Thursday, 19 December 2013

ಊದುಗೊಳವೆ ಹಾಡು

ಇರುಳ ಹಾಸಿಗೆ ಮಡಿಲು
ತುಂಟ ಗೊಲ್ಲನ ಕೊಳಲು
ಹೊಮ್ಮಿ ಬರಲು ನಾದ
ತೆಕ್ಕೆಯಾದಳು ರಾಧ

ಮಾತು ಮುಗಿಯುವ ವೇಳೆ
ನಾಚಿ ಹೊರಳಿದ ಹಾಳೆ
ಪದವೊಂದು ತಾ ಉಕ್ಕಿ 
ಶೃಂಗಾರವೇ ಬಾಕಿ

ಕಚ್ಚಿದೊಡೆ ನಾಲಿಗೆಯು
ಹುಚ್ಚೆದ್ದು ಪುಳಕದಲಿ
ಮೂಡಿತು ಸೊಲ್ಲು
ಹಚ್ಚಾದ ಸಾಲು

ಕಣ್ಗಪ್ಪು ಕರಗಿ
ಕೆಂಪೆದ್ದ ಕೆನ್ನೆ
ಹಸಿದ ಬಾಯಿಗೆ ಸಿಕ್ಕ 
ಹಸಿ ಕಡಿದ ಬೆಣ್ಣೆ

ಕೊಳಲು ಮೂಖಿ ತಾನು
ಬಿಸಿಯುಸಿರು ಸೋಕಿ
ಮೆಲ್ಲ ನುಡಿಯಿತು ವೀಣೆ
ತಂಗಾಳಿ ತಾಕಿ

ಮತ್ತೆ ಊದುವ ಕೊಳವೆ
ಹಾಳೆ ಹೊರಳುವ ಸಲುವೆ
ಕವಿದ ಕತ್ತಲ ಕಾವ್ಯ
ಜೊನ್ನ ಶಿಶುವೆ !!

                  -- ರತ್ನಸುತ

1 comment:

  1. ಜೊನ್ನ ಶಿಶು ಅತ್ಯುತ್ತಮ ಪ್ರಯೋಗ. ಈ ರಚನೆಯಲ್ಲಿ, ವೇಣುಗೋಪಾಲನ ಪ್ರೇಮೋತ್ಕರ್ಷ ಅತ್ಯಂತ ನವಿರಾಗಿ ನಿರೂಪಿತವಾಗಿದೆ.

    ReplyDelete

ಬರುವೆ ನಿನಗಾಗಿ

ಬರುವೆ ನಿನಗಾಗಿ  ಇರುವೆ ಜೊತೆಯಾಗಿ  ಪ್ರತಿ ಗಳಿಗೆ ಬೇಕಿದೆ ನಿನ್ನಾಸರೇ  ನೀನದೇ ಈ ಹಾಡು  ಹಿಡಿದು ಹೊಸ ಜಾಡು  ನಾ ಹಾಡುವೆನು ಕೂಡಿ ಬಾ ನೀ ಆದರೆ  ಬೆರೆತ ಮನದಲ್ಲಿ  ಪುಟಿ...