Wednesday, 15 January 2014

ಆಕೆ !!

ಆಕೆ ಜೊತೆಗಿದ್ದರೆ 
ಎಳ್ಳು, ಬೆಲ್ಲ 
ಖುಷಿಗಳೋ ಆಕೆಯ 
ಕಣ್ಣಿನಗಲ 

ಆಕೆ ಬಾಹುಬಂಧಿಸಿದರೆ 
ಯೋಗ ಯುಕ್ತಿ   
ಚುಂಬನಕ್ಕೆ ಸೋತರಲ್ಲಿ 
ಸ್ವರ್ಗ ಪ್ರಾಪ್ತಿ 

ಆಕೆ ಸಾಕೆ ಬೇಡ 
ಬೇರೆ ಹಂಗಿನೆರಳು
ಪಡುವಣಕ್ಕೆ ಹಿಡಿದ ಲಾಂದ್ರ 
ಅವಳ ಮುಗುಳು 

ಆಕೆ ಮುನಿದರಿರುಳ ಆಟ 
ಜಂಟಿ ಸೋಲು 
ಜೇನು ಕೂಡ ಬಯಸುವಂಥ-
-ದವಳ ಸೊಲ್ಲು 

ಆಕೆ ಮುಡಿದ ಮಲ್ಲೆ 
ಅಲ್ಲೆ ದುಂಬಿ ಹಿಂಡು 
ಆಕೆ ಕಬ್ಬಿನ ಗದ್ದೆ 
ಕಬ್ಬ ಸಾಲು 

ಆಕೆಯೊಡನೆ ತೀರದ 
ಪ್ರಣಯ ಕ್ರಾಂತಿ 
ಸಂಕ್ರಮಣಕೆ ಆಕೆಯೇ 
ಸಾಕ್ಷಿ ಸ್ಪೂರ್ತಿ 

             -- ರತ್ನಸುತ

No comments:

Post a Comment

ಬರುವೆ ನಿನಗಾಗಿ

ಬರುವೆ ನಿನಗಾಗಿ  ಇರುವೆ ಜೊತೆಯಾಗಿ  ಪ್ರತಿ ಗಳಿಗೆ ಬೇಕಿದೆ ನಿನ್ನಾಸರೇ  ನೀನದೇ ಈ ಹಾಡು  ಹಿಡಿದು ಹೊಸ ಜಾಡು  ನಾ ಹಾಡುವೆನು ಕೂಡಿ ಬಾ ನೀ ಆದರೆ  ಬೆರೆತ ಮನದಲ್ಲಿ  ಪುಟಿ...