Monday 13 January 2014

ಜೀವನ ಶಾಲೆ

ಅಮ್ಮ ಬೆಳಕು 
ಅಪ್ಪ ಬದುಕು 
ತೋರಿ ಕೊಟ್ಟ ಗುರುಗಳು 
ಅಪ್ಪನೊಳಗೆ ಅಮ್ಮ-
-ಳೊಳಗೆ ಅಪ್ಪ
ಕಂಡೆ ಈಗಲೂ 

ಅಪ್ಪನೊಪ್ಪಿಸೋಕೆ 
ಅಮ್ಮ-
-ಳೊಪ್ಪಿಸೋಕೆ ಅಪ್ಪನು
ತಪ್ಪುಗಳಿಗೆ 
ಬೆತ್ತದೇಟು
ಇಬ್ಬರಿಂದ್ಲೂ ತಿಂದೆನು 

ಅಪ್ಪ ಬೆವರ 
ಸುರುಸಿ ಬೆಂದ 
ಅಮ್ಮ ಒಲೆಯ ಹಚ್ಚಲು 
ಅಮ್ಮ ಅನ್ನ-
-ವಿಟ್ಟು ನಮಗೆ
ಉಪ್ಪು ಗಂಜಿ ಕುಡಿದಳು 

ಹಂಚು 
ಚಪ್ಪರುಪ್ಪರಿಗೆ 
ಇಟ್ಟ ತೊಟ್ಟ ತೇವಕೆ 
ಕಂಬನಿ ವಜಾ
ಮತ್ತೆ ಸಾಲ 
ಬಡ್ತಿ ಲೆಕ್ಕಕೆ 

ಚಿಂತೆ ಸಂತೆ 
ಜೊಳ್ಳು ಮೂಟೆ 
ಹಬ್ಬ ನೂರು ಆದರೂ 
ದೇವರೆದುರು 
ಕೈ ಜೋಡಿಸೋಕೆ 
ಮುಂದುವರಿದರು 

ತತ್ತರ
ಥರ-ಥರ 
ಪ್ರಶ್ನೆಗಳೋ ಸಾಗರ 
ನಗೆ ವರ
ಚಾಮರ  
ಅದೇ ಸರ್ವಕುತ್ತರ 

            -- ರತ್ನಸುತ 

No comments:

Post a Comment

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...