್ ಆಗಲು ಮುಂದಿನ ಫ್ಲೈಟ್ ಬುಕ್ ಮಾಡಿ ಇಂಡಿಯಾಗೆ ಹೊರಟು ಬಂದ.
ಏರ್ಪೋರ್ಟಿಂದ ಸೀದಾ ಆಸ್ಪತ್ರೆಗೆ ಹೋದ ಅವನು ತಾರಾ ಇದ್ದ ವರ್ಡ್ ಗೆ ಒಂದೇ ಉಸಿರಲ್ಲಿ ಓಡಿದ. ಅಲ್ಲಿ ತಾರಾ ಮಂಚದ ಮೇಲೆ ಮಲಗಿದ್ಲು.
ಮನೆಯ ಹೊಸಿಲಿಗೆ ಎಡವಿ ತೆಲೆಗೆ ಪೆಟ್ಟಾಗಿ ಪ್ರಜ್ಞೆ ತಪ್ಪಿದ್ದಳೆಂದು, ಇನ್ನು ಪ್ರಜ್ಞೆ ಬಂದಿಲ್ಲವೆಂದು ಅಪ್ಪ ಹೇಳಿದ್ರು.
ಅಷ್ಟರಲ್ಲೇ ಸಿಸ್ಟರ್ ಬಂದು "ಪೇಷಂಟ್ ಗೆ ಪ್ರಜ್ಞೆ ಬಂತು" ಅಂದೊಡನೆ ರಾಹುಲ್ ತನ್ನ ತಂದೆ ತಾಯಿಯ ತಡೆದು ಒಳಗೆ ಓಡಿದ. ಅವಳ ಹತ್ರ ಹೋಗಿ ಕೈ ಹಿಡಿದು, ತಾನು ಬದಲಾಗಿರುವನೆಂದು, ಇನ್ನು ಮುಂದೆ ಅವಳನ್ನ ಚನ್ನಾಗಿ ನೋಡಿಕೊಳ್ಳುವನೆಂದು ಹೇಳಿದ, ಆದರೆ ತಾರಾ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.
ಏನೋ ನೆನಪಾದವನಂತೆ ಅವ ತನ್ನ ಮನೆಗೆ ಹೋಗಿ ತನ್ನ ಲ್ಯಾಪ್ಟಾಪಿನೊಂದಿಗೆ ವಾಪಸ್ ಬಂದ.
ತಾನು ಬದಲಾಗಿರುವುದನ್ನು ನಿರೂಪಿಸಲು ಅವನ ಬಳಿ ಇದ್ದದ್ದು ಒಂದೇ ದಾರಿ.
ಅದು, ಸಿಂಗಪೂರಿಗೆ ಹೋಗುವ ಹಿಂದಿನ ದಿನ ರಾತ್ರಿ ತನ್ನ ಭಾವನೆಗಳನ್ನೆಲ್ಲಾ ಟೈಪ್ ಮಾಡಿ, ಆ ಫೈಲ್ಗೆ "To Tara" ಅಂತ ಹೆಸರಿಟ್ಟಿದ್ದ, ಅವ ತಾರಾಳಿಗೆ ಹೇಳಬೇಕಿದ್ದ ಮಾತುಗಳೆಲ್ಲಾ ಸಂಕ್ಷಿಪ್ತವಾಗಿ ಅಲ್ಲಿ ಬರೆದ ನಂತರವಷ್ಟೇ ಅವನಿಗೆ ನಿದ್ದೆ ಬಂದಿದ್ದು.
ಲ್ಯಾಪ್ಟಾಪ್ ಆನ್ ಮಾಡಿದ.
ಅನ್ಲಾಕ್ ಮಾಡಲು ಟೈಪ್ ಮಾಡಿದ "Shweta143".................... "Password invalid"
ಮತ್ತೊಮ್ಮೆ ಟೈಪ್ ಮಾಡಿದ "Shweta143" ಮತ್ತೆ "Password invalid"
ಆಗ ತಾರಾ ಹೇಳಿದ್ಲು "Tara143" ಗೊಂದಲದಲ್ಲೇ ಟೈಪ್ ಮಾಡಿದ ರಾಹುಲ್............................. "Password successful"!!
ರಾಹುಲ್ ತನ್ನ ಇಂಪಾರ್ಟೆಂಟ್ ಫೈಲ್ಸ್ ಜೊತೆ ಆ "To Tara" ಫೈಲನ್ನೂ ಮರೆತಂತೆ ಇಟ್ಟಿದ್ದ, ಇನ್ನೇನು ಸಾಯಲೇ ಬೇಕು ಅಂತ ನಿರ್ಧಾರ ಮಾಡಿದ್ದ ತಾರಾಳಿಗೆ ಅದ್ಯಾಕೋ ಒಮ್ಮೆ ಅದನ್ನ ಓದಬೇಕನಿಸಿ ಓದಿದ್ಲು.
ಓದಿ ಮುಗಿಸಿದ ಆಕೆ ಮೊದಲು ಮಾಡಿದ ಕೆಲಸ ಇದ್ದ ಹಳೇ ಪಾಸ್ವರ್ಡ್ ಬದಲಿಗೆ "Tara143" ಅಂತ ಇಟ್ಟಿದ್ದು.
ಖುಷಿಯಿಂದ ಕುಣಿಯುತ್ತಿದ್ದ ವೇಳೆ ಕಾಲು ಎಡವಿ ಬಿದ್ದು ಪೆಟ್ಟಾಗಿ ಪ್ರಜ್ಞೆ ಕಳೆದುಕೊಂದಿದ್ಲು.
ಮುಂದೆ ನಿಮಗೆ ಗೊತ್ತೇಯಿದೆ :))))))))
--ರತ್ನಸುತ