ದತ್ತು ಪುತ್ರಿ!!ಅಪ್ಪಿ ತಪ್ಪಿ ನನ್ನ ಕೈಗೆ 
ಸಿಕ್ಕಿತೊಂದು ಲೇಖನಿ 
ಬರೆಯಲಿಕ್ಕೆ ಮಡಿಲು ಸಿಗದೇ 
ಗೋಡೆ ಆಯ್ತು ಹಾಳೆ 
ಗೇಚಿಕೊಂಡು ಸಾಗಿದೆ 
ಹೊಸತೊಂದು ಲಿಪಿಯ ಹಿಡಿದು 
ನನ್ನಿಷ್ಟ-ಕಷ್ಟಗಳನು  
ಅಪೂರ್ಣ ಬರೆದು ಮುಗಿಸಿ 

ಮಾಲೀಕ ಇದ ಗಮನಿಸಿ
ಹಲ್ಲು ಮಸೆದುಕೊಂಡು 
ಥಳಿಸಿದ ಎಳೆಗೂಸು ನನ್ನ 
ಲೇಖನಿಯ ಕಸಿದು
ಅರ್ಥವಾಗಲಿಲ್ಲ ಅಲ್ಲಿ  
ಭಾವನೆಗಳು ಅವನಿಗೆ 
ಸುಣ್ಣ ಬಳಿಸಿ, ಬಿಟ್ಟ ಅಳಿಸಿ 
ನೋವು ನನ್ನ ಮನಸಿಗೆ 

ಮುಂದೊಮ್ಮೆ ಬೆರಳ ಹಿಡಿದು 
ಅಕ್ಕಿ ಎದೆಯ ಮೇಲೆ ಬರೆಸೆ
ಕಂಬ ಮರೆಗೆ ನಿಂತು 
ಅಂದುಕೊಂಡೆ ನಾನು ಹೀಗೆ 
"ಅಂದು ನಾ ಬರೆದದ್ದೇ 
ತಪ್ಪಾಗಿ ಕಂಡವರಿಗೆ 
ಈಗೇಕೆ, ಹೀಗೇಕೆ 
ಒತ್ತಾಯದ ಬಗೆ?"

ಅಸಲಿಗೆ "ನಾನು" 
ದತ್ತು ಪಡೆದ ಹೆಣ್ಣು 
ಅಕ್ಕಿಯ ಕೆದಕಿದ "ಆತ"
ಹರಕೆ ಹೊತ್ತು ಪಡೆದ ಗಂಡು 
ನಾನೀಗ ವಂಶದ 
ಕೊಂಡಿ ಕಳಚಿಕೊಂಡ ಆಳು 
"ಆತ" ವಂಶ ಬೆಳಗೋ ದೀಪ 
ಪಿತ್ರಾರ್ಜಿತ "ವಾರಸ್ದಾರ" 

"ನಾನು" ಸಣ್ಣ ಬರಹಗಾತಿ 
"ಆತ" ಖ್ಯಾತ ಉಧ್ಯಮಿ 
ಮುದಿ ಒಡೆಯನ ಕೊನೆಗಾಲಕೆ 
ಬಿಟ್ಟುಕೊಟ್ಟ ವ್ಯವಹಾರ 
"ಆತ" ಜರಿದ ಜನಕನ 
"ಬೆಪ್ಪ" ಮೂರ್ಖನೆಂದು 
ತಪ್ಪಿತಸ್ತ "ಅಪ್ಪ" ಅತ್ತ 
ನನ್ನ ಕಣ್ಣೀರ ಕಥೆಯೊಂದ ಓದಿಕೊಂಡು ...... 

                                     --ರತ್ನಸುತ 

Comments

  1. ಭಾವನೆಗಳಿಲ್ಲದ - ಭಾಷೆ ಬಾರದ - ಯಾಂತ್ರಿಕ ತಲೆಯ ಮಾಲೀಕ. ಧಿಕ್ಕಾರವಿರಲಿ.

    ಆದರೂ ದತ್ತು ಪುತ್ರಿಯನ್ನು ಬದುಕೆಲ್ಲ ಮಗಳಂತೆಯೇ ಕನಿಕರಿಸಿರಿ.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩