ದಡ್ಡನ್ ಪದ

ಕಪ್ಪು ಕಾಗೆ 
ಕೆಂಪು ನಾಲ್ಗೆ 
ಮಾತ್ನಾಗ್ ಬಣ್ಣ ಇಲ್ಲ 
ಗ್ವಾಡೆ ಸುಣ್ಣ 
ಮೈಗೆ ಬಳ್ದ್ರೆ 
ಬಾಳು ಬದ್ಲಾಗಲ್ಲ 

ದೀಪ ಹಚ್ಚಿ 
ಕಾವ್ಲಿಟ್ರೇನು 
ಗೂಬೆ ಹಗ್ಲಾಗ್ ಕುರ್ಡು 
ಹಾರಾಡೋ 
ಗುಬ್ಬಚ್ಚಿಗ್ಳ್ದು 
ಪಂಜರ್ಬಾಳು ಬರ್ಡು 

ಮೂಸೆ ಒಳ್ಗೆ 
ಇರೋ ತನ್ಕ 
ಹೆಗ್ಣ ಕೂಡ ಮುದ್ದು 
ಕತ್ತೆ ಬಾಲ 
ಎಳಿಯೋಕೋದ್ರೆ 
ಉತ್ರ ಕೊಡ್ತೈತ್ ಒದ್ದು 

ಕಾಡು ಚಂದ 
ಅಂತ ಹೋದ್ರೆ 
ನಾಡು ಮೃಗಗಳ್ ಬೀಡು 
ಎಲ್ಲ ಕಷ್ಟ 
ನಮ್ಗೆ ಅಲ್ಲ 
ಕಾಣು ಕಂಡೋರ್ ಪಾಡು 

ಸಕ್ರೆ ಬಿದ್ದ ಬಾಯಿ 
ಬೇವಿನ ರುಚಿ 
ಮರಿಬಾರ್ದಂತೆ 
ಜೀವ್ನ 
ಮೂರ್ದಿನದ್ ನಾಟ್ಕ 
ಯಾಕೆ ಚಿಂತೆ ಗಿಂತೆ?

ಸಣ್ಣೊನ್ ಸ್ವಾಮಿ 
ತ್ಯಪ್ಪಗಿದ್ರೆ 
ಹಿಡ್ದು ಬುದ್ದಿ ಹೇಳಿ 
ನಾನೂ ನಿಮ್ಮೋನೇಯ 
ಮಧ್ಯ 
ಹಾಕ್ಕೋಬ್ಯಾಡಿ ಬೇಲಿ....

               -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩