ಹೃದಯ ನೀಡುವೆ ನಿನಗೆ
ಪ್ರೀತಿ ಉಳಿಸಿಕೊಂಡು
ಪ್ರಾಣವಾದರೂ ಬಿಡುವೆ
ಉಸಿರ ಎಳೆದುಕೊಂಡು
ಮಾತಿಗೆಳೆಯುವೆ ನಿನ್ನ
ದೂರ ಉಳಿದುಕೊಂಡು
ಹದ್ದು ಮೀರುವೆ ಮತ್ತೆ
ಸೀಮೆ ಎಳೆದುಕೊಂಡು
ಹಾಡು ಹಾಡುವೆ ನಿನಗೆ
ಮೂಕ ರಾಗದಲ್ಲಿ
ಗೆಜ್ಜೆ ಕಟ್ಟಲು ಬರುವೆ
ನಿನ್ನ ಸ್ವಪ್ನದಲ್ಲಿ
ಖಾಲಿಯಾಗುವೆ ನಾನು
ನಿನ್ನ ತುಂಬಲೆಂದು
ನೀಲಿಯಾಗುವೆ ನಿನ್ನ
ಆಸೆ ಬಾನಿಗೆಂದು
ಅಲ್ಲೇ ನಿಲ್ಲುವೆ ನೀ
ನಿಲ್ಲು ಅಂದ ಕಡೆಯೇ
ನಿಲ್ಲದಂತೆಯೇ ಬರೆವೆ
ನಿನ್ನ ನೆನೆದು ಬರೆಯೆ
ಮನಸ ನೀಡಿ ಕೇಳು
ಇದುವೆ ನನ್ನ ಕೊನೆಯ ಸಾಲು
ಜೀವ ತಾಳುವೆ ನೀ
ಮತ್ತೆ ಓದಿಕೊಳಲು
-- ರತ್ನಸುತ
ಪ್ರೀತಿ ಉಳಿಸಿಕೊಂಡು
ಪ್ರಾಣವಾದರೂ ಬಿಡುವೆ
ಉಸಿರ ಎಳೆದುಕೊಂಡು
ಮಾತಿಗೆಳೆಯುವೆ ನಿನ್ನ
ದೂರ ಉಳಿದುಕೊಂಡು
ಹದ್ದು ಮೀರುವೆ ಮತ್ತೆ
ಸೀಮೆ ಎಳೆದುಕೊಂಡು
ಹಾಡು ಹಾಡುವೆ ನಿನಗೆ
ಮೂಕ ರಾಗದಲ್ಲಿ
ಗೆಜ್ಜೆ ಕಟ್ಟಲು ಬರುವೆ
ನಿನ್ನ ಸ್ವಪ್ನದಲ್ಲಿ
ಖಾಲಿಯಾಗುವೆ ನಾನು
ನಿನ್ನ ತುಂಬಲೆಂದು
ನೀಲಿಯಾಗುವೆ ನಿನ್ನ
ಆಸೆ ಬಾನಿಗೆಂದು
ಅಲ್ಲೇ ನಿಲ್ಲುವೆ ನೀ
ನಿಲ್ಲು ಅಂದ ಕಡೆಯೇ
ನಿಲ್ಲದಂತೆಯೇ ಬರೆವೆ
ನಿನ್ನ ನೆನೆದು ಬರೆಯೆ
ಮನಸ ನೀಡಿ ಕೇಳು
ಇದುವೆ ನನ್ನ ಕೊನೆಯ ಸಾಲು
ಜೀವ ತಾಳುವೆ ನೀ
ಮತ್ತೆ ಓದಿಕೊಳಲು
-- ರತ್ನಸುತ
No comments:
Post a Comment