ಕಾರ್ಪೊರೇಟ್ (ಅ)ಸಂವಾದ

ಮ್ಯಾನೇಜರ್ ಟು ಎಂಪ್ಲೋಯೀ (ಕೆಲಸಕ್ಕೆ ಸೇರಿದ ಹೊಸತರಲ್ಲಿ) 
-----------------------------
ನೋಡು ಮಗು ಇದು ನಿನಗೆ Goldenಉ ಅವಕಾಶ 
ನಿನ್ನ ಶುರು ಇಲ್ಲಿದೆ, ಗುರಿ ಮೇಲೆ ಆಕಾಶ 
ಅಂಬೆಗಾಲಿನ ನಡೆ ಓಟವಾಗಲಿ ಮುಂದೆ 
ಈ Feildಅಲಿ ನಾನು, ನೀನು ಎಲ್ಲರೂ ಒಂದೇ 

ಮೂರು ತಿಂಗಳವರೆಗೆ Trainingಉ ನಿನಗೆ 
Projectಉ ಸಿಗುವುದು ಅದೆಲ್ಲದರ ಕೊನೆಗೆ 
Dedication ಅನ್ನುವುದೊಂದಿದ್ದರೆ ಸಾಲದು 
ಚುರುಕಾಗಿ ಇರಬೇಕು ಈ Gameನೊಳಗೆ 

ನಾನು Managerಉ ನೀ ನನ್ನ ಕೈ ಕೆಳಗೆ 
ಕೆಲೆಸ ಹೇಳಿದ Timeಗೆ ಮುಗಿಸು ಆಗ 
Increment ಜೊತೆಗೆ Promotionಉ ಉಂಟು 
ಕೆಲಸ ಒಂದನು ಬಿಟ್ಟು ಬಿಡು ಬೇರೆ ನಂಟು 

Recognition ಅನ್ನುವುದು ಸುಲಭದ ಮಾತಲ್ಲ
ನನ್ನ ಮಾತಿಗೆ "No" ಅಂದವರು ಉಳಿದಿಲ್ಲ 
ವರ್ಷ ಕಳೆಯುವ ಹೊತ್ತಿಗೆ ಕೊಡುವೆ Onsiteಉ 
ಕೆಲಸ ಹೆಚ್ಚಾದರೂ ಮಾಡದಿರು Complaintಉ 

ಎಂಪ್ಲೋಯೀ ಟು ಮ್ಯಾನೇಜರ್ (3 ವರ್ಷದ ಬಳಿಕ) 
-----------------------------
ಎಲ್ಲಿ ಉಳಿಯಿತು ಗುರುವೇ ನಿನ್ನ Promiseಉ 
ಮೂರು ವರ್ಷವೇ ಕಳೆಯಿತು ಪಡೆದು Successಉ 
ನೀನು Bikeಅನು ಮಾರಿ ಹೊಸತು Carಅನು ಕೊಂಡೆ 
ನಾನಂತೂ City Busಇನಲೇ ಆಸೆಗಳ ಕೊಂದೆ 

ಮನೆಯವರ ಮುಖ ನೋಡಿ ತಿಂಗಳುಗಳೇ ಕಳೆದು 
ಈಗೀಗ ನನ್ನ ಗುರುತು ಹಿಡಿದರೆ ಹೆಚ್ಚು 
Shiftಅಲ್ಲಿ ಕೆಲಸ ಮಾಡುವ ನನಗೆ ಈ ನಡುವೆ 
ಬೆಳಕು ಕಂಡರೆ ಸಾಕು ಹಿಡಿವುದು ಹುಚ್ಚು 

ನನ್ನ Seatಇಗೂ ನನ್ನ ಮೇಲಿದೆ ಸಿಟ್ಟು 
"ಬಿಟ್ಟು ತೊಲಗು ನನ್ನ" ಅನ್ನುವಷ್ಟು ಕೋಪ 
ನೀ ನೆಟ್ಟ ಕನಸುಗಳು Expire ಆಗಿವೆ 
ಈಗಲಾದರೂ ತೋರು ಚೂರು ಅನುಕಂಪ 

Change over ಬೇಕನಿಸಿ ಪರದಾಡಿದರೂ ಸಹಿತ 
ನಾ ಕಲಿತ Technologyಗಿಲ್ಲ ಈಗ ಬೆಲೆ  
ಬುದ್ಧಿವಂತ ಅನಿಸಿ ದಡ್ಡನಾಗಿ ಹೋದೆ 
ಈಗ ಕಾಡುವ ಪ್ರಶ್ನೆ "ಹೆಂಗಪ್ಪಾ ಮುಂದೆ?!!"

                                           --ರತ್ನಸುತ 

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩